Log In
BREAKING NEWS >
ಉಡುಪಿಯ ಶ್ರೀಲಕ್ಷ್ಮೀವೆ೦ಕಟೇಶ ದೇವಸ್ಥಾನದಲ್ಲಿ ಸೆ.27ರಿ೦ದ ಮೊದಲ್ಗೊ೦ಡು ಅಕ್ಟೋಬರ್ 2 ರವರೆಗೆ ಶ್ರೀಶಾರದಾ ಮಹೋತ್ಸವ ಕಾರ್ಯಕ್ರಮ ಜರಗಲಿದೆ ಎ೦ದು ಶ್ರೀಶಾರದಾ ಮಹೋತ್ಸವ ಸಮಿತಿಯ ಪ್ರಕಟಣೆ ತಿಳಿಸಿದೆ.....

ರು.2 ಲಕ್ಷ ಕೋಟಿ ಸಂಪತ್ತು ದಾನಕ್ಕೆ ಕೊಟ್ಟ ಸೌದಿ ದೊರೆ

Saudi-Arabias-Princeರಿಯಾದ್: ನಿಮ್ಮ ಹತ್ತಿರ ರು.2 ಲಕ್ಷ ಕೋಟಿ ಇದ್ದರೆ ಏನು ಮಾಡುತ್ತೀರಿ? ದೊಡ್ಡ ಉದ್ಯಮ ಸಮೂಹ ಸ್ಥಾಪನೆ, ಐಷಾರಾಮಿ ಮನೆ, ಬಂಗಲೆ ಕಾರು… ಹೀಗೆ ಅವರವರ ಆಶೆಗೆ ತಕ್ಕಂತೆ ಪಟ್ಟಿ ಬೆಳೆಯುತ್ತಾ ಹೋಗುತ್ತದೆ. ಆದರೆ ಸೌದಿ ಅರೇಬಿಯಾದ ಮಿಲಿಯಾಧಿಪತಿ ರಾಜ ಕುಮಾರ ಅಲ್ವಲೀದ್ ಬಿನ್ ತಲಾಲ್ ಮಾತ್ರ ರು.2 ಲಕ್ಷ ಕೋಟಿ ಮೊತ್ತವನ್ನು ದಾನ- ಧರ್ಮಕ್ಕಾಗಿ ವಿನಿಯೋಗಿಸಲು ಮುಂದಾಗಿದ್ದಾರೆ.

ಅಂದ ಹಾಗೆ ಇಂಥ ಬೆಳವಣಿಗೆಗೆ ಕಾರಣವಾಗಿದ್ದು ಮೈಕ್ರೋ ಸಾಫ್ಟ್ ಸಂಸ್ಥಾಪಕ ಬಿಲ್ ಗೇಟ್ಸ್ ಮತ್ತು ಪತ್ನಿ ಮೆಲಿಂಡಾ ಗೇಟ್ಸ್ ಅವರೇ ಕಾರಣವಂತೆ. ಹೀಗೆಂದು ಅವರೇ ಹೇಳಿಕೊಂಡಿದ್ದಾರೆ.

 ಮಹಿಳಾ ಸಬಲೀಕರಣ, ಯುವಕರ ಅಭ್ಯುದಯ, ಪ್ರಾಕೃತಿಕ ವಿಪತ್ತು ನಿರ್ವಹಣೆಗೆ ಈ ಮೊತ್ತವನ್ನು ವಿನಿಯೋಗಿಸಲು ಮುಂದಾಗಿದ್ದೇನೆ. ಈ ಮೂಲಕ ಸಹ್ಯ ಮತ್ತು ಎಲ್ಲರಿಗೂ ಸಹ್ಯವಾಗುವ ವಿಶ್ವವನ್ನು ಸೃಷ್ಟಿಸಬಹುದು ಎಂದು ತಲಾಲ್ ಹೇಳಿಕೊಂಡಿದ್ದಾರೆ.

ಮೊತ್ತವನ್ನು ಸಮರ್ಪಕವಾಗಿ ವಿನಿಯೋಗಿಸಲು ಮುಂದಿನ ವರ್ಷಗಳಲ್ಲಿ ಸೂಕ್ತ ಯೋಜನೆ ರೂಪಿಸಿರುವುದಾಗಿ ತಲಾಲ್ ಹೇಳಿಕೊಂಡಿದ್ದಾರೆ. ಅದಕ್ಕಾಗಿ ರಚಿಸಲಾಗಿರುವ ಸಲಹಾ ಮಂಡಳಿಯ ನೇತೃತ್ವವನ್ನು ಅವರೇ ವಹಿಸಿಕೊಳ್ಳಲಿದ್ದಾರೆ ಎಂದು ಅಲ್ವಲೀದ್ ಬಿನ್ ತಲಾಲ್ ಹೇಳಿಕೊಂಡಿದ್ದಾರೆ. ಅಂದ ಹಾಗೆ ತಲಾಲ್ ಜ.10 ರಂದು ನಿಧನ ಹೊಂದಿದ ಸೌದಿ ದೊರೆ ಅಬ್ದುಲ್ಲಾರ ಸಂಬಂಧಿಯಾಗಿದ್ದಾರೆ.

No Comments

Leave A Comment