Log In
BREAKING NEWS >
ಉಡುಪಿಯ ಶ್ರೀಲಕ್ಷ್ಮೀವೆ೦ಕಟೇಶ ದೇವಸ್ಥಾನದಲ್ಲಿ ಸೆ.27ರಿ೦ದ ಮೊದಲ್ಗೊ೦ಡು ಅಕ್ಟೋಬರ್ 2 ರವರೆಗೆ ಶ್ರೀಶಾರದಾ ಮಹೋತ್ಸವ ಕಾರ್ಯಕ್ರಮ ಜರಗಲಿದೆ ಎ೦ದು ಶ್ರೀಶಾರದಾ ಮಹೋತ್ಸವ ಸಮಿತಿಯ ಪ್ರಕಟಣೆ ತಿಳಿಸಿದೆ.....

ವ್ಯಾಟ್ ತೆರಿಗೆ ಹೆಚ್ಚಳ: ಎಎಪಿ ವಿರುದ್ಧ ಯುವ ಕಾಂಗ್ರೆಸ್ ಪ್ರತಿಭಟನೆ

An activist of the youth wing of India's opposition Congress party burns a banner of Kejriwal during a protest in New Delhiನವದೆಹಲಿ: ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ನೇತೃತ್ವದ ಸರ್ಕಾರ ವ್ಯಾಟ್ ತೆರಿಗೆಯನ್ನು ಶೇ.20 ರಿಂದ ಶೇ.30ಕ್ಕೆ ಏರಿಕೆ ಮಾಡಿರುವುದನ್ನು ವಿರೋಧಿಸಿರುವ ಯುವ ಕಾಂಗ್ರೆಸ್ ಕಾರ್ಯಕರ್ತರು ಎಎಪಿ ವಿರುದ್ಧ ದೆಹಲಿಯಾದ್ಯಂತ ಬುಧವಾರ ಪ್ರತಿಭಟನೆ ನಡೆಸುತ್ತಿದೆ.

ಬಜೆಟ್ ಮಂಡನೆ ಸಂದರ್ಭದಲ್ಲ ಅಗತ್ಯ ವಸ್ತುಗಳ ಮೇಲಿರುವ ತೆರಿಗೆ ಇಳಿಸುವುದಾಗಿ ಆಮ್ ಆದ್ಮಿ ಸರ್ಕಾರ ಜನರಿಗೆ ಭರವಸೆ ನೀಡಿತ್ತು. ಆದರೆ, ನಿನ್ನೆ ತನ್ನ ಭರವಸೆಯನ್ನು ತಲೆಕೆಳಗಾಗಿ ಮಾಡಿದ್ದ ಆಪ್ ವ್ಯಾಟ್ ತೆರಿಗೆಯನ್ನು ಶೇ.20 ರಿಂದ 30ಕ್ಕೆ ಏರಿಕೆ ಮಾಡಿತ್ತು. ಇದರ ಪರಿಣಾಮವಾಗಿ ಪೆಟ್ರೋಲ್ ದರ, ಅಡುಗೆ ಅನಿಲ, ಸಿಎನ್ಜಿ ಮತ್ತು ಮದ್ಯದ ದರಗಳು ಏರಿಕೆಯಾಗಲಿದೆ ಎಂದು ಹೇಳಲಾಗುತ್ತಿದೆ.

ಹೀಗಾಗಿ ಭರವಸೆಗಳನ್ನು ಈಡೇರಿಸದ ಆಪ್ ವಿರುದ್ಧ ಹರಿಹಾಯ್ದಿರುವ ಯುವ ಕಾಂಗ್ರೆಸ್ ನ ಕಾರ್ಯಕರ್ತರು ಅರವಿಂದ್ ಕೇಜ್ರವಾಲ್ ಅವರ ದೆಹಲಿ ನಿವಾಸದೆದುರು ಪ್ರತಿಭಟನೆ ನಡೆಸುತ್ತಿದ್ದು, ಅರವಿಂದ್ ಕೇಜ್ರಿವಾಲ್ ಹಾಗೂ ಆಪ್ ಪಕ್ಷದ ವಿರುದ್ಧ ಘೋಷಣೆಗಳನ್ನು ಕೂಗುತ್ತಿದೆ. 

No Comments

Leave A Comment