Log In
BREAKING NEWS >
ಉಡುಪಿಯ ಶ್ರೀಲಕ್ಷ್ಮೀವೆ೦ಕಟೇಶ ದೇವಸ್ಥಾನದಲ್ಲಿ ಸೆ.27ರಿ೦ದ ಮೊದಲ್ಗೊ೦ಡು ಅಕ್ಟೋಬರ್ 2 ರವರೆಗೆ ಶ್ರೀಶಾರದಾ ಮಹೋತ್ಸವ ಕಾರ್ಯಕ್ರಮ ಜರಗಲಿದೆ ಎ೦ದು ಶ್ರೀಶಾರದಾ ಮಹೋತ್ಸವ ಸಮಿತಿಯ ಪ್ರಕಟಣೆ ತಿಳಿಸಿದೆ.....

ವಾರಾಣಸಿ: ಮಳೆಗೆ ರೈಲುಗಳು ರದ್ದು, 200 ಕನ್ನಡಿಗರ ಪರದಾಟ

varanasiಬೆಂಗಳೂರು: ವಿಶ್ವನಾಥನ ಸನ್ನಿಧಿ ವಾರಾಣಸಿಯಲ್ಲಿ ಕನ್ನಡಿಗರು ಸಂಕಷ್ಟಕ್ಕೆ ಸಿಲುಕಿದ್ದಾರೆ. ಇಲ್ಲಿ ವರುಣನ ಆರ್ಭಟ ಹೆಚ್ಚಿರುವುದರಿಂದ ಜೂನ್ 25ರಿಂದ ರೈಲುಗಳು ಏಕಾಏಕಿ ರದ್ದಾಗುತ್ತಿವೆ. ಹೀಗಾಗಿ ತವರಿಗೆ ಮರಳಲಾಗದೇ ರಾಜ್ಯದಿಂದ ತೆರಳಿದ್ದ ಪ್ರವಾಸಿಗರು ಪರದಾಡುತ್ತಿದ್ದಾರೆ.

ರಾಯಚೂರು ಜಿಲ್ಲೆ ಮಾನ್ವಿ ತಾಲೂಕಿನ ಸಿರವಾರ ಪಟ್ಟಣದ ಅಂಬಾಜಿರಾವ್ ಸರೋದೆ ತಮ್ಮ ಕುಟುಂಬದೊಂದಿಗೆ ಜೂ.14ರಂದು ಕಾಶಿಗೆ ತೆರಳಿದ್ದರು. ಜೂ.21ರಂದು ವಾರಾಣಸಿಯಲ್ಲಿ ಪಂಢರಪುರದ ಸ್ವಾಮೀಜಿಯೊಬ್ಬರ ನೇತೃತ್ವದಲ್ಲಿ ಧಾರ್ಮಿಕ ಕಾರ್ಯಕ್ರಮ ಏರ್ಪಡಿಸಲಾಗಿತ್ತು. ದೇಶದ ವಿವಿಧ ಪ್ರಾಂತ್ಯಗಳಿಂದ ಸಾವಿರಾರು ಭಕ್ತರು ಆಗಮಿಸಿದ್ದ ಈ ಕಾರ್ಯಕ್ರಮದಲ್ಲಿ ರಾಜ್ಯದಿಂದ 200ಕ್ಕೂ ಹೆಚ್ಚು ಭಕ್ತರು ಪಾಲ್ಗೊಂಡಿದ್ದರು.

ಹನ್ನೆರಡು ಜನರ ತಂಡದೊಂದಿಗೆ ಕಾರ್ಯ ಕ್ರಮದಲ್ಲಿ ಪಾಲ್ಗೊಂಡಿದ್ದ ಅಂಬಾಜಿರಾವ್ ಕುಟುಂಬ ನಂತರ ಮಳೆಯಿಂದಾಗಿ ಕಾಶಿಯಲ್ಲಿ ಉಳಿದುಕೊಳ್ಳುವಂತಾಗಿದೆ. ‘ಜೂ.25ರಿಂದ ರೈಲುಗಳು ನಿರಂತರವಾಗಿ ರದ್ದಾಗುತ್ತಿವೆ. ಹಾಗಾಗಿ ಕಳೆದೊಂದು ವಾರದಿಂದ ವಾರಾಣಸಿಯಲ್ಲೇ ಉಳಿದುಕೊಂಡಿದ್ದೇವೆ. ರೈಲ್ವೆ ಸಿಬ್ಬಂದಿ ಸೂಕ್ತ ಮಾಹಿತಿ ನೀಡುತ್ತಿಲ್ಲ. ಈಗ ಜುಲೈ 2ರಂದು ರೈಲು ಹೊರಡಲಿದೆ ಎಂದು ಹೇಳುತ್ತಿದ್ದಾರೆ, ಆದರೆ, ನಮಗೆ ಬಂದ ಮಾಹಿತಿ ಪ್ರಕಾರ ನಾವು ಹೊರಡಬೇಕಿದ್ದ ರೈಲು ವಾರಾಣಸಿಗೆ ಬರದೇ ದಾರಿಯಲ್ಲೇ ನಿಂತುಕೊಂಡಿದೆ’ ಎಂದು ಅಂಬಾಜಿರಾವ್ ಹೇಳಿದ್ದಾರೆ.

ಅಂಬಾಜಿರಾವ್ ಕುಟುಂಬ ವಾರಾಣಸಿಯ ಜಂಗಮವಾಡಿ ಮಠದಲ್ಲಿ ಉಳಿದುಕೊಂಡಿದೆ. ಇದೇ ಮಠದಲ್ಲಿ ಸವಣೂರು, ಗಂಗಾವತಿ, ಕೊಪ್ಪಳ ಸೇರಿದಂತೆ 200ಕ್ಕೂ ಹೆಚ್ಚು ಕನ್ನಡಿಗರು ತಾತ್ಕಾಲಿಕವಾಗಿ ಆಶ್ರಯ ಪಡೆದುಕೊಂಡಿದ್ದಾರೆ. ಹೈದ್ರಾಬಾದ್, ಪುಣೆಗೆ ಹೊರಡುವ ರೈಲುಗಳನ್ನು ರದ್ದುಪಡಿಸಲಾಗಿದೆ. ಹಾಗಾಗಿ ಕರ್ನಾಟಕಕ್ಕೆ ಬರಲಾಗದೆ ಕನ್ನಡಿಗರು ಪರದಾಡುತ್ತಿದ್ದಾರೆ. ಕಳೆದ 4 ದಿನಗಳಿಂದ ನಿರಂತರ ಮಳೆ ಬರುತ್ತಿರುವುದು ಕನ್ನಡಿಗರ ಸಂಕಷ್ಟವನ್ನು ಹೆಚ್ಚಿಸಿದೆ. ರಾಜ್ಯ, ಕೇಂದ್ರ ಸರ್ಕಾರಗಳು ಸಂಕಷ್ಟದಲ್ಲಿರುವ ಕನ್ನಡಿಗರ ನೆರವಿಗೆ ಧಾವಿಸಬೇಕಿದೆ ಎಂಬುದು ಈ ಯಾತ್ರಾರ್ಥಿಗಳ ಮನವಿ.

No Comments

Leave A Comment