Log In
BREAKING NEWS >
ಉಡುಪಿಯ ಶ್ರೀಲಕ್ಷ್ಮೀವೆ೦ಕಟೇಶ ದೇವಸ್ಥಾನದಲ್ಲಿ ಸೆ.27ರಿ೦ದ ಮೊದಲ್ಗೊ೦ಡು ಅಕ್ಟೋಬರ್ 2 ರವರೆಗೆ ಶ್ರೀಶಾರದಾ ಮಹೋತ್ಸವ ಕಾರ್ಯಕ್ರಮ ಜರಗಲಿದೆ ಎ೦ದು ಶ್ರೀಶಾರದಾ ಮಹೋತ್ಸವ ಸಮಿತಿಯ ಪ್ರಕಟಣೆ ತಿಳಿಸಿದೆ.....

ಶಾಸಕಿಯಾಗಿ ಮುಖ್ಯಮಂತ್ರಿ ಜಯಾ ಪ್ರಮಾಣ/Jayalalithaa takes oath as MLA

Jayalalithaoath
ಚೆನ್ನೈ (ಪಿಟಿಐ): 
ಉತ್ತರ ಚೆನ್ನೈನ ರಾಧಾಕೃಷ್ಣನ್‌ ನಗರ ವಿಧಾನಸಭಾ ಕ್ಷೇತ್ರದಿಂದ ಅಭೂತ ಪೂರ್ವ ಗೆಲುವು ಕಂಡ ತಮಿಳುನಾಡು ಮುಖ್ಯಮಂತ್ರಿ ಜೆ.ಜಯಲಲಿತಾ ಅವರು ಶನಿವಾರ ಶಾಸಕಿಯಾಗಿ ಪ್ರಮಾಣ ವಚನ ಸ್ವೀಕರಿಸಿದರು.

ತಮಿಳುನಾಡು ವಿಧಾನಸಭೆಯಲ್ಲಿರುವ ತಮ್ಮ ಕೊಠಡಿಯಲ್ಲಿ ವಿಧಾನಸಭಾಧ್ಯಕ್ಷ ಪಿ.ಧನಪಾಲ್ ಅವರು ಜಯಾ ಅವರಿಗೆ ಪ್ರಮಾಣ ವಚನ ಬೋಧಿಸಿದರು.

ಜಯಾ ಅವರ ಸಂಪುಟದ ಸಹೋದ್ಯೋಗಿಗಳು ಈ ಕ್ಷಣಕ್ಕೆ ಸಾಕ್ಷಿಯಾದರು. ಆದಾಯ ಮೀರಿ ಆಸ್ತಿಗಳಿಕೆ ಪ್ರಕರಣ ಸಂಬಂಧ ಕಳೆದ ವರ್ಷ ಶಿಕ್ಷೆಗೆ ಗುರಿಯಾಗಿದ್ದ ಜಯಾ ಅವರ ಶಾಸಕತ್ವ ಅನರ್ಹಗೊಂಡಿತ್ತು. ಮುಖ್ಯಮಂತ್ರಿ ಪದವಿ ಕೈಬಿಟ್ಟು ಹೋಗಿತ್ತು.

ಪ್ರಕರಣ ಸಂಬಂಧ ಕಳೆದ ವರ್ಷದ ಸೆಪ್ಟೆಂಬರ್‌ನಲ್ಲಿ ಬೆಂಗಳೂರಿನ ವಿಶೇಷ ನ್ಯಾಯಾಲಯವು ಜಯಾ ಅವರನ್ನು ದೋಷಿ ಎಂದು ತೀರ್ಪು ನೀಡಿತ್ತು. ಆದರೆ, ನಂತರದಲ್ಲಿ ಕರ್ನಾಟಕ ಹೈಕೋರ್ಟ್‌ ಜಯಾ ಅವರನ್ನು ನಿರ್ದೋಷಿ ಎಂದು ತೀರ್ಪು ನೀಡಿದ್ದರಿಂದ ಜಯಾ ಅವರು ಮತ್ತೆ ಮುಖ್ಯಮಂತ್ರಿ ಪಟ್ಟಕ್ಕೆ ಏರಿದ್ದರು.

ಸಾಂವಿಧಾನಿಕ ಅಗತ್ಯವನ್ನು ಪೂರೈಸಲು ಜಯಾ ಅವರು ಇದೀಗ ಉಪ ಚುನಾವಣೆಯ ಮೂಲಕ ಮತ್ತೆ ತಮಿಳುನಾಡು ವಿಧಾನಸಭೆ ಶಾಸಕತ್ವ ಪಡೆದಿದ್ದಾರೆ.

Days after securing a thumping victory in the RK Nagar bypoll, Tamil Nadu Chief Minister J. Jayalalithaa on Saturday took oath as MLA.

Ms. Jayalalithaa took oath as Legislator in the presence of Speaker P. Dhanapal in his chamber inside the Tamil Nadu Assembly. Her cabinet colleagues were also present on the occasion.

The AIADMK supremo returns as Legislator after a gap of about 10 months, after she was disqualified as MLA and Chief Minister following her conviction in a wealth case by a Bengaluru trial court last September.

Ms. Jayalalithaa was subsequently acquitted by the Karnataka High Court in May following her appeal against the lower court verdict, allowing her to return as the Chief Minister.

Her party member P. Vetrivel had vacated the RK Nagar Assembly seat in May, resulting in a bypoll which Ms. Jayalalithaa won by a huge margin of 1,50,722 votes against her nearest rival, CPI’s C. Mahendran who forfeited his deposit.

The bypoll was held on June 27 and results were declared on June 30.

No Comments

Leave A Comment