Log In
BREAKING NEWS >
ಉಡುಪಿಯ ಶ್ರೀಲಕ್ಷ್ಮೀವೆ೦ಕಟೇಶ ದೇವಸ್ಥಾನದಲ್ಲಿ ಸೆ.27ರಿ೦ದ ಮೊದಲ್ಗೊ೦ಡು ಅಕ್ಟೋಬರ್ 2 ರವರೆಗೆ ಶ್ರೀಶಾರದಾ ಮಹೋತ್ಸವ ಕಾರ್ಯಕ್ರಮ ಜರಗಲಿದೆ ಎ೦ದು ಶ್ರೀಶಾರದಾ ಮಹೋತ್ಸವ ಸಮಿತಿಯ ಪ್ರಕಟಣೆ ತಿಳಿಸಿದೆ.....

ನಿಟ್ಟೂರು ಪ್ರೌಢ ಶಾಲೆ ವಿವಿಧ ಸಂಘಗಳ ಉದ್ಘಾಟನೆ

DSC_7848-(1)ಉಡುಪಿ : ನಿಟ್ಟೂರು ಪ್ರೌಢಶಾಲೆಯ ಶಾಲಾ ಸಂಸತ್ತು ಹಾಗೂ ವಿವಿಧ ಸಂಘಗಳ ಉದ್ಘಾಟನಾ ಸಮಾರಂಭ ಜುಲೈ 3ರಂದು ಜರಗಿತು.

ಮಿಲಾಗ್ರಿಸ್ ಕಾಲೇಜಿನ ನಿವೃತ್ತ ಉಪನ್ಯಾಸಕ ನಾರಾಯಣ ಎಂ.ಹೆಗಡೆ ಶಾಲಾ ಸಂಘಗಳನ್ನು ಉದ್ಘಾಟಿಸಿ ಶಾಲಾ ಸಂಸತ್ತಿನ ವಿವಿಧ ಪದಾಧಿಕಾರಿಗಳಿಗೆ ಪತಿಜ್ಞಾವಿಧಿ ಬೋಧಿಸಿ ವಿದ್ಯಾರ್ಥಿಗಳು ಶಾಲಾ ಸಂಘಗಳ ಸದುಪಯೋಗಪಡಿಸಬೇಕೆಂದು ಕರೆ ನೀಡಿದರು.

ಶಾಲೆಯ ಹಳೆ ವಿದ್ಯಾರ್ಥಿ ಪುತ್ತೂರು ದಿನೇಶ್ ಶೆಟ್ಟಿ ಮುಂಬಯಿ, ನಿಕಟಪೂರ್ವ ಮುಖ್ಯೋಪಾಧ್ಯಾಯ ಭಾಸ್ಕರ ಡಿ. ಸುವರ್ಣ ಎಲ್ಲಾ ಸಂಘಗಳ ಪದಾಧಿಕಾರಿಗಳಿಗೆ ಶುಭಹಾರೈಸಿದರು. ಮೂಖ್ಯೋಪಾಧ್ಯಾಯ ಮುರಲಿ ಕಡೆಕಾರ್ ಶಾಲೆಯಲ್ಲಿ ಹಮ್ಮಿಕೊಂಡ ವಿವಿಧ ಪಠ್ಯೇತರ ಚಟುವಟಿಕೆಗಳ ಕುರಿತು ಮಾತನಾಡಿದರು.

ಶಾಲಾ ಸರಕಾರದ ಸಂಯೋಜಕ ಅಶೋಕ ಎಂ. ವಿದ್ಯಾರ್ಥಿ ನಾಯಕ ರಮೇಶ್ ಉಪಸ್ಥಿತರಿದ್ದರು. ಶಿಕ್ಷಕ ಹೆಚ್.ಎನ್ ಶೃಂಗೇಶ್ವರ ಸ್ವಾಗತಿಸಿದರು.

ದೇವದಾಸ ಶೆಟ್ಟಿ ಕಾರ್ಯಕ್ರಮ ನಿರೂಪಿಸಿದರು. ಅನಸೂಯ ವಂದನಾಪಣೆಗೈದರು.88

No Comments

Leave A Comment