Log In
BREAKING NEWS >
ಉಡುಪಿಯ ಶ್ರೀಲಕ್ಷ್ಮೀವೆ೦ಕಟೇಶ ದೇವಸ್ಥಾನದಲ್ಲಿ ಸೆ.27ರಿ೦ದ ಮೊದಲ್ಗೊ೦ಡು ಅಕ್ಟೋಬರ್ 2 ರವರೆಗೆ ಶ್ರೀಶಾರದಾ ಮಹೋತ್ಸವ ಕಾರ್ಯಕ್ರಮ ಜರಗಲಿದೆ ಎ೦ದು ಶ್ರೀಶಾರದಾ ಮಹೋತ್ಸವ ಸಮಿತಿಯ ಪ್ರಕಟಣೆ ತಿಳಿಸಿದೆ.....

ಮುಂಬಯಿಯಲ್ಲಿ ಪ್ರತಿ ತಿಂಗಳು 884 ಜನ ನಾಪತ್ತೆ

47922862ಮುಂಬಯಿ: ಕಳೆದೊಂದು ದಶಕದಿಂದ ಮುಂಬಯಿ ನಗರದಲ್ಲಿ ಪ್ರತಿ ತಿಂಗಳು ಸರಾಸರಿ 884 ಮಂದಿ ಕಾಣೆಯಾಗುತ್ತಿದ್ದು, ಅವರ ಪೈಕಿ ಬಹುತೇಕರನ್ನು ಪೋಲಿಸರು ಪತ್ತೆ ಹಚ್ಚುತ್ತಿದ್ದಾರಂತೆ. 

ಮುಂಬಯಿ ಪೊಲೀಸರು ಬಿಡುಗಡೆ ಮಾಡಿರುವ ಅಂಕಿ ಅಂಶಗಳ ಪ್ರಕಾರ ನಾಪತ್ತೆಯಾಗುವವರ ಪೈಕಿ ಹೆಚ್ಚಿನವರ ಅಪ್ತಾಪ್ತ ಬಾಲಕಿಯರು. ಆದರೆ ಅವರಲ್ಲಿ ಅನೇಕರನ್ನು ಪೊಲೀಸರು ಪತ್ತೆ ಹಚ್ಚಿ ವಾಪಸ್‌ ಕರೆತಂದಿದ್ದಾರಂತೆ. 

ಅಂಕಿ ಅಂಶಗಳ ಪ್ರಕಾರ, ಕಳೆದ 10.5 ವರ್ಷಗಳಲ್ಲಿ 1,10,547 ಮಂದಿ ವಿರುದ್ಧ ನಾಪತ್ತೆ ಪ್ರಕರಣ ದಾಖಲಾಗಿದೆ. ಆ ಪೈಕಿ 1,00,439 ಜನರನ್ನು ಪತ್ತೆ ಹಚ್ಚಲಾಗಿದೆ. 10,108 ಮಂದಿ ಇನ್ನೂ ಕಾಣೆಯಾಗಿದ್ದು ಪತ್ತೆಹಚ್ಚಲಾಗಿಲ್ಲ. 

ಮುಂಬಯಿ ಪೊಲೀಸ್‌ನ ಸಿಐಡಿ ಕ್ರೈಂ ಬ್ರಾಂಚ್‌ ಈ ಸಂಬಂಧ ದಾಖಲೆಗಳನ್ನು ಬಿಡುಗಡೆ ಮಾಡಿದ್ದು, 2005 ಜನವರಿಯಿಂದ ಮೇ 2015ರವರೆಗಿನ ಕಾಣೆಯಾದವರ ವಿವರ ನೀಡಲಾಗಿದೆ. ಕಾಣೆಯಾದ ಪುರುಷರಿಗೆ ಹೋಲಿಸಿದರೆ ಮಹಿಳೆಯರು, ಅಪ್ರಾಪ್ತ ಬಾಲಕಿಯರದ್ದೇ ಮೇಲುಗೈ. ಕಳೆದ ಹತ್ತು ವರ್ಷಗಳಲ್ಲಿ 18.547 ಬಾಲಕಿಯರು ಹಾಗೂ 37.603 ಮಹಿಳೆಯರು ಕಾಣೆಯಾಗಿದ್ದರೆ, 17.195 ಬಾಲಕರು ಮತ್ತು 37.202 ಪುರುಷರು ನಾಪತ್ತೆಯಾಗಿದ್ದಾರೆ. 

ಶೇ.90ರಷ್ಟು ಪ್ರಕರಣಗಳನ್ನು ನಾವು ಪತ್ತೆಹಚ್ಚಿದ್ದೇವೆ ಎಂದು ಪೊಲೀಸರು ಹೇಳಿಕೊಳ್ಳುತ್ತಿದ್ದು, ಪ್ರತಿ ತಿಂಗಳು 884ರಲ್ಲಿ 803 ಮಂದಿಯನ್ನು ಹುಡುಕಿದ್ದೇವೆ ಎಂದು ದಾಖಲಿಸಿದ್ದಾರೆ. ಮೇ 2015ರವರೆಗೆ 582 ಅಪ್ರಾಪ್ತ ಬಾಲಕಿಯರು ಮತ್ತು 2,944 ಮಹಿಳೆಯರು ಇನ್ನೂ ಪತ್ತೆಯಾಗಿಲ್ಲ ಎನ್ನುತ್ತವೆ ದಾಖಲೆಗಳು. 

ಉತ್ತರ ಮುಂಬಯಿಯ ಹೆಚ್ಚುವರಿ ಪೊಲೀಸ್ ಆಯುಕ್ತ, ಫತ್ತೆಸಿಂಗ್‌ ಪಾಟೀಲ್ ಅವರ ಪ್ರಕಾರ, ಮುಂಬಯಿಯ ಶೇ.50ರಷ್ಟು ಜನ ಕೊಳೆಗೇರಿಗಳಲ್ಲಿ ವಾಸಿಸುತ್ತಿದ್ದಾರೆ. ಕಾಣೆಯಾದವರ ಪೈಕಿ ಬಹುತೇಕರು ಕೊಳಚೆ ಪ್ರದೇಶಗಳಲ್ಲಿ ವಾಸಿಸುವರೇ ಆಗಿದ್ದಾರೆ. ತಮ್ಮ ಭಾಗದಲ್ಲಿ ಕಾಣೆಯಾದವರ ಪತ್ತೆ ಪ್ರಮಾಣ ಶೇ.97ರಷ್ಟಿದೆ. ಆಧುನಿಕ ತಂತ್ರಜ್ಞಾನಗಳ ಬಳಕೆ ಹಾಗೂ ಸಾಮಾಜಿಕ ಜಾಲತಾಣಗಳ ನೆರವಿನಿಂದ ಪತ್ತೆ ಕಾರ್ಯ ಸುಲಲಿತವಾಗಿದೆ.

No Comments

Leave A Comment