Log In
BREAKING NEWS >
ಉಡುಪಿಯ ಶ್ರೀಲಕ್ಷ್ಮೀವೆ೦ಕಟೇಶ ದೇವಸ್ಥಾನದಲ್ಲಿ ಸೆ.27ರಿ೦ದ ಮೊದಲ್ಗೊ೦ಡು ಅಕ್ಟೋಬರ್ 2 ರವರೆಗೆ ಶ್ರೀಶಾರದಾ ಮಹೋತ್ಸವ ಕಾರ್ಯಕ್ರಮ ಜರಗಲಿದೆ ಎ೦ದು ಶ್ರೀಶಾರದಾ ಮಹೋತ್ಸವ ಸಮಿತಿಯ ಪ್ರಕಟಣೆ ತಿಳಿಸಿದೆ.....

ವೈದ್ಯರ ನಿರ್ಲಕ್ಷ್ಯಕ್ಕೆ ಕಣ್ಣು ಕಳೆದುಕೊಂಡ ಯುವತಿ: 1.8 ಕೋಟಿ ಪರಿಹಾರ ನೀಡುವಂತೆ ಸುಪ್ರೀಂ ಆದೇಶ

Supreme-Courtನವದೆಹಲಿ: ಸರ್ಕಾರಿ ವೈದ್ಯರ ನಿರ್ಲಕ್ಷ್ಯದಿಂದಾಗಿ ಕಣ್ಣು ಕಳೆದುಕೊಂಡ ಯುವತಿಗೆ ಪರಿಹಾರವಾಗಿ 1.8 ಕೋಟಿ ಹಣ ನೀಡುವಂತೆ ತಮಿಳುನಾಡು ಸರ್ಕಾರಕ್ಕೆ ಸುಪ್ರೀಂಕೋರ್ಟ್ ಗುರುವಾರ ಆದೇಶಿಸಿದೆ.

ವೈದ್ಯರ ನಿರ್ಲಕ್ಷ್ಯಕ್ಕೆ ಕಣ್ಣು ಕಳೆದುಕೊಂಡ ಯುವತಿಗೆ ಇದೀಗ 18 ವರ್ಷವಾಗಿದ್ದು, ಅವಧಿಗೂ ಮುನ್ನವೇ ಚೆನ್ನೈನ ಸರ್ಕಾರಿ ಆಸ್ಪತ್ರೆಯೊಂದರಲ್ಲಿ ಮಗುವಿನ ಜನನವಾಗಿತ್ತು. ಮಗು ಹುಟ್ಟಿದಾಗ ಸಾಮಾನ್ಯವಾಗಿ ಮಾಡಲೇಬೇಕಾದ ಕೆಲವು ಪರೀಕ್ಷೆಗಳಲ್ಲಿ ಒಂದಾದ ಕಣ್ಣಿನ ಪರೀಕ್ಷೆ (ರೆಟಿನೋಪತಿ ಟೆಸ್ಟ್) ಮಾಡುವಲ್ಲಿ ಅಲ್ಲಿನ ವೈದ್ಯರು ನಿರ್ಲಕ್ಷ್ಯ ತೋರಿಸಿ, ತಾಯಿ ಮತ್ತು ಮಗುವನ್ನು ಆಸ್ಪತ್ರೆಯಿಂದ ಬಿಡುಗಡೆ ಮಾಡಿದ್ದಾರೆ.

ನಂತರ ಮಗು ಬೆಳೆಯುತ್ತಿದ್ದಂತೆ ದೃಷ್ಟಿ ಇಲ್ಲದಿರುವುದು ಕಂಡುಬಂದಿದೆ. ಇದಕ್ಕೆ ಕಾರಣ ವೈದ್ಯಕೀಯ ಚಿಕಿತ್ಸೆಯ ಕೊರತೆಯಿಂದಾಗಿ ಎಂಬುದನ್ನು ಅರಿತ ಮಗುವಿನ ಕುಟುಂಬಸ್ಥರು ಪರಿಹಾರಕ್ಕಾಗಿ ರಾಷ್ಟ್ರೀಯ ಗ್ರಾಹಕ ವೇದಿಕೆಯ ಮೊರೆ ಹೋಗಿದ್ದಾರೆ. ನಂತರ ಪರಿಹಾರವಾಗಿ ರು.5 ಲಕ್ಷ ದೊರೆತಿದೆ. ಆದರೆ, ಈ ಪರಿಹಾರ ಧನಕ್ಕೆ ಅಸಮಾಧಾನಗೊಂಡ ಕುಟುಂಬಸ್ಥರು ನಂತರ ಉನ್ನತ ನ್ಯಾಯಾಲಯದ ಮೊರೆ ಹೋಗಿದ್ದಾರೆ. 18 ವರ್ಷಗಳ ಸುಧೀರ್ಘ ವಿಚಾರಣೆಯ ನಂತರ ಇದೀಗ ಸುಪ್ರೀಂಕೋರ್ಟ್ ನೊಂದ ಕುಟುಂಬಸ್ಥರಿಗೆ ರು.1.8 ಕೋಟಿ ಪರಿಹಾರ ಧನ ನೀಡುವಂತೆ ತಮಿಳುನಾಡು ಸರ್ಕಾರಕ್ಕೆ ಸೂಚನೆ ನೀಡಿದೆ.

No Comments

Leave A Comment