Log In
BREAKING NEWS >
ಉಡುಪಿಯ ಶ್ರೀಲಕ್ಷ್ಮೀವೆ೦ಕಟೇಶ ದೇವಸ್ಥಾನದಲ್ಲಿ ಸೆ.27ರಿ೦ದ ಮೊದಲ್ಗೊ೦ಡು ಅಕ್ಟೋಬರ್ 2 ರವರೆಗೆ ಶ್ರೀಶಾರದಾ ಮಹೋತ್ಸವ ಕಾರ್ಯಕ್ರಮ ಜರಗಲಿದೆ ಎ೦ದು ಶ್ರೀಶಾರದಾ ಮಹೋತ್ಸವ ಸಮಿತಿಯ ಪ್ರಕಟಣೆ ತಿಳಿಸಿದೆ.....

ಕೇಜ್ರಿವಾಲ್‌ ಮನೇಲಿ 30 ಎಸಿ: ಜೂನ್‌ ಕರೆಂಟ್‌ ಬಿಲ್‌ 1.35 ಲಕ್ಷ

47922525ಹೊಸದಿಲ್ಲಿ: ‘ಆಮ್‌ ಆದ್ಮಿ’ ಎನ್ನಿಸಿಕೊಂಡು ದಿಲ್ಲಿ ಮತದಾರರ ಮನಗೆದ್ದು ಮುಖ್ಯಮಂತ್ರಿಯಾಗಿರುವ ಅರವಿಂದ ಕೇಜ್ರಿವಾಲ್‌ ಮನೆಯಲ್ಲಿ 30 ಎಸಿಗಳಿದ್ದು, ಅವರ ತಿಂಗಳ ವಿದ್ಯುತ್‌ ಬಿಲ್‌ 1.35 ಲಕ್ಷ ರೂ! 

ಇದು -6, ಫ್ಲ್ಯಾಗ್ ಸ್ಟಾಫ್ ರಸ್ತೆ, ಸಿವಿಲ್ ಲೈನ್ಸ್, ದಿಲ್ಲಿಯಲ್ಲಿರುವ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಅವರ ಅಧಿಕೃತ ನಿವಾಸದ ಕತೆ. ಇಲ್ಲಿನ ಎರಡು ಮೀಟರ್‌ಗಳಲ್ಲಿ ಬಂದಿರುವ ಬಿಲ್‌ನ ಒಟ್ಟು ಮೊತ್ತ ಮಾತ್ರ 1.35 ಲಕ್ಷ ರೂ. ಖರ್ಚಾಗಿರುವ ಅಷ್ಟೂ ವಿದ್ಯುತ್‌ನಲ್ಲಿ ಕೇಜ್ರಿವಾಲ್‌ ಅವರು ಸಾರ್ವಜನಿಕ ಕೆಲಸಕ್ಕಾಗಿ ಬಳಸಿದ ವಿದ್ಯುತ್‌ ಎಷ್ಟು, ಖಾಸಗಿಗೆ ಬಳಸಿದ್ದೆಷ್ಟು ಎನ್ನುವುದೂ ಖಚಿತವಾಗಿಲ್ಲ. 

ಒಂದೆಡೆ ವಿದ್ಯುತ್‌ ಉಳಿಸುವ ಬಗ್ಗೆ ಮಾತನಾಡುತ್ತ ಮಾಧ್ಯಮದಲ್ಲಿ ಪ್ರಚಾರ ತೆಗೆದುಕೊಳ್ಳುತ್ತಿರುವ ಕೇಜ್ರಿವಾಲ್‌, ಇನ್ನೊಂದೆಡೆ ಹೀಗೆ ವಿದ್ಯುತ್‌ ಪೋಲು ಮಾಡುತ್ತಿರುವುದು ತೀವ್ರ ಚರ್ಚೆಗೆ ಕಾರಣವಾಗಿದೆ. ಜೂನ್ ತಿಂಗಳಲ್ಲಿ ಬಂದಿರುವ ಭರ್ಜರಿ ವಿದ್ಯುತ್‌ ಬಿಲ್‌ ಆಮ್‌ ಆದ್ಮಿ ಪಕ್ಷದ ನೇತೃತ್ವದ ಸರಕಾರ ಹಾಗೂ ಸಿಎಂಗೆ ಮುಜುಗರ ಉಂಟು ಮಾಡಿದೆಯೇ ಗೊತ್ತಿಲ್ಲ. 

ಏತನ್ಮಧ್ಯೆ, ಕಚೇರಿಗೆಂದು ಬಳಸುತ್ತಿರುವ ಮೀಟರ್‌ ವಾಣಿಜ್ಯ ಉದ್ದೇಶವೆಂದು ಪರಿಗಣಿತವಾಗುವುದರಿಂದ ದಿಲ್ಲಿ ಸಿಎಂ ನಿವಾಸಕ್ಕೆ ಈ ಸಂಬಂಧ ನೋಟಿಸ್‌ ನೀಡಲು ದಿಲ್ಲಿಯ ಟಾಟಾ ಪವರ್ ಕಚೇರಿ ಚಿಂತಿಸುತ್ತಿದೆ ಎಂದು ತಿಳಿದುಬಂದಿದೆ. ತಮಗೆ ತಪ್ಪು ಮಾಹಿತಿ ನೀಡಿ ವಿದ್ಯುತ್‌ ಬಳಸುತ್ತಿದ್ದಾರೆ ಎನ್ನುವುದು ಆ ಸಂಸ್ಥೆಯ ಆಕ್ರೋಶಕ್ಕೆ ಕಾರಣ. 

