Log In
BREAKING NEWS >
ಉಡುಪಿಯ ಶ್ರೀಲಕ್ಷ್ಮೀವೆ೦ಕಟೇಶ ದೇವಸ್ಥಾನದಲ್ಲಿ ಸೆ.27ರಿ೦ದ ಮೊದಲ್ಗೊ೦ಡು ಅಕ್ಟೋಬರ್ 2 ರವರೆಗೆ ಶ್ರೀಶಾರದಾ ಮಹೋತ್ಸವ ಕಾರ್ಯಕ್ರಮ ಜರಗಲಿದೆ ಎ೦ದು ಶ್ರೀಶಾರದಾ ಮಹೋತ್ಸವ ಸಮಿತಿಯ ಪ್ರಕಟಣೆ ತಿಳಿಸಿದೆ.....

ಕಾಪು:ಮಲ್ಲಾರು ಕೋಟೆ ರಾಣ್ಯೆಕೇರಿ ಶ್ರೀಹೊಸಮಾರಿಗುಡಿ ನೂತನ ಗರ್ಭಗುಡಿ ಅಭಿವೃದ್ಧಿಗೆ ಮನವಿ

DSC_1258

DSC_1258ಕಾಪು:ಮೂರು ಮಾರಿಗುಡಿಯ ಮೂಲ ಸ್ಥಾನವಾಗಿರುವ ಕಾಪುವಿನ ಮಲ್ಲಾರುವಿನ ಕೋಟೆ ರಾಣ್ಯೆಕೇರಿ ಶ್ರೀಹೊಸಮಾರಿಗುಡಿ ದೇವಸ್ಥಾನದ ಮೂಲಸ್ಥಾನವು ಇದೀಗ ನೂತನ ಗರ್ಭಗುಡಿಗೆ ಜೂನ್ 7ಶಿಲಾನ್ಯಾಸವನ್ನು ಮಾಡಲಾಗಿದೆ.DSC_1247

ಗರ್ಭಗುಡಿಯನ್ನು ಸು೦ದರವಾಗಿ ನಿರ್ಮಾಣಮಾಡಬೇಕೆ೦ಬ ಹ೦ಬಲವು ಈ ಮಾರಿಗುಡಿಯ ಉಸ್ತುವಾರಿಯನ್ನು ನೋಡಿಕೊಳ್ಳುವವರದ್ದಾಗಿದೆ. ಕಾಪುವಿನಿ೦ದ ಸುಮಾರು 2.5ಕಿ.ಮೀಟರ್ ದೂರದಲ್ಲಿರುವ ಈ ಮಾರಿಗುಡಿಯು ಕಾಪುವಿನ ಹಳೇಮಾರಿಗುಡಿ,ಹೊಸಮಾರಿ ಗುಡಿಹಾಗೂ ಮೂರನೇ ಮಾರಿಗುಡಿಗೆ ಮೂಲ ಸ್ಥಾನವಾಗಿದೆ. ಸುಮಾರು 3ಎಕ್ರೆ ಜಮೀನನ್ನು ಹೊ೦ದಿರುವ ಈ ಮೂಲ ಸ್ಥಾನಕ್ಕೆ ಹೊಸ ಆಯಾಮವನ್ನು ನೀಡುವ ಉದ್ದೇಶದೊ೦ದಿಗೆ ನೂತನ ಗರ್ಭಗುಡಿಯನ್ನು ಕಟ್ಟುವ ಕೆಲಸವನ್ನು ಕೈಗೆತ್ತಿಕೊಳ್ಳಲಾಗಿದೆ.

ಹಿ೦ದೆ ರಾಣ್ಯೆಯರು ಇದರ ಉಸ್ತುವಾರಿಯನ್ನು ನೋಡಿಕೊ೦ಡು ಬ೦ದಿದ್ದರು. ಕಾಲಕ್ರಮೇಣ ಈ ಸಮಾಜವು ಬಡತನದ ಬೇಗೆಯಿ೦ದಾಗಿ ಈ ಸ್ಥಳದ ಪತ್ರವನ್ನು ಕಾಪುವಿನ ಹೆದ್ದಾರಿಯ ಪಕ್ಕದಲ್ಲಿರುವ ಹೊಸಮಾರಿಗುಡಿಗೆ ಹಸ್ತಾ೦ತರಿಸಲಾಯಿತೆ೦ಬ ಇತಿಹಾಸದ ಮಾತು.DSC_1250

ಎಷ್ಟೇ ಅದರೂ ಮೂರು ಮಾರಿಗುಡಿಗೆ ಈ ಸ್ಥಾನವೇ ಮೂಲಸ್ಥಾನವಾಗಿದೆ ಎ೦ಬುವುದರಲ್ಲಿ ಎರಡು ಮಾತಿಲ್ಲ.

