Log In
BREAKING NEWS >
ಉಡುಪಿಯ ಶ್ರೀಲಕ್ಷ್ಮೀವೆ೦ಕಟೇಶ ದೇವಸ್ಥಾನದಲ್ಲಿ ಸೆ.27ರಿ೦ದ ಮೊದಲ್ಗೊ೦ಡು ಅಕ್ಟೋಬರ್ 2 ರವರೆಗೆ ಶ್ರೀಶಾರದಾ ಮಹೋತ್ಸವ ಕಾರ್ಯಕ್ರಮ ಜರಗಲಿದೆ ಎ೦ದು ಶ್ರೀಶಾರದಾ ಮಹೋತ್ಸವ ಸಮಿತಿಯ ಪ್ರಕಟಣೆ ತಿಳಿಸಿದೆ.....

ಆರೋಪ ಸಾಬೀತಾದರೆ ರಾಜಕೀಯ ನಿವೃತ್ತಿ: ಪಂಕಜ ಮುಂಡೆ

pankaja-mundeಮುಂಬಯಿ: 206 ಕೋಟಿ ರೂಪಾಯಿಗಳ ಚಿಕ್ಕಿ ಹಗರಣದಲ್ಲಿ ತನ್ನ ವಿರುದ್ಧದ ಆರೋಪ ಸಾಬೀತಾದರೇ ರಾಜಕೀಯ ನಿವೃತ್ತಿ ಹೊಂದುವುದಾಗಿ ಮಹಾರಾಷ್ಟ್ರ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವೆ ಪಂಕಜಾ ಮುಂಡೆ ಹೇಳಿದ್ದಾರೆ.

ಚಿಕ್ಕಿ ಹಗರಣ ಸಂಬಂಧ ಇಲ್ಲಿಯವರೆಗೂ ಯಾವುದೇ ಪ್ರತಿಕ್ರಿಯೆ ನೀಡದಿದ್ದ ಪಂಕಜ ಮುಂಡೆ ಮೊದಲ ಬಾರಿಗೆ ಮೌನ ಮುರಿದಿದ್ದಾರೆ,  ತಾನು ಯಾವುದೇ ನಿಯಮ ಉಲ್ಲಂಘನೆ ಮಾಡಿಲ್ಲ. ಇಲಾಖೆಯ ಕಾನೂನಿನಂತೆ ಟೆಂಡರ್ ಪ್ರಕ್ರಿಯೆ ನಡೆಸಿರುವುದಾಗಿ ಪಂಕಜ ಸಮರ್ಥಿಸಿಕೊಂಡಿದ್ದಾರೆ. ಭ್ರಷ್ಚಾಚಾರ ವಿರೋಧಿ ಶಾಖೆಗೆ ಎಲ್ಲಾ ಎಲ್ಲಾ ದಾಖಲೆಗಳನ್ನು ನೀಡಿದ್ದು, ತಪ್ಪು ರುಜುವಾತದರೇ ರಾಜಕೀಯ ಬಿಡುವುದಾಗಿ ತಿಳಿಸಿದ್ದಾರೆ,

ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯಿಂದ ಬುಡಕಟ್ಟು ಜನಾಂಗ ಮಕ್ಕಳಿಗೆ ನೀಡುವ ಚಿಕ್ಕಿ,ಮ್ಯಾಟ್, ಪುಸ್ತಕ ಹಾಗೂ ಇನ್ನಿತರೆ ವಸ್ತುಗಳಿಗೆ ನೀಡಿರುವ ಟೆಂಡರ್ ಕಾನೂನು ಬಾಹಿರವಾಗಿದೆ. ಹೀಗಾಗಿ ಪಂಕಜ ಮುಂಡೆ ರಾಜೀನಾಮೆ  ನೀಡಬೇಕೆಂದು ಮಹಾರಾಷ್ಟ್ರ ಕಾಂಗ್ರೆಸ್ ಆಗ್ರಹಿಸಿತ್ತು.

No Comments

Leave A Comment