Log In
BREAKING NEWS >
ಉಡುಪಿಯ ಶ್ರೀಲಕ್ಷ್ಮೀವೆ೦ಕಟೇಶ ದೇವಸ್ಥಾನದಲ್ಲಿ ಸೆ.27ರಿ೦ದ ಮೊದಲ್ಗೊ೦ಡು ಅಕ್ಟೋಬರ್ 2 ರವರೆಗೆ ಶ್ರೀಶಾರದಾ ಮಹೋತ್ಸವ ಕಾರ್ಯಕ್ರಮ ಜರಗಲಿದೆ ಎ೦ದು ಶ್ರೀಶಾರದಾ ಮಹೋತ್ಸವ ಸಮಿತಿಯ ಪ್ರಕಟಣೆ ತಿಳಿಸಿದೆ.....

ಮಹಿಳಾ ಡಾಕ್ಟರ್ ‘ಕಾಲರ್’ ಸರಿ ಮಾಡಿ ವಿವಾದಕ್ಕೀಡಾದ ಬಿಜೆಪಿ ಮಿನಿಸ್ಟರ್

JK-Minister-400ಜಮ್ಮು: ಯುವ ವೈದ್ಯೆ ತನ್ನ ಮೆಡಿಕಲ್‌ ಕೋಟನ್ನು ಸರಿಯಾಗಿ ತೊಟ್ಟಿಲ್ಲ ಎಂದು ಈ ವರ್ಷ ಫೆಬ್ರವರಿಯಲ್ಲಿ ಬಹಿರಂಗವಾಗಿ ಹೇಳುವ ಮೂಲಕ ಆಕೆಗೆ ಮಾನಸಿಕ ಕಿರುಕುಳ ನೀಡಿದರೆಂದು ತೀವ್ರ ಟೀಕೆ, ವಿವಾದಕ್ಕೆ ಗುರಿಯಾಗಿದ್ದ ಜಮ್ಮು – ಕಾಶ್ಮೀರದ ಬಿಜೆಪಿ ಸಚಿವ ಚೌಧರಿ ಲಾಲ್‌ ಸಿಂಗ್‌ ಅವರು ಈಗ ಪುನಃ ಅದೇ ಬಗೆಯ ವಿವಾದವನ್ನು ಸೃಷ್ಟಿಸಿದ್ದಾರೆ.

ಅಮರನಾಥ ಯಾತ್ರೆ ಆರಂಭಕ್ಕೆ ಮುನ್ನ ಯಾತ್ರಾರ್ಥಿಗಳಿಗೆ ತುರ್ತಾಗಿ ವೈದ್ಯಕೀಯ ನೆಲೆಯಲ್ಲಿ ನೆರವಾಗುವ ನಿಟ್ಟಿನಲ್ಲಿ ಸರಕಾರಿ ವೈದ್ಯ ಸಮುದಾಯ ಎಷ್ಟರಮಟ್ಟಿಗೆ ಸಜ್ಜಾಗಿದೆ ಎಂಬುದನ್ನು ಖಾತರಿಪಡಿಸಿಕೊಳ್ಳಲು ಜಮ್ಮುವಿನ ಲಖನ್‌ಪುರ ಸರಕಾರಿ ಆಸ್ಪತ್ರೆಗೆ ಭೇಟಿ ನೀಡಿದ ಸಚಿವ ಸಿಂಗ್‌ ಅವರು ಯುವ ವೈದ್ಯೆಯೊಬ್ಬರ ಬಿಳಿ ಕೋಟಿನ ಕಾಲರ್‌ ಪಟ್ಟಿ ಸರಿಯಾಗಿಲ್ಲದಿರುವುದನ್ನು ಗಮನಿಸಿ “ಬಿಟಿಯಾ, ನಿಮ್ಮ ಕಾಲರ್‌ ಪಟ್ಟಿ ಸರಿಯಾಗಿಲ್ಲ’ ಎಂದು ಹೇಳುತ್ತಾ ಒಡನೆಯೇ ಖುದ್ದಾಗಿ ಆಕೆಯ ಕಾಲರ್‌ ಸರಿಪಡಿಸಿದ ಘಟನೆ ನಡೆದಿದೆ.

