Log In
BREAKING NEWS >
ಉಡುಪಿಯ ಶ್ರೀಲಕ್ಷ್ಮೀವೆ೦ಕಟೇಶ ದೇವಸ್ಥಾನದಲ್ಲಿ ಸೆ.27ರಿ೦ದ ಮೊದಲ್ಗೊ೦ಡು ಅಕ್ಟೋಬರ್ 2 ರವರೆಗೆ ಶ್ರೀಶಾರದಾ ಮಹೋತ್ಸವ ಕಾರ್ಯಕ್ರಮ ಜರಗಲಿದೆ ಎ೦ದು ಶ್ರೀಶಾರದಾ ಮಹೋತ್ಸವ ಸಮಿತಿಯ ಪ್ರಕಟಣೆ ತಿಳಿಸಿದೆ.....

ಮಣಿಪಾಲ:ಹುಡುಗಿ ನಾಪತ್ತೆ

mplಮಣಿಪಾಲ: ಪಿರ್ಯಾದಿದಾರರಾದ ಶೇಖಪ್ಪ, ತಂದೆ: ಭರಮಪ್ಪ, ವಾಸ: ಅಮೀನ್‌ಗಡ, ಹುನಗುಂದ ತಾಲೂಕು,ಬಾಗಲಕೋಟೆ ಜಿಲ್ಲೆ ಇವರು ಸಂಸಾರದೊಂದಿಗೆ ಪ್ರಗತಿನಗರ ಲೇಬರ್‌ ಕಾಲೋನಿಯಲ್ಲಿ ವಾಸವಾಗಿದ್ದುಕೊಂಡು ಕೂಲಿ ಕೆಲಸ ಮಾಡಿಕೊಂಡಿರುತ್ತಾರೆ. ದಿನಾಂಕ 30/06/15ರಂದು ಬೆಳಿಗ್ಗೆ 08:15ಗಂಟೆಗೆ ಶೇಖಪ್ಪ ಹಾಗೂ ಅವರ ಹೆಂಡತಿ ಸಂಗವ್ವ ಕೆಲಸದ ಬಗ್ಗೆ ಹೊರಗೆ ಹೋಗಿದ್ದು, ಅವರ ಮಗಳು ಮಂಜುಳಾ(15)ರವರು ಮನೆಯಲ್ಲಿಯೇ ಇದ್ದು, ಸಂಜೆ 6:30ಗಂಟೆಗೆ ಮನೆಗೆ ಬಂದು ನೋಡಿದಾಗ ಮಂಜುಳಾಳು ಮನೆಯಲ್ಲಿ ಇಲ್ಲದೆ ಇದ್ದು, ಅಕ್ಕಪಕ್ಕದ ಮನೆ ಹಾಗೂ ಸ್ನೇಹಿತರಲ್ಲಿ ವಿಚಾರಿಸಿದಾಗಲೂ ಮಂಜುಳಾಳು ಪತ್ತೆಯಾಗಿರುವುದಿಲ್ಲ.

ಶೇಖಪ್ಪರವರ ಮಗಳಾದ ಮಂಜುಳಾಳನ್ನು ಯಾರೋ ಅಪಹರಿಸಿಕೊಂಡು ಹೋಗಿರಬಹುದು ಎಂಬುದಾಗಿ ಶೇಖಪ್ಪರವರು ನೀಡಿದ ದೂರಿನಂತೆ ಮಣಿಪಾಲ ಠಾಣಾ ಅಪರಾಧ ಕ್ರಮಾಂಕ 132/15 ಕಲಂ: 363 ಐಪಿಸಿಯಂತೆ ಪ್ರಕರಣ ದಾಖಲಿಸಿಕೊಳ್ಳಲಾಗಿದೆ

No Comments

Leave A Comment