Log In
BREAKING NEWS >
ಉಡುಪಿಯ ಶ್ರೀಲಕ್ಷ್ಮೀವೆ೦ಕಟೇಶ ದೇವಸ್ಥಾನದಲ್ಲಿ ಸೆ.27ರಿ೦ದ ಮೊದಲ್ಗೊ೦ಡು ಅಕ್ಟೋಬರ್ 2 ರವರೆಗೆ ಶ್ರೀಶಾರದಾ ಮಹೋತ್ಸವ ಕಾರ್ಯಕ್ರಮ ಜರಗಲಿದೆ ಎ೦ದು ಶ್ರೀಶಾರದಾ ಮಹೋತ್ಸವ ಸಮಿತಿಯ ಪ್ರಕಟಣೆ ತಿಳಿಸಿದೆ.....

ಸಾಮಾಜಿಕ ಮಾಧ್ಯಮಗಳಲ್ಲಿ ಸತ್ಯಾನ್ವೇಷಣೆಯೇ ದೊಡ್ಡ ಸವಾಲು

DSC_0658ಸಾಮಾಜಿಕ ಮಾಧ್ಯಮಗಳ ಯುಗದಲ್ಲಿ ಈಗ ಎಲ್ಲರೂ ಪತ್ರಕರ್ತರೇ. ಗಾಳಿಗಿಂತಲೂ ವೇಗದಲ್ಲಿ ಸುದ್ದಿಗಳು ಹಬ್ಬುತ್ತಿವೆ. ಆದರೆ ಅವುಗಳ ಸತ್ಯಾಸತ್ಯತೆಯನ್ನು ಪರಿಶೀಲಿಸುವುದೇ ಇಂದಿನ ಸವಾಲು ಎಂದು ಕಸ್ತೂರಿ ಸುದ್ಧಿ ವಾಹಿನಿಯ ರಹೀಂ ಉಜಿರೆ ಹೇಳಿದರು.

ಉಡುಪಿ ಎಂ.ಜಿ.ಎಂ ಕಾಲೇಜಿನ ಪತ್ರಿಕೋದ್ಯಮ ವಿಭಾಗ ಏರ್ಪಡಿಸಿದ್ದ ಪತ್ರಿಕಾ ದಿನಾಚರಣೆಯಲ್ಲಿ ಮುಖ್ಯ ಅತಿಥಿಯಾಗಿ ಆಗಮಿಸಿ ಅವರು ಮಾತನಾಡಿದರು. ನಮ್ಮ ಸುತ್ತಮುತ್ತ ನಡೆಯುವ ಘಟನೆಗಳಿಗೆ ಪತ್ರಕರ್ತನಾದವನು ಪ್ರತಿಕ್ರಿಯಿಸುತ್ತಾ ಇರಬೇಕು. ಸಾಮಾಜಿಕ ಹಾಗೂ ಮಾನವೀಯ ಸ್ಪಂಧನೆ ಪತ್ರಕರ್ತನ ಮುಖ್ಯ ಲಕ್ಷಣ ಎಂದು ಹೇಳಿದರು.

ಪ್ರಾಂಶುಪಾಲೆ ಕುಸುಮಾ ಕಾಮತ್ ಅಧ್ಯಕ್ಷತೆ ವಹಿಸಿದ್ದರು. ಸುವರ್ಣ ಸುದ್ಧಿವಾಹಿನಿಯ ವರದಿಗಾರ ಶಶಿಧರ ಮಾಸ್ತಿಬೈಲು, ಛಾಯಾಗ್ರಾಹಕ ಹರೀಶ್, ಟಿ.ವಿ ವರದಿಗಾರ ಅಶೋಕ್, ಹರ್ಷರಾಜ್ ವಿದ್ಯಾರ್ಥಿಗಳೊಂದಿಗೆ ಸಂವಾದ ನಡೆಸಿದರು. ವಿಭಾಗದ ಮುಖ್ಯಸ್ಥ ಮಂಜುನಾಥ್ ಕಾಮತ್, ಉಪನ್ಯಾಸಕ ಸುಚಿತ್ ಕೋಟ್ಯಾನ್ ಉಪಸ್ಥಿತರಿದ್ದರು.

ತೃತೀಯ ಬಿ.ಎ ಪತ್ರಿಕೋದ್ಯಮ ವಿದ್ಯಾರ್ಥಿ ಕಿರಣ್ ಕಾರ್ಯಕ್ರಮ ನಿರೂಪಿಸಿದರು. ನಿಖಿತಾ ಸ್ವಾಗತಿಸಿದರು. ವೃಂದಾ ಪ್ರಾಸ್ತಾವಿಕ ಮಾತನಾಡಿದರು. ಅಕ್ಷಿತ್ ಕುಮಾರ್ ವಂದಿಸಿದರು.

No Comments

Leave A Comment