ಹೀಗೆ ಸಚಿವ ಸಿಂಗ್‌ ಅವರು ಯುವ ವೈದ್ಯೆಯ ಕಾಲರ್‌ ಸರಿಪಡಿಸುತ್ತಿರುವ ಫೋಟೋ ಸಾಮಾಜಿಕ ಜಾಲ ತಾಣದಲ್ಲಿ ಅಪ್ ಅಪ್ ಲೋಡ್ ಆಗಿದ್ದು, ಶರವೇಗದಿಂದ ಅತ್ಯಧಿಕ ಸಂಖ್ಯೆಯ ಜನರನ್ನು ತಲುಪಿದ್ದು ಸಚಿವರ ವರ್ತನೆಗೆ ಛೀಮಾರಿ ಹಾಕಿದ್ದಾರೆ.

“ಯುವ ವೈದ್ಯೆಯ ಬಿಳಿ ಕೋಟಿನ ಕಾಲರ್‌ ಪಟ್ಟಿ ನೀಟಾಗಿ ಮಡಚಿಕೊಂಡಿಲ್ಲ ಎಂಬುದನ್ನು ಗಮನಿಸಿದ ಸಚಿವರು ಆಕೆಯ ಬಳಿ ಸಾರಿ ತಾವೇ ತಮ್ಮ ಕೈಯಿಂದ ಆಕೆಯ ಕಾಲರ್‌ ಸರಿಪಡಿಸಿದರು. ಆದರೆ ಸಚಿವರು ಹೀಗೆ ಕಾಲರ್‌ ಸರಿಪಡಿಸಲು ತನ್ನ ಮೈಮೇಲೆ ಕೈಹಾಕಿರುವುದಕ್ಕೆ ಆಕೆ ಯಾವುದೇ ಪ್ರತಿರೋಧ, ಪ್ರತಿಭಟನೆ ತೋರಲಿಲ್ಲ’ ಎಂದು ಈ ಸಮಗ್ರ ಘಟನೆಗೆ ಸಾಕ್ಷಿಯಾದ ಹಿರಿಯ ಅಧಿಕಾರಿಯೊಬ್ಬರು ಹೇಳಿದರು.

ವಿಶೇಷವೇನೆಂದರೆ ಸಚಿವ ಸಿಂಗ್‌ ಅವರು ಯುವ ವೈದ್ಯೆಯ ಕೋಟಿನ ಕಾಲರ್‌ ಪಟ್ಟಿಯನ್ನು ಸರಿಪಡಿಸುವಾಗ ಅಲ್ಲೇ ಪಕ್ಕದಲ್ಲಿ ನಿಂತಿದ್ದ ಮತ್ತೋರ್ವ ಯುವ ವೈದ್ಯ ಒಡನೆಯೇ ತನ್ನ ಕೋಟಿನ ಕಾಲರ್‌ ಪಟ್ಟಿಯನ್ನು ಸರಿಪಡಿಸಿಕೊಂಡರು ಎಂದು ಅದೇ ಅಧಿಕಾರಿ ಹೇಳಿದರು.

ಅದೇ ಅಧಿಕಾರಿ ಮುಂದುವರಿದು ಹೀಗೆ ಹೇಳಿದರು: ಸಚಿವರು ಏನನ್ನೂ ಕದ್ದು ಮುಚ್ಚಿ ಮಾಡಲಿಲ್ಲ; ಎಲ್ಲರೆದುರೇ ಬಹಿರಂಗವಾಗಿ ವೈದ್ಯೆಯ ಕಾಲರ್‌ ಪಟ್ಟಿ ಸರಿಪಡಿಸಿದರು. ಆಕೆಯನ್ನು ಸಚಿವರು ಅನುಚಿತವಾದ ರೀತಿಯಲ್ಲಿ ಮುಟ್ಟಿದರೆಂದು ಹೇಳಲಾಗದು.

ಈ ಘಟನೆ ನಡೆದಾಗ ಸಚಿವ ಸಿಂಗ್‌ ಅವರೊಂದಿಗೆ ಆರೋಗ್ಯ ಮತ್ತು ವೈದ್ಯಕೀಯ ಶಿಕ್ಷಣ ಇಲಾಖೆಯ ಕಾರ್ಯದರ್ಶಿ ಡಾ| ಮನ್‌ದೀಪ್‌ ಭಂಡಾರಿ ಮತ್ತು ಕಥುವಾ ಎಸ್‌ಪಿ ನಜೀರ್‌ ಖಾನ್‌ ಕೂಡ ಇದ್ದರು.

No Comments

Leave A Comment