Log In
BREAKING NEWS >
ಉಡುಪಿಯ ಶ್ರೀಲಕ್ಷ್ಮೀವೆ೦ಕಟೇಶ ದೇವಸ್ಥಾನದಲ್ಲಿ ಸೆ.27ರಿ೦ದ ಮೊದಲ್ಗೊ೦ಡು ಅಕ್ಟೋಬರ್ 2 ರವರೆಗೆ ಶ್ರೀಶಾರದಾ ಮಹೋತ್ಸವ ಕಾರ್ಯಕ್ರಮ ಜರಗಲಿದೆ ಎ೦ದು ಶ್ರೀಶಾರದಾ ಮಹೋತ್ಸವ ಸಮಿತಿಯ ಪ್ರಕಟಣೆ ತಿಳಿಸಿದೆ.....

ಮಹಿಳಾ ಐಎಎಸ್ ಅಧಿಕಾರಿಯನ್ನು ಸೆಕ್ಸಿಯಾಗಿ ಚಿತ್ರಿಸಿ ವಿವಾದಕ್ಕೀಡಾದ ಔಟ್‌ಲುಕ್ ಮ್ಯಾಗಜಿನ್

ಹೈದ್ರಾಬಾದ್: ತೆಲಂಗಾಣ ಮುಖ್ಯಮಂತ್ರಿಯವರ ಕಚೇರಿಯಲ್ಲಿನ ಮಹಿಳಾ ಐಎಎಸ್ ಅಧಿಕಾರಿಯನ್ನು ಸೆಕ್ಸಿಯಾಗಿ ಚಿತ್ರಿಸಿದ ಖ್ಯಾತ ಸುದ್ದಿ ಮಾಸಿಕ ಔಟ್‌ಲುಕ್ ವಿವಾದಕ್ಕೀಡಾಗಿದೆ.

ಸ್ಮಿತಾ ಸಭರ್‌ವಾಲ್ ಎಂಬ ಅಧಿಕಾರಿಯನ್ನು ಸೆಕ್ಸಿಯಾಗಿ ಚಿತ್ರಿಸಿ ಔಟ್‌ಲುಕ್ ತನ್ನ ಗಾಸಿಪ್ ಕಾಲಂನಲ್ಲಿ ಆ ಚಿತ್ರದ ಬಳಕೆ ಮಾಡಿತ್ತು. ಪ್ರಸ್ತುತ ಮಾಸಿಕದಲ್ಲಿ ‘ಡೀಪ್ ಥ್ರೋಟ್‌’ ಎಂಬ ಕಾಲಂನಲ್ಲಿ ‘ನೋ ಬೋರಿಂಗ್ ಬಾಬು’ ಎಂಬ ಶೀರ್ಷಿಕೆ ನೀಡಿ ಲೇಖನವೊಂದನ್ನು ಪ್ರಕಟಿಸಿತ್ತು.

Smita-Sabharwalಮಹಿಳಾ ಅಧಿಕಾರಿಯ ಸೌಂದರ್ಯದ ಬಗ್ಗೆ ಮತ್ತು ಹೇಗೆ ಅವರಿಗೆ ಬಡ್ತಿ ಸಿಕ್ಕಿತು ಎಂಬುದನ್ನೂ, ಸೌಂದರ್ಯದಿಂದಾಗಿಯೇ ಅವರು ಈ ಹಂತಕ್ಕೆ ಮುಟ್ಟಿದ್ದಾರೆ ಎಂದು ಮಹಿಳಾ ಅಧಿಕಾರಿಯ ಹೆಸರು ಉಲ್ಲೇಖಿಸದೆ ಆ ಲೇಖನವನ್ನು ಬರೆಯಲಾಗಿತ್ತು. ಲೇಖನ ಜತೆಗೆ ಸೆಕ್ಸಿಯಾಗಿ ಕಾಣುವಂತೆ ಅರೆಬರೆ ಬಟ್ಟೆ ತೊಟ್ಟು ರ್ಯಾಂಪ್ ವಾಕ್ ಮಾಡುತ್ತಿರುವ ಐಎಎಸ್ ಅಧಿಕಾರಿಯನ್ನು ನೋಡಿ ಕ್ಯಾಮೆರಾ ಹಿಡಿದುಕೊಂಡು ನಿಂತಿರುವ ತೆಲಂಗಾಣ ಮುಖ್ಯಮಂತ್ರಿ ಹಾಗೂ ಖುಷಿಯಿಂದ ಅದನ್ನು ನೋಡುತ್ತಿರುವ ರಾಜಕಾರಣಿಗಳು- ಹೀಗೊಂದು ಕ್ಯಾರಿಕೇಚರ್ ನ್ನು ಔಟ್‌ಲುಕ್ ಪ್ರಕಟಿಸಿತ್ತು. ಈ ಕ್ಯಾರಿಕೇಚರ್ ವಿರುದ್ಧ ತೀವ್ರ ಆಕ್ಷೇಪ ವ್ಯಕ್ತವಾಗಿತ್ತು.

ಆದಾಗ್ಯೂ, ಇಂಥದ್ದೊಂದು ಲೇಖನ ಪ್ರಕಟಿಸುವ ಮೂಲಕ ಔಟ್‌ಲುಕ್ ಎಲ್ಲ ಮಹಿಳೆಯರನ್ನು ಅಪಮಾನ ಮಾಡಿದೆ. ಆದ್ದರಿಂದ ಮಾಸಿಕ ಕ್ಷಮೆ ಕೇಳಬೇಕೆಂದು ಸ್ಮಿತಾ ಒತ್ತಾಯಿಸಿದ್ದಾರೆ.

14 ವರುಷ ನಾನು ಆ ಕ್ಷೇತ್ರದಲ್ಲಿ ಅನುಭವ ಹೊಂದಿದ್ದೇನೆ. ಈ ಲೇಖನದಿಂದಾಗಿ ನನಗೆ ತುಂಬಾ ನೋವುಂಟಾಗಿದೆ. ಜವಾಬ್ದಾರಿಯುತ ಸ್ಥಾನದಲ್ಲಿದ್ದು ಕೆಲಸ ನಿರ್ವಹಿಸುವ ಮಹಿಳೆಯರು ಇಂಥಾ ಪೀತ ಪತ್ರಿಕೆಯ ಬಲಿಪಶುವಾಗುತ್ತಿರುವುದಕ್ಕೆ ಕಡಿವಾಣ ಹಾಕಲೇ ಬೇಕು ಎಂದು ಸ್ಮಿತಾ ಪ್ರತಿಕ್ರಿಯಿಸಿದ್ದಾರೆ. ಮಾತ್ರವಲ್ಲದೆ ಔಟ್‌ಲುಕ್‌ಗೆ ಸ್ಮಿತಾ ನ್ಯಾಯಪೂರ್ವಕ ನೋಟೀಸ್ ಕಳಿಸಿದ್ದಾರೆ

No Comments

Leave A Comment