Log In
BREAKING NEWS >
ಉಡುಪಿಯ ಶ್ರೀಲಕ್ಷ್ಮೀವೆ೦ಕಟೇಶ ದೇವಸ್ಥಾನದಲ್ಲಿ ಸೆ.27ರಿ೦ದ ಮೊದಲ್ಗೊ೦ಡು ಅಕ್ಟೋಬರ್ 2 ರವರೆಗೆ ಶ್ರೀಶಾರದಾ ಮಹೋತ್ಸವ ಕಾರ್ಯಕ್ರಮ ಜರಗಲಿದೆ ಎ೦ದು ಶ್ರೀಶಾರದಾ ಮಹೋತ್ಸವ ಸಮಿತಿಯ ಪ್ರಕಟಣೆ ತಿಳಿಸಿದೆ.....

ಸೋನಿಯಾ ಜೊತೆ ಡೀಲ್ ಮಾಡಿಸುವುದಾಗಿ ವರುಣ್ ಆಫರ್ : ಲಲಿತ್ ಬಾಂಬ್

Newನವದೆಹಲಿ: ಐಪಿಎಲ್ ಮಾಜಿ ಮುಖ್ಯಸ್ಥ ಲಲಿತ್ ಮೋದಿ ತನ್ನ ಜೊತೆ ನಂಟು ಹೊಂದಿರುವವರ ಹೆಸರನ್ನು ಬಯಲುಗೊಳಿಸುತ್ತಿರುವುದನ್ನು ಮುಂದುವರಿಸಿದ್ದು, ಇದೀಗ ಬಿಜೆಪಿ ಸಂಸದ ವರುಣ್ ಗಾಂಧಿ ಪಟ್ಟಿಗೆ ಸೇರ್ಪಡೆಗೊಂಡಿದ್ದಾರೆ. ಕಾಂಗ್ರೆಸ್ ವರಿಷ್ಠೆ, ದೊಡ್ಡಮ್ಮ ಸೋನಿಯಾ ಗಾಂಧಿ ಜೊತೆ ಡೀಲ್ ಮಾಡಿ ಎಲ್ಲ ಸಮಸ್ಯೆಯನ್ನು ಬಗೆಹರಿಸಿಕೊಡುವುದಾಗಿ ವರುಣ್ ಗಾಂಧಿ ತನಗೆ ಆಫರ್ ಕೊಟ್ಟಿರುವುದಾಗಿ ಲಲಿತ್ ಮೋದಿ ಬುಧವಾರದ ಟ್ವೀಟ್ ನಲ್ಲಿ ಮತ್ತೊಂದು ಬಾಂಬ್ ಸಿಡಿಸಿದ್ದಾರೆ.

ಸರಣಿ ಟ್ವೀಟ್ ಮಾಡಿರುವ ಲಲಿತ್ ಮೋದಿ,  ಕೆಲವು ವರ್ಷಗಳ ಹಿಂದೆ ಸುಲ್ತಾನ್ ಪುರ್ ಸಂಸದ ವರುಣ್ ಗಾಂಧಿ ಅವರು ಲಂಡನ್ ನಲ್ಲಿ ನನ್ನ ಭೇಟಿಯಾಗಿದ್ದರು. ಆಗ ಕಾಂಗ್ರೆಸ್ ವರಿಷ್ಠೆ ಸೋನಿಯಾ ಜೊತೆ ಮಾತನಾಡಿ ಎಲ್ಲವನ್ನು 60 ಮಿಲಿಯನ್ ಡಾಲರ್ ನೀಡಿ ಸೆಟಲ್ ಮಾಡಿಕೊಳ್ಳಿ ಎಂದು ಹೇಳುವ ಮೂಲಕ ವಿವಾದದಲ್ಲಿ ವರುಣ್ ಮತ್ತು ಸೋನಿಯಾ ಹೆಸರನ್ನು ಎಳೆದು ತಂದಿದ್ದಾರೆ.

ಇಟೆಲಿಯಲ್ಲಿರುವ ಸೋನಿಯಾ ಅವರ ಸಹೋದರಿಯನ್ನು ಭೇಟಿಯಾಗುವಂತೆ ವರುಣ್ ಸೂಚಿಸಿದ್ದರು. ಬಳಿಕ ನಾನು ಸಾಮಾನ್ಯ ವ್ಯಕ್ತಿಯೊಬ್ಬನ ಮೂಲಕ ಸೋನಿಯಾ ಸಹೋದರಿಯನ್ನು ಭೇಟಿಯಾದಾಗ, 60 ದಶಲಕ್ಷ ಡಾಲರ್ ನೀಡಿದರೆ ಸೋನಿಯಾ ಜೊತೆ ಮಾತನಾಡಿ ಎಲ್ಲಾ ಬಗೆಹರಿಸುವುದಾಗಿ ಹೇಳಿದ್ದಾರೆಂದು ಮೋದಿ ಟ್ವೀಟ್ ನಲ್ಲಿ ತಿಳಿಸಿದ್ದಾರೆ.

ಲಲಿತ್ ಮೋದಿ ಈ ಟ್ವೀಟ್ ಬೆನ್ನಲ್ಲೇ ಆರೋಪವನ್ನು ವರುಣ್ ಗಾಂಧಿ ಸಾರಸಗಟಾಗಿ ತಳ್ಳಿಹಾಕಿದ್ದಾರೆ. ಇದು ಆಧಾರರಹಿತವಾದ ಆರೋಪ ಎಂದು ಪಿಟಿಐಗೆ ಪ್ರತಿಕ್ರಿಯೆ ನೀಡಿದ್ದಾರೆ. ಬಿಜೆಪಿ ಕೂಡಾ ಆರೋಪವನ್ನು ಅಲ್ಲಗಳೆದಿದೆ.

ಸೋನಿಯಾ ಗಾಂಧಿ ಮತ್ತು ವರುಣ್ ಬೇರೆ, ಬೇರೆ ಪಕ್ಷದವರು. ಎರಡು ಕುಟುಂಬಗಳ ನಡುವಿನ ವೈಮನಸ್ಸು ಇಡೀ ಜಗತ್ತಿಗೆ ಗೊತ್ತಿದೆ ಎಂದು ಬಿಜೆಪಿ ವಕ್ತಾರ ಶಹನವಾಜ್ ಹುಸೈನ್ ತಿಳಿಸಿದ್ದಾರೆ.

ಇತ್ತೀಚೆಗಷ್ಟೇ ಸೋನಿಯಾ ಪುತ್ರಿ ಪ್ರಿಯಾಂಕಾ ಗಾಂಧಿ ಮತ್ತು ಅಳಿಯ ರಾಬರ್ಟ್ ವಾದ್ರಾ ಅವರನ್ನು ಲಂಡನ್ ನ ಹೋಟೆಲ್ ವೊಂದರಲ್ಲಿ ಭೇಟಿಯಾಗಿದ್ದೆ ಎಂದು ಲಲಿತ್ ಮೋದಿ ಟ್ವೀಟ್ ಮಾಡಿದ್ದರು. ಲಂಚ ಪಡೆದ ಮೂವರು ಅಂತಾರಾಷ್ಟ್ರೀಯ ಆಟಗಾರರನ್ನು ಶ್ರೀನಿವಾಸನ್ ರಕ್ಷಿಸಿದ್ದಾರೆ ಎಂದು ಸಂದರ್ಶನದಲ್ಲಿ ಆರೋಪಿಸಿದ್ದರು.

No Comments

Leave A Comment