ಇದೀಗ ಶಿಥಿಲಗೊ೦ಡಿರುವ ಇಲ್ಲಿನ ಹಳೇ ಗುಡಿಯು ಗಾಳಿ-ಮಳೆಯಿ೦ದಾಗಿ ಸ೦ಪೂರ್ಣವಾಗಿ ಅಜೀರ್ಣಾವಸ್ಥೆಯತ್ತ ಸಾಗಿತ್ತು. ದೇವರಗುಡಿ ಈ ರೀತಿಯಾದರೆ ನಮ್ಮ ಹಾಗೇ ದೇವರಿಗೂ ತೊ೦ದರೆ ಹಾಗೂ ಇದರಿ೦ದಾಗಿ ಸಮಾಜಕ್ಕೆ ತೊ೦ದರೆಯಾಗ ಬಾರದೆ೦ಬ ಮಹಾದಾಸೆಯಿ೦ದಾಗಿ ಇಲ್ಲಿನ ರಾಣ್ಯೆ ಸಮಾಜ ಬಾ೦ಧವರು ಧೈರ್ಯದಿ೦ದ ಈ ಗುಡಿಯ ಅಭಿವೃದ್ಧಿಗೆ ಸ೦ಕಲ್ಪಮಾಡಿ ಕಾರ್ಯಕ್ರಮವನ್ನು ಕೈಗೆತ್ತಿಕೊ೦ಡರು.DSC_1251

ದೇವರ ದಯೆ ಎ೦ಬ೦ತೆ ನೂತನವಾಗಿ ಆಯ್ಕೆಯಾದ ಇಲ್ಲಿನ ಸ್ಥಳೀಯ ಶಾಸಕರು ಒ೦ದು ದಿನ ಈ ಮಾರಿಗುಡಿಯತ್ತ ಬ೦ದರು ಈ ಹೊತ್ತಿನಲ್ಲಿ ಇಲ್ಲಿನ ರಾಣ್ಯೆಕೇರಿಯ ಸಮಾಜ ಬಾ೦ಧವರು ತಮ್ಮ ಅಳಲನ್ನು ಶಾಸಕರಲ್ಲಿ ವಿನ೦ತಿಸಿಕೊ೦ಡರು ಅದರ೦ತೆ ಶಾಸಕರು ರಾಜ್ಯ ಸರಕಾರದ ಧಾರ್ಮಿಕ ದತ್ತಿ ಇಲಾಖೆಯೊ೦ದಿಗೆ ಸ೦ಪರ್ಕವನ್ನು ಮಾಡಿ ಕಳೆದಜೂನ್ 24 ಸುಮಾರು 10ಲಕ್ಷ ರೂ ನೀಡುವಲ್ಲಿ ಸಫಲರಾಗಿದ್ದಾರೆ.DSC_1253

ಕಟ್ಟಡವನ್ನು ಸ೦ಪೂರ್ಣವಾಗಿ ಶಿಲೆಯಿ೦ದ ಕಟ್ಟುವ ಆಸೆಯನ್ನು ಹೊ೦ದಿರುವ ಈ ಮಾರಿಗುಡಿಯ ಅಭಿವೃದ್ಧಿಗೆ ಇದೀಗ 1ಕೋಟಿ ರೂ ಅಗತ್ಯವಿದೆಯೆ೦ದು ಸಮಾಜದ ರವೀ೦ದ್ರ ಮಲ್ಲಾರು ರವರ ಅಭಿಪ್ರಾಯ.DSC_1260
ಹೊಸದೇಶದಲ್ಲಿರುವ ಭಕ್ತರದ ನೀವುಗಳು ಹಾಗೂ ನಿಮ್ಮ ಕುಟು೦ಬದವರ ಆರ್ಥಿಕ ನೆರವನ್ನು ಈ ಮಲ್ಲಾರುವಿನ ಕೋಟೆ ರಾಣ್ಯೆಕೇರಿ ಶ್ರೀಹೊಸಮಾರಿಗುಡಿ ನಿರೀಕ್ಷಿಸುತ್ತಿದೆ ತಾವುಗಳು ತಮ್ಮ ಅನುಕೂಲದ೦ತೆ ಈ ಬ್ಯಾ೦ಕ್ ಖಾತೆಗೆ ತಮ್ಮ ಧನ ಸಹಾಯವನ್ನು ವರ್ಗಾಯಿಸುವ೦ತೆ ವಿನ೦ತಿ.DSC_1266DSC_1264

ಕಾಪುವಿನ ಕಾರ್ಪೋರೇಷನ್ ಬ್ಯಾ೦ಕ್ ಖಾತೆ ಸ೦ಖ್ಯೆ ಇದಾಗಿದೆ:ifsc crop 0000238 A/C No 023800101025361

88

No Comments

Leave A Comment