Log In
BREAKING NEWS >
ಉಡುಪಿಯ ಶ್ರೀಲಕ್ಷ್ಮೀವೆ೦ಕಟೇಶ ದೇವಸ್ಥಾನದಲ್ಲಿ ಸೆ.27ರಿ೦ದ ಮೊದಲ್ಗೊ೦ಡು ಅಕ್ಟೋಬರ್ 2 ರವರೆಗೆ ಶ್ರೀಶಾರದಾ ಮಹೋತ್ಸವ ಕಾರ್ಯಕ್ರಮ ಜರಗಲಿದೆ ಎ೦ದು ಶ್ರೀಶಾರದಾ ಮಹೋತ್ಸವ ಸಮಿತಿಯ ಪ್ರಕಟಣೆ ತಿಳಿಸಿದೆ.....

ಐಸಿಸ್ ಉಗ್ರರ ನೆರವಿನಿಂದ ಜೈಲಿನಿಂದ ಎಸ್ಕೇಪ್ ಆಗಲು ಭಟ್ಕಳ್ ಸಂಚು!

Yasinಹೈದರಾಬಾದ್: ಇಂಡಿಯನ್ ಮುಜಾಹಿದ್ದೀನ್ ಉಗ್ರ ಯಾಸಿನ್ ಭಟ್ಕಳ್ ಐಸಿಸ್ ಉಗ್ರರ ನೆರವಿನಿಂದ ಜೈಲಿನಿಂದ ತಪ್ಪಿಸಿಕೊಳ್ಳುವ ಸಂಚು ರೂಪಿಸಿದ್ದಾನೆಯೇ ಎಂಬ ಆತಂಕ ಅಧಿಕಾರಿಗಳನ್ನು ಕಾಡತೊಡಗಿದೆ. ಅದಕ್ಕೆ ಕಾರಣ ಏನು ಅಂದರೆ ದೆಹಲಿಯಲ್ಲಿರುವ ಪತ್ನಿ ಝಾಹಿದಾಗೆ ಹೈದರಾಬಾದ್ ಜೈಲಿನಿಂದಲೇ ಕರೆ ಮಾಡಿರುವ ಭಟ್ಕಳ್ ಹಲವಾರು ವಿಷಯಗಳ ಬಗ್ಗೆ ಮಾತನಾಡಿರುವ ಮಾಹಿತಿ ಗುಪ್ತಚರ ಇಲಾಖೆಗೆ ಲಭ್ಯವಾಗಿದೆ ಎಂದು ಟೈಮ್ ಆಫ್ ಇಂಡಿಯಾದ ವರದಿ ತಿಳಿಸಿದೆ.

ನಾನು ಕೂಡಲೇ ಐಸಿಸ್ ಉಗ್ರರ ನೆರವಿನಿಂದ ಹೊರಬರುತ್ತೇನೆ. ಜೈಲಿನಿಂದ ಹೊರ ಬಂದ ಕೂಡಲೇ ನಾವಿಬ್ಬರೂ ಡಮಾಸ್ಕಸ್(ಸಿರಿಯಾ ರಾಜಧಾನಿ, ಐಸಿಸ್ ಉಗ್ರರ ಹಿಡಿತದಲ್ಲಿರುವ ಸಿರಿಯಾ)ಗೆ ಹೋಗೋಣ ಎಂದು ಯಾಸಿನ್ ಭಟ್ಕಳ್ ಪತ್ನಿಗೆ ದೂರವಾಣಿ ಕರೆಯಲ್ಲಿ ತಿಳಿಸಿದ್ದಾನೆ.

ಸಿರಿಯಾ, ಇರಾಕ್ ನಲ್ಲಿ ಅಟ್ಟಹಾಸ ಮೆರೆಯುತ್ತಿರುವ ಐಸಿಸ್ ಉಗ್ರರು ಯಾಸಿನ್ ಭಟ್ಕಳ್ ನನ್ನು ಜೈಲಿನಿಂದ ತಪ್ಪಿಸಿಕೊಳ್ಳಲು ನೆರವು ನೀಡಬಹುದೇ ಎಂಬ ಆತಂಕ ಗುಪ್ತಚರ ಇಲಾಖೆ ಅಧಿಕಾರಿಗಳಿಗೆ ಕಾಡತೊಡಗಿದೆ. ಈ ಹಿನ್ನೆಲೆಯಲ್ಲಿ ಯಾಸಿನ್ ಭಟ್ಕಳ್ ಇರುವ ಹೈದರಾಬಾದ್ ನ ಚರ್ಲಪಲ್ಲಿ ಜೈಲಿನಲ್ಲಿ ಭದ್ರತೆಯನ್ನು ಮತ್ತಷ್ಟು ಬಿಗಿಗೊಳಿಸಲಾಗಿದೆ ಎಂದು ವರದಿ ಹೇಳಿದೆ.

ಯಾಸಿನ್ ಭಟ್ಕಳನನ್ನು ಸುರಕ್ಷಿತ ಸ್ಥಳದಲ್ಲಿ ಇರಿಸುವ ಬಗ್ಗೆ ಅಧಿಕಾರಿಗಳು ಸಿದ್ಧತೆ ನಡೆಸುತ್ತಿದ್ದಾರೆ ಎನ್ನಲಾಗಿದೆ. ಯಾಸಿನ್ ಸುಮಾರು ಐದು ನಿಮಿಷಗಳ ಕಾಲ ನಡೆಸಿರುವ ಮಾತುಕತೆ ಅಧಿಕಾರಿಗಳನ್ನು ಆತಂಕಕ್ಕೆ ದೂಡಿದೆ. ಅಷ್ಟೇ ಅಲ್ಲ ಯಾಸಿನ್ ಜೈಲಿನಿಂದಲೇ ದೂರವಾಣಿ ಕರೆ ಮಾಡಿ ಭದ್ರತೆಯ ನಿಯಮ ಉಲ್ಲಂಘನೆ ಮಾಡಿದ್ದು, ಈ ಬಗ್ಗೆ ರಾಷ್ಟ್ರೀಯ ತನಿಖಾ ದಳ ತೀವ್ರಗತಿಯಲ್ಲಿ ತನಿಖೆ ನಡೆಸುತ್ತಿದ್ದಾರೆ.

No Comments

Leave A Comment