Log In
BREAKING NEWS >
ಉಡುಪಿಯ ಶ್ರೀಲಕ್ಷ್ಮೀವೆ೦ಕಟೇಶ ದೇವಸ್ಥಾನದಲ್ಲಿ ಸೆ.27ರಿ೦ದ ಮೊದಲ್ಗೊ೦ಡು ಅಕ್ಟೋಬರ್ 2 ರವರೆಗೆ ಶ್ರೀಶಾರದಾ ಮಹೋತ್ಸವ ಕಾರ್ಯಕ್ರಮ ಜರಗಲಿದೆ ಎ೦ದು ಶ್ರೀಶಾರದಾ ಮಹೋತ್ಸವ ಸಮಿತಿಯ ಪ್ರಕಟಣೆ ತಿಳಿಸಿದೆ.....

ರಾಹುಲ್‌ಗೂ ಸುತ್ತಿಕೊಂಡ ಲಲಿತ್‌ ವಿವಾದ

Modi-Rahulನವದೆಹಲಿ (ಐಎಎನ್ಎಸ್‌): ತಾವು ಐಪಿಎಲ್‌ ಮುಖ್ಯಸ್ಥರಾಗಿದ್ದ ಅವಧಿಯಲ್ಲಿ ಕಾಂಗ್ರೆಸ್‌ ಉಪಾಧ್ಯಕ್ಷ ರಾಹುಲ್‌ ಗಾಂಧಿ ಹಾಗೂ ಅವರ ಭಾವ ರಾಬರ್ಟ್‌ ವಾದ್ರಾ ತಮ್ಮ ಆತಿಥ್ಯ ಪಡೆದುಕೊಂಡಿದ್ದರು ಎಂದು ಲಲಿತ್‌ ಮೋದಿ ಹೊಸ ಆರೋಪ ಮಾಡಿದ್ದಾರೆ.

ಆದರೆ ಕಾಂಗ್ರೆಸ್‌ ಈ ಆರೋಪವನ್ನು ಅಲ್ಲಗಳೆದಿದೆ. ‘ಬಿಜೆಪಿಗೆ ಲಾಭ ಮಾಡಿಕೊಡುವುದಕ್ಕಾಗಿ ಲಲಿತ್‌ ಈ ರೀತಿ ಇಲ್ಲಸಲ್ಲದ ಆರೋಪ ಮಾಡುತ್ತಿದ್ದಾರೆ’ ಎಂದು ಆಕ್ಷೇಪಿಸಿದೆ. ತಮ್ಮ ಜತೆ ರಾಹುಲ್‌ ಹಾಗೂ ವಾದ್ರಾ  ಇರುವ ಕೆಲವು ಭಾವಚಿತ್ರಗಳನ್ನು ಲಲಿತ್‌ ಶುಕ್ರವಾರ ರಾತ್ರಿ ಟ್ವಿಟರ್‌ನಲ್ಲಿ ಹಾಕಿದ್ದಾರೆ. ಇವು ನಕಲಿ ಅಲ್ಲ; ಅಸಲಿ ಎಂದೂ ಅವರು ಸ್ಪಷ್ಟಪಡಿಸಿದ್ದಾರೆ.

ಐಪಿಎಲ್‌ ಪಂದ್ಯವೊಂದರ ಸಂದರ್ಭದಲ್ಲಿ ತೆಗೆದಿರುವಂತಿರುವ ಈ ಬಾಲಿವುಡ್‌ ನಟ ಶಾರೂಖ್‌ ಖಾನ್‌, ಅವರ ಪತ್ನಿ ಗೌರಿ ಖಾನ್‌ ಹಾಗೂ ನಟಿ ದೀಪಿಕಾ ಪಡುಕೋಣೆ ಸಹ ಇದ್ದಾರೆ. ‘ನೀವು ನನ್ನ ಆತಿಥ್ಯ ಸ್ವೀಕರಿಸಲಿಲ್ಲವೇ’ ಎಂದು ಲಲಿತ್‌ ಅವರು ರಾಹುಲ್‌ ಹಾಗೂ ವಾದ್ರಾ ಅವರನ್ನು ಟ್ವೀಟ್‌ನಲ್ಲಿಪ್ರಶ್ನಿಸಿದ್ದಾರೆ.

ಸಿಬಿಐ ತನಿಖೆಗೆ ಆಗ್ರಹ (ಭರತ್‌ಪುರ ವರದಿ): ವಸುಂಧರಾ ರಾಜೇ ಪುತ್ರ ದುಷ್ಯಂತ್‌ ಸಿಂಗ್‌ ಹಾಗೂ ಲಲಿತ್‌ ನಡುವಣ ಹಣಕಾಸು ವ್ಯವಹಾರವನ್ನು ಸಿಬಿಐ ತನಿಖೆಗೆ ಒಳಪಡಿಸಬೇಕು ಎಂದು ಎಐಸಿಸಿ ಪ್ರಧಾನ ಕಾರ್ಯದರ್ಶಿ ಗುರುದಾಸ್‌ ಕಾಮತ್‌ ಶನಿವಾರ ಆಗ್ರಹಿಸಿದ್ದಾರೆ.

ದೂರು ದಾಖಲು (ಪಟ್ನಾ ವರದಿ): ವಿದೇಶಾಂಗ ಸಚಿವೆ ಸುಷ್ಮಾ ಸ್ವರಾಜ್‌, ರಾಜಸ್ತಾನ ಮುಖ್ಯಮಂತ್ರಿ ವಸುಂಧರಾ ರಾಜೇ ಹಾಗೂ ಐಪಿಎಲ್‌ ಮಾಜಿ ಮುಖ್ಯಸ್ಥ ಲಲಿತ್‌ ಮೋದಿ ಅವರ ವಿರುದ್ಧ ಇಲ್ಲಿನ ಜಿಲ್ಲಾ ನ್ಯಾಯಾಲಯದಲ್ಲಿ ದೂರು ದಾಖಲಿಸಲಾಗಿದೆ. ‘ಫ್ರೆಂಡ್ಸ್‌ ಆಫ್‌ ಬಿಹಾರಿ’ ಸ್ವಯಂಸೇವಾ ಸಂಸ್ಥೆ ಮುಖ್ಯಸ್ಥ ವಿನಯ್‌ ಕುಮಾರ್‌ ಸಿಂಗ್‌ ಈ ದೂರು ಸಲ್ಲಿಸಿದ್ದಾರೆ.

No Comments

Leave A Comment