Log In
BREAKING NEWS >
ಉತ್ತರ ಪ್ರದೇಶ: ಮನೆಯಲ್ಲಿದ್ದ ಪಟಾಕಿ ಸ್ಫೋಟ, ತಾಯಿ-ಮಗಳ ಸಾವು...

ಛೋಟಾ ರಾಜನ್ ಹತ್ಯೆಗೈಯುವ ಪಾತಕಿ ದಾವೂದ್ ಸಂಚು ಮತ್ತೆ ವಿಫಲ

dawood-rajanನವದೆಹಲಿ: ಒಂದು ಕಾಲದಲ್ಲಿ ತನ್ನ ಆತ್ಮೀಯ ಬಲಗೈ ಬಂಟನಾಗಿದ್ದು, ಕಳೆದ ಕೆಲವು ವರ್ಷಗಳಿಂದ ಪರಮ ಶತ್ರುವಾಗಿರುವ ಭೂಗತ ಪಾತಕಿ ಛೋಟಾ ರಾಜನ್ ನನ್ನು ಹತ್ಯೆಗೈಯುವ ಪಾತಕಿ ದಾವೂದ್ ಇಬ್ರಾಹಿಂನ ಕೊನೆಯ ಸಂಚು ವಿಫಲವಾಗಿರುವ ಅಂಶ ಬೆಳಕಿಗೆ ಬಂದಿರುವುದಾಗಿ ಮಾಧ್ಯಮದ ವರದಿ ತಿಳಿಸಿದೆ.

ತನ್ನ ದೀರ್ಘಕಾಲದ ಶತ್ರುವಿನ ಹತ್ಯೆಗೈಯುವ ಸುಪಾರಿಯನ್ನು ದಾವುದ್‌ ಇಬ್ರಾಹಿಂ ತನ್ನ ಬಲಗೈಬಂಟ ಚೋಟಾ ಶಕೀಲ್‌ಗೆ ವಹಿಸಿದ್ದ. ಈ ವರ್ಷದ ಆರಂಭದಲ್ಲಿ ಈ ಕೃತ್ಯ ನಡೆಸಲು ಯೋಜನೆ ರೂಪಿಸಲಾಗಿತ್ತು. ಸದ್ಯ ಹಿಂದು ಡಾನ್‌ ಎನ್ನುವ ಮುಖವಾಡದಲ್ಲಿ ಓಡಾಡುತ್ತಿರುವ ಚೋಟಾ ರಾಜನ್‌ ಹತ್ಯೆಗೆ ನಿಖರವಾದ ಸ್ಥಳವನ್ನೂ ಗುರುತಿಸಲಾಗಿತ್ತು.

ಆದರೆ ಛೋಟಾ ರಾಜನ್ ನನ್ನು ಕೊಂದು ತನ್ನ ಬಾಸ್ ದಾವೂದ್ ನ ಆಸೆಯನ್ನು ಈಡೇರಿಸಬೇಕೆಂಬ ಶಕೀಲ್ ನ ಪ್ರಯತ್ನ ವಿಫಲವಾಗಿರುವ ಮಾತುಕತೆಯ ವಿವರದಲ್ಲಿ ಬಯಲಾಗಿರುವುದಾಗಿ ಟೈಮ್ಸ್ ಆಫ್ ಇಂಡಿಯಾ ವರದಿ ತಿಳಿಸಿದೆ.

ಕಳೆದ ಕೆಲವು ವರ್ಷಗಳ ಹಿಂದೆ ಡಿ ಕಂಪನಿ ಬ್ಯಾಂಕಾಕ್ ನಲ್ಲಿದ್ದ ಛೋಟಾ ರಾಜನ್ ಹತ್ಯೆ ಮಾಡಲು ನಡೆಸಿದ್ದ ಸಂಚಿನಿಂದ ಪಾರಾಗಿದ್ದ. ಈ ಬಾರಿಯೂ ಛೋಟಾ ರಾಜನ್ ದಾವೂದ್ ಗ್ಯಾಂಗ್ ನ ಹತ್ಯೆ ಸಂಚಿನಿಂದ ಪಾರಾಗಿರುವುದು ಡಿ ಕಂಪನಿಗೆ ನಿರಾಸೆ ಮೂಡಿಸಿದೆ.

ಛೋಟಾ ರಾಜನ್ ಗುಂಪಿನ ಅತ್ಯಂತ ನಂಬಿಕೆಯ ವ್ಯಕ್ತಿಯೊಬ್ಬನನ್ನು ಡಿ ಕಂಪನಿ ಸೆಳೆದುಕೊಂಡು, ಛೋಟಾ ರಾಜನ್ ಮುಗಿಸಲು ಸಂಚು ರೂಪಿಸಿತ್ತು. ಆದರೆ ತನ್ನ ಹತ್ಯೆಯ ಸಂಚಿನ ಸುಳಿವು ಪಡೆದ ಛೋಟಾ ರಾಜನ್ ತನ್ನ ಸುರಕ್ಷಿತ ಅಡ್ಡಾದಲ್ಲಿ ಅಡಗಿಕೊಳ್ಳುವ ಮೂಲಕ ಸಂಚು ವಿಫಲವಾಗಿದೆ. ಅಲ್ಲದೇ ದಾವೂದ್ ಬಲಗೈ ಬಂಟ ಛೋಟಾ ಶಕೀಲ್ ನಡೆಸಿದ ಸಂಭಾಷಣೆಯ ವಿವರ ಲಭ್ಯವಾಗಿರುವುದಾಗಿ ಟೈಮ್ಸ್ ವರದಿ ವಿವರಿಸಿದೆ.

No Comments

Leave A Comment