Log In
BREAKING NEWS >
ಉಡುಪಿಯ ಶ್ರೀಲಕ್ಷ್ಮೀವೆ೦ಕಟೇಶ ದೇವಸ್ಥಾನದಲ್ಲಿ ಸೆ.27ರಿ೦ದ ಮೊದಲ್ಗೊ೦ಡು ಅಕ್ಟೋಬರ್ 2 ರವರೆಗೆ ಶ್ರೀಶಾರದಾ ಮಹೋತ್ಸವ ಕಾರ್ಯಕ್ರಮ ಜರಗಲಿದೆ ಎ೦ದು ಶ್ರೀಶಾರದಾ ಮಹೋತ್ಸವ ಸಮಿತಿಯ ಪ್ರಕಟಣೆ ತಿಳಿಸಿದೆ.....

ಹಿಂದೂ ಮಹಾಸಾಗರ ಭಾರತದ ಭಾಗ ಅಲ್ಲ : ಚೀನಾದ ಹೊಸ ತಗಾದೆ

chinaಬೀಜಿಂಗ್: ಅರುಣಾಚಲ ಪ್ರದೇಶದ ಗಡಿ ವಿಷಯದಲ್ಲಿ ಕ್ಯಾತೆ ತೆಗೆಯುತ್ತಿದ್ದ ಚೀನಾ ಈಗ ಹಿಂದೂ ಮಹಾಸಾಗರದ ವಿಷಯದಲ್ಲೂ ತಕರಾರು ಪ್ರಾರಂಭಿಸಿದೆ.

ಚೀನಾದ ರಕ್ಷಣಾ ಸಚಿವಾಲಯದ ಪ್ರಕಾರ ಹಿಂದೂ ಮಹಾಸಾಗರ ಭಾರತಕ್ಕೆ ಸೇರಿಲ್ಲವಂತೆ, ಅದನ್ನು ಭಾರತದ ಪ್ರದೇಶ ಎಂದು ಪರಿಗಣಿಸಲು ಸಾಧ್ಯವಿಲ್ಲ ಎಂದು ರಕ್ಷಣಾ ಸಚಿವಾಲಯ ಹೇಳಿದೆ. ಹಿಂದೂ ಮಹಾಸಾಗರದಲ್ಲಿ ಇತರ ರಾಷ್ಟ್ರಗಳ ನೌಕಾಪಡೆಗಳು ಸುಲಭವಾಗಿ ಸಂಚರಿಸಲು ಸಾಧ್ಯವಾಗದೆ ಇರುವುದನ್ನು ಆಕ್ಷೇಪಿಸಿರುವ ಚೀನಾ ಈ ಹೇಳಿಕೆ ನೀಡಿದೆ.

ಸಮುದ್ರ ಪ್ರದೇಶದಲ್ಲಿ ನೌಕಾ ಕಾರ್ಯಚರಣೆಯನ್ನು ವಿಸ್ತರಿಸಾಲು ಯತ್ನಿಸುತ್ತಿದ್ದು, ಸಮುದ್ರ ಪ್ರದೇಶಗಳನ್ನು ಕಾರ್ಯಾಚರಣೆಯ ಕಾನೂನುಬದ್ಧ ಪ್ರದೇಶದ ಭಾಗವಾಗಿ ಮಾತ್ರ ಪರಿಗಣಿಸಬಹುದೇ ಹೊರತು ಭಾರತದ ಜಾಗವಾಗಲು ಸಾಧ್ಯವಿಲ್ಲ ಎಂಬುದು ಚೀನಾದ ಹೊಸ ವಾದವಾಗಿದೆ.

ಹಿಂದೂ ಮಹಾಸಾಗರವನ್ನು ಸ್ಥಿರಗೊಳಿಸುವಲ್ಲಿ ಭಾರತ ಪ್ರಮುಖ ಪಾತ್ರ ವಹಿಸುತ್ತದೆ ಎಂಬುದನ್ನು ಒಪ್ಪಬಹುದೇ ಹೊರತು, ಸಂಪೂರ್ಣವಾಗಿ ಅದು ಭಾರತಕ್ಕೆ ಸೇರಿದ ಪ್ರದೇಶ ಎಂಬುದನ್ನು ಒಪ್ಪಲು ಸಾಧ್ಯವಿಲ್ಲ. ಒಂದು ವೇಳೆ ಒಪ್ಪಬೇಕು ಎಂದಾದಲ್ಲಿ ಅಲ್ಲಿ ಅಮೆರಿಕ ರಷ್ಯಾ ಮತ್ತು ಆಸ್ಟ್ರೇಲಿಯಾದ ನೌಕಾದಳದವರು ಸಂಚರಿಸುತ್ತಿರುವುದರ ಬಗ್ಗೆ ವಿವರಣೆ ನೀಡಬೇಕಿದೆ ಎಂದು ಚೀನಾದ ಹಿರಿಯ ಕ್ಯಾಪ್ಟನ್ ಝಾವೋ ಯಿ ಭಾರತದ ಪತ್ರಕರ್ತರಿಗೆ ತಿಳಿಸಿದ್ದಾರೆ.

ಹಿಂದೂ ಮಹಾಸಾಗರ ಅಂತಾರಾಷ್ಟ್ರೀಯ ಕಡಲ ವ್ಯಾಪಾರ ದೃಷ್ಟಿಯಿಂದ ಚೀನಾಗೆ ಮಾತ್ರವಲ್ಲದೆ ವಿಶ್ವಕ್ಕೂ ಮಹತ್ವ ಪಡೆದುಕೊಂಡಿದೆ ಎಂದು ಚೀನಾ ಅಭಿಪ್ರಾಯಪಟ್ಟಿದೆ. ಹಿಂದೂ ಮಹಾಸಾಗರದಲ್ಲಿ ಸಂಚರಿಸಲು ಚೀನೀ ನೌಕಾಪಡೆಗೆ ಇದು ಅರ್ಥವಾಗಳಿವೆ ಎಂದು ಕ್ಯಾಪ್ಟನ್ ಝಾವೋ ಯಿ ಹೇಳಿದ್ದಾರೆ.

No Comments

Leave A Comment