Log In
BREAKING NEWS >
ಉಡುಪಿಯ ಶ್ರೀಲಕ್ಷ್ಮೀವೆ೦ಕಟೇಶ ದೇವಸ್ಥಾನದಲ್ಲಿ ಸೆ.27ರಿ೦ದ ಮೊದಲ್ಗೊ೦ಡು ಅಕ್ಟೋಬರ್ 2 ರವರೆಗೆ ಶ್ರೀಶಾರದಾ ಮಹೋತ್ಸವ ಕಾರ್ಯಕ್ರಮ ಜರಗಲಿದೆ ಎ೦ದು ಶ್ರೀಶಾರದಾ ಮಹೋತ್ಸವ ಸಮಿತಿಯ ಪ್ರಕಟಣೆ ತಿಳಿಸಿದೆ.....

ರೇಪ್ ಸಂತ್ರಸ್ತೆ ಜೊತೆ ರಾಜಿ; ಮದ್ರಾಸ್ ಜಡ್ಜ್ ಆದೇಶಕ್ಕೆ ಸುಪ್ರೀಂ ಗರಂ

supremನವದೆಹಲಿ: ಅತ್ಯಾಚಾರಕ್ಕೊಳಗಾದ ಸಂತ್ರಸ್ತೆ ಜೊತೆ ಮಾತುಕತೆ ನಡೆಸಿ ಸಂಧಾನ ಮಾಡಿಕೊಳ್ಳುವಂತೆ ಅತ್ಯಾಚಾರಿಗೆ ತಮಿಳುನಾಡು ಹೈಕೋರ್ಟ್ ಜಡ್ಜ್ ನೀಡಿರುವ ಆದೇಶಕ್ಕೆ ಸುಪ್ರೀಂಕೋರ್ಟ್ ಬುಧವಾರ ತೀವ್ರ ಆಕ್ಷೇಪವ್ಯಕ್ತಪಡಿಸಿದೆ. ಮಹಿಳೆಯ ದೇಹ ದೇಗುಲ ಇದ್ದಂತೆ, ಹಾಗಾಗಿ ರೇಪ್ ಪ್ರಕರಣಗಳಲ್ಲಿನ ಆರೋಪಿಗಳಿಗೆ ಸಂಧಾನ ನಡೆಸಿ ಎಂದು ಆದೇಶ ನೀಡುವುದು ಸರಿಯಲ್ಲ ಎಂದು ಸುಪ್ರೀಂ ಪೀಠ ಅಭಿಪ್ರಾಯವ್ಯಕ್ತಪಡಿಸಿದೆ.

ಇತ್ತೀಚೆಗಷ್ಟೇ ತಮಿಳುನಾಡು ಹೈಕೋರ್ಟ್ ನ್ಯಾಯಾಧೀಶರಾದ ಪಿ ದೇವದಾಸ್, ಅತ್ಯಾಚಾರಿಯೊಬ್ಬನಿಗೆ ಮಧ್ಯಂತರ ಜಾಮೀನು ನೀಡಿ, ಸಂತ್ರಸ್ತೆ ಯುವತಿ ಜೊತೆ ಮಾತುಕತೆ ನಡೆಸಿ ಸಂಧಾನ ಮಾಡಿಕೊಳ್ಳುವಂತೆ ಸೂಚಿಸಿದ್ದರು. ಒಂದು ವೇಳೆ ಸಂತ್ರಸ್ತೆ ಸಂಧಾನಕ್ಕೆ ಒಪ್ಪಿದರೆ ಶಿಕ್ಷೆ ರದ್ದುಪಡಿಸುವುದಾಗಿ ಅಭಿಪ್ರಾಯವ್ಯಕ್ತಪಡಿಸಿದ್ದರು. ಈ ಆದೇಶ ಸಾರ್ವಜನಿಕವಾಗಿ ಸಾಕಷ್ಟು ವಿವಾದ, ಚರ್ಚೆಗೆ ಎಡೆಮಾಡಿಕೊಟ್ಟಿತ್ತು.

ಅತ್ಯಾಚಾರದಂತಹ ಪ್ರಕರಣಗಳಲ್ಲಿ ಯಾವುದೇ ಸಂಧಾನ, ಮಾತುಕತೆ ನಡೆಸುವುದು ಮಹಿಳೆಯ ಗೌರವಕ್ಕೆ ವಿರುದ್ಧವಾದದ್ದು ಎಂದು ಸುಪ್ರೀಂಕೋರ್ಟ್ ಹೇಳಿದೆ.

ಮಧ್ಯಪ್ರದೇಶದಲ್ಲಿ ನಡೆದ ಅತ್ಯಾಚಾರ ಪ್ರಕರಣವೊಂದರ ವಿಚಾರಣೆ ವೇಳೆ ಸುಪ್ರೀಂಕೋರ್ಟ್ ಮದ್ರಾಸ್ ಹೈಕೋರ್ಟ್ ನ್ಯಾಯಾಧೀಶರ ಆದೇಶದ ಬಗ್ಗೆ ಈ ಅಭಿಪ್ರಾಯವ್ಯಕ್ತಪಡಿಸಿದೆ.

No Comments

Leave A Comment