Log In
BREAKING NEWS >
ಉಡುಪಿಯ ಶ್ರೀಲಕ್ಷ್ಮೀವೆ೦ಕಟೇಶ ದೇವಸ್ಥಾನದಲ್ಲಿ ಸೆ.27ರಿ೦ದ ಮೊದಲ್ಗೊ೦ಡು ಅಕ್ಟೋಬರ್ 2 ರವರೆಗೆ ಶ್ರೀಶಾರದಾ ಮಹೋತ್ಸವ ಕಾರ್ಯಕ್ರಮ ಜರಗಲಿದೆ ಎ೦ದು ಶ್ರೀಶಾರದಾ ಮಹೋತ್ಸವ ಸಮಿತಿಯ ಪ್ರಕಟಣೆ ತಿಳಿಸಿದೆ.....

ಯುಪಿಎಸ್‌ಸಿ ಫಲಿತಾಂಶ ಪ್ರಕಟ, ರಾಜ್ಯದ 52 ಅಭ್ಯರ್ಥಿಗಳು ಆಯ್ಕೆ

upscನವದೆಹಲಿ: ಕೇಂದ್ರ ಲೋಕಸೇವಾ ಆಯೋಗ(ಯುಪಿಎಸ್‌ಸಿ) ನಡೆಸಿದ 2014ನೇ ಸಾಲಿನ ಸಿವಿಲ್ ಸರ್ವೀಸ್‌ ಪರೀಕ್ಷಾ ಫಲಿತಾಂಶ ಶನಿವಾರ ಪ್ರಕಟವಾಗಿದ್ದು, ರಾಜ್ಯದ 52ಕ್ಕೂ ಹೆಚ್ಚು ಅಭ್ಯರ್ಥಿಗಳು ಆಯ್ಕೆಯಾಗಿದ್ದಾರೆ.

ಸಿವಿಲ್ ಸರ್ವೀಸ್‌ಗೆ ಒಟ್ಟು 1,364 ಅಭ್ಯರ್ಥಿಗಳು ಆಯ್ಕೆಯಾಗಿದ್ದು, ಮೊದಲ ನಾಲ್ಕು ರ್ಯಾಂಕ್‌ಗಳನ್ನು ಮಹಿಳೆಯರೇ ಪಡೆದುಕೊಂಡಿದ್ದಾರೆ. ಐಎಎಸ್‌ನಲ್ಲಿ ಹೀರಾ ಸಿಂಘಾಲ್ ಪ್ರಥಮ ರ್ಯಾಂಕ್, ರೇಣು ರಾಜ್ ಎರಡನೇ ರ್ಯಾಂಕ್, ನಿಧಿ ಗುಪ್ತಾ ಮೂರನೇ ರ್ಯಾಂಕ್ ಹಾಗೂ ವಂದನಾ ರಾವ್ ಅವರು ನಾಲ್ಕನೇ ರ್ಯಾಂಕ್ ಪಡೆದಿದ್ದಾರೆ.

ಇನ್ನು ಸುಹರ್ಶ ಭಗತ್ 5ನೇ ರ್ಯಾಂಕ್, ಚಾರುಶಿ, ಲೋಕಬಂಧು 7ನೇ, ನಿತೀಶ್ 8ನೇ, ಆಶೀಶ್ ಕುಮಾರ್ 9ನೇ ಹಾಗೂ ಅರವಿಂದ್ ಸಿಂಗ್ 10ನೇ ರ್ಯಾಂಕ್ ಪಡೆದಿದ್ದಾರೆ.

No Comments

Leave A Comment