Log In
BREAKING NEWS >
ಉಡುಪಿಯ ಶ್ರೀಲಕ್ಷ್ಮೀವೆ೦ಕಟೇಶ ದೇವಸ್ಥಾನದಲ್ಲಿ ಸೆ.27ರಿ೦ದ ಮೊದಲ್ಗೊ೦ಡು ಅಕ್ಟೋಬರ್ 2 ರವರೆಗೆ ಶ್ರೀಶಾರದಾ ಮಹೋತ್ಸವ ಕಾರ್ಯಕ್ರಮ ಜರಗಲಿದೆ ಎ೦ದು ಶ್ರೀಶಾರದಾ ಮಹೋತ್ಸವ ಸಮಿತಿಯ ಪ್ರಕಟಣೆ ತಿಳಿಸಿದೆ.....

ಮಂಗಳೂರು :ಸರ ಕಸಿದು ಪರಾರಿ- ಆರೋಪಿಯ ಬಂಧನ

Crime-ಮಂಗಳೂರು : ರಸ್ತೆಯಲ್ಲಿ ನಡೆದುಹೋಗುತ್ತಿದ್ದ ಮಹಿಳೆಯರ ಕುತ್ತಿಗೆಯಿಂದ ಚಿನ್ನದ ಸರಗಳನ್ನು ಕಸಿದು ಪರಾರಿಯಾಗುತ್ತಿರುವ ಘಟನೆಗಳು ಇದುವರೆಗೆ ನಡೆಯುತ್ತಿದ್ದರೆ ಇದೀಗ ದುಷ್ಕರ್ಮಿಗಳು ಪುರುಷರ ಕುತ್ತಿಗೆಯತ್ತಲೂ ದೃಷ್ಟಿ ಹಾಯಿಸತೊಡಗಿದ್ದಾರೆ. ನಗರದ ಪುರಭವನದ ಬಳಿ ವ್ಯಕ್ತಿಯೋರ್ವರ ಕುತ್ತಿಗೆಯಿಂದ ಚಿನ್ನದ ಸರ ಎಳೆದು ಪರಾರಿಯಾಗಿರುವ ಘಟನೆ ಬುಧವಾರ ರಾತ್ರಿ ನಡೆದಿದ್ದು ಸರಕಸಿದು ಪರಾರಿಯಾಗಿರುವ ಕಳ್ಳ ಗುರುವಾರ ನಗರದ ಕೆಎಸ್‌ಆರ್‌ಟಿಸಿ ಬಸ್‌ನಿಲ್ದಾಣದ ಬಳಿಯಲ್ಲಿ ಪೊಲೀಸರ ಕೈಗೆ ಸಿಕ್ಕಿಬಿದ್ದಿದ್ದಾನೆ.

ಅಜಯ್‌ ಎಂಬವರು ರಾತ್ರಿ ಸುಮಾರು 8.30 ರ ವೇಳೆಗೆ ಹಂಪನಕಟ್ಟೆಯ ಹಿಂದಿನ ಕ್ಲಾಕ್‌ಟವರ್‌ ಬಳಿ ಸ್ಕೂಟರ್‌ ಪಾರ್ಕ್‌ ಮಾಡಿ ಗಾಂಧಿಪಾರ್ಕ್‌ ಹಾಗೂ ಪುರಭವನದ ಮಧ್ಯೆ ಇರುವ ಕಾಲುದಾರಿಯಲ್ಲಿ ನಡೆದುಕೊಂಡು ಹೋಗುತ್ತಿದ್ದಾಗ ಓರ್ವ ಅಪರಿಚಿತ ವ್ಯಕ್ತಿ ಹಿಂದಿನಿಂದ ಬಂದು ಅವರ ಕುತ್ತಿಗೆಗೆ ಕೈಹಾಕಿ 12 ಗ್ರಾಂ. ತೂಕದ ಸುಮಾರು 28,000 ರೂ.ಮೌಲ್ಯದ ಚಿನ್ನದ ಸರವನ್ನು ಕಸಿದು ಪರಾರಿಯಾಗಿದ್ದ . ಮಂಗಳೂರು ದಕ್ಷಿಣ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದರು.

ಖಚಿತ ಮಾಹಿತಿಯನ್ವಯ ಗುರುವಾರ ಕಾರ್ಯಾಚರಣೆ ನಡೆಸಿದ ಪೊಲೀಸರು ಚಿನ್ನದ ಸರ ಕಸಿದು ಪರಾರಿಯಾಗಿದ್ದ ಆರೋಪಿ ಎಡ್ವಿನ್‌ ದಿನೇಶ್‌ ಕುಮಾರ್‌ ಎಂಬಾತನನ್ನು ಕೆಎಸ್‌ಆರ್‌ಟಿಸಿ ಬಸ್‌ನಿಲ್ದಾಣದ ಬಳಿ ವಶಕ್ಕೆ ಪಡೆದುಕೊಂಡು ಆತನಿಂದ ಚಿನ್ನದ ಸರವನ್ನು ಸ್ವಾಧೀನ ಪಡಿಸಿಕೊಂಡರು.

No Comments

Leave A Comment