ಅಧಿಕೃತ ಮೂಲಗಳ ಪ್ರಕಾರ ದಿಲ್ಲಿ ಸಿಎಂ ಅಧಿಕೃತ ನಿವಾಸಕ್ಕೆ ಎರಡು ವಿದ್ಯುತ್‌ ಮೀಟರ್‌ಗಳನ್ನು ಅಳವಡಿಸಲಾಗಿದೆ. ಒಂದು 34 ಕೆವಿ ಲೋಡ್‌ ಭರಿಸಬಲ್ಲದು. ಇದು ಗೃಹ ಬಳಕೆಗೆ ಮೀಸಲು. ಇನ್ನೊಂದು 70 ಕೆವಿ ಸಾಮರ್ಥ್ಯ ಇರುವಂಥದ್ದು. ಇದು ಸಿಎಂ ಕಚೇರಿ ಬಳಕೆಗೆ ಮೀಸಲು. ಇಲ್ಲಿ ಜನತಾ ದರ್ಬಾರ್‌ ಸೇರಿದಂತೆ ಸಿಎಂ ಅವರ ಅಧಿಕೃತ ಸಭೆ, ಮೀಟಿಂಗ್‌ಗಳು ನಡೆಯುತ್ತವೆ.

ಸಿಎಂ ಕೇಜ್ರಿವಾಲ್‌ ಈ ನಿವಾಸಕ್ಕೆ ಏಪ್ರಿಲ್‌ನಲ್ಲಿ ಆಗಮಿಸಿದ್ದರು. ಅದಕ್ಕೂ ಮುನ್ನ ಈ ಎರಡೂ ಮೀಟರ್‌ಗಳ ಮೇಲೆ 70 ಕೆವಿ ಲೋಡ್‌ ಇತ್ತು. ನೂತನ ಸಿಎಂ ಆಗಮನದ ಬಳಿಕ ಅದನ್ನು 104ಕೆವಿಗೇರಿಸಲು ಲೋಕೋಪಯೋಗಿ ಇಲಾಖೆ ಅರ್ಜಿ ಸಲ್ಲಿಸಿತ್ತು. ಅದರಲ್ಲಿ ಎರಡೂ ಮೀಟರ್‌ಗಳನ್ನು ಗೃಹ ಬಳಕೆಗೆ ಬಳಸುವುದೆಂದೇ ನಮೂದಿಸಲಾಗಿತ್ತು ಎಂದು ಮೂಲಗಳು ತಿಳಿಸಿವೆ. 

ಸಿಎಂ ಅಧಿಕೃತ ನಿವಾಸದ ಒಂದು ಮೀಟರ್‌ 2,510 ಯೂನಿಟ್‌ ವಿದ್ಯುತ್‌ ಬಳಸಿದ್ದು, 22,689 ರೂ. ಬಿಲ್‌ ಬಂದಿದೆ. ಇನ್ನೊಂದು ಮೀಟರ್‌ನಲ್ಲಿ 11,637 ಯೂನಿಟ್‌ ವಿದ್ಯುತ್‌ ಖರ್ಚಾಗಿದ್ದು 1,13,598 ರೂ. ಬಿಲ್‌ ಬಂದಿದೆ. ಮೊದಲನೆ ಬಿಲ್‌ ಕಟ್ಟಲು ಅಂತಿಮ ದಿನ ಜೂನ್‌ 8, 2015 ಹಾಗೂ ಎರಡನೇ ಬಿಲ್‌ ಕಟ್ಟಲು ಜೂನ್‌ 8, 2015 ಕೊನೆಯ ದಿನವಾಗಿತ್ತು. 

ಮೂಲಗಳ ಪ್ರಕಾರ ಸಿಎಂ ಮನೆಯಲ್ಲಿ 30ಕ್ಕೂ ಅಧಿಕ ವಾತಾನುಕೂಲಿತ ಎಸಿಗಳಿವೆ. ಇದೀಗ ವಿವಾದಕ್ಕೆ ಕಾರಣವಾಗಿದೆ. ಈ ಹಿಂದಿನ ಸಿಎಂ ಶೀಲಾ ದೀಕ್ಷಿತ್‌ ವಿರುದ್ಧವೂ ಅತಿಯಾದ ಎಸಿ ಬಳಕೆಯ ಆರೋಪಗಳಿದ್ದವು. ಆಗ ಕೇಜ್ರಿವಾಲ್‌, ಶೀಲಾ ದೀಕ್ಷಿತ್‌ ವಿರುದ್ಧ ಇದೇ ವಿಚಾರದಲ್ಲಿ ವಾಗ್ದಾಳಿ ನಡೆಸುತ್ತಿದ್ದರು.

No Comments

Leave A Comment