Log In
BREAKING NEWS >
ಉತ್ತರ ಪ್ರದೇಶ: ಮನೆಯಲ್ಲಿದ್ದ ಪಟಾಕಿ ಸ್ಫೋಟ, ತಾಯಿ-ಮಗಳ ಸಾವು...

ಅಘ್ಘಾನಿಸ್ತಾನದಲ್ಲಿ ಆತ್ಮಹತ್ಯಾ ಬಾಂಬ್ ದಾಳಿ; 7 ಮಂದಿ ಬಲಿ, ಹಲವು ಗಾಯ

CarBombಕಾಬೂಲ್: ಅಫ್ಘಾನಿಸ್ತಾನದ ಜನನಿಬಿಡ ಶಾಪಿಂಗ್ ಪ್ರದೇಶದಲ್ಲಿ ಉಗ್ರರು ನಡೆಸಿದ ಆತ್ಮಹತ್ಯಾ ಬಾಂಬ್ ಸ್ಫೋಟದಲ್ಲಿ ಸುಮಾರು ಏಳು ಮಂದಿ ಬಲಿಯಾಗಿರುವ ಘಟನೆ ಕಾಬೂಲಿನ ಖ್ವಾಜಿ ಪ್ಲಾಜಾ ಸಮೀಪ ಮಂಗಳವಾರ ನಡೆದಿದೆ.

ಕಾಬೂಲ್ ನಲ್ಲಿರುವ ನ್ಯಾಟೋ ಮಿಲಿಟರಿ ಪಡೆಯನ್ನು ಗುರಿಯಾಗಿರಿಸಿಕೊಂಡು ಕಾರಿನಲ್ಲಿ ಸ್ಫೋಟಕ ವಸ್ತುಗಳನ್ನು ತುಂಬಿಕೊಂಡು ಬಂದು ಆತ್ಮಹತ್ಯಾ ದಾಳಿ ನಡೆಸಿರುವುದಾಗಿ ಅಧಿಕಾರಿಗಳು ತಿಳಿಸಿದ್ದಾರೆ. ಪೂರ್ವ ಕಾಬೂಲ್ ನಲ್ಲಿ ಈ ಘಟನೆ ನಡೆದಿದ್ದು, ನಗರದಾದ್ಯಂತ ಭಾರೀ ಪ್ರಮಾಣದ ಹೊಗೆ ತುಂಬಿಕೊಂಡಿರುವುದಾಗಿ ನ್ಯಾಟೋ ವಕ್ತಾರೊಬ್ಬರು ಮಾಧ್ಯಮಕ್ಕೆ ವಿವರಿಸಿದ್ದಾರೆ.

ಆತ್ಮಹತ್ಯಾ ಕಾರು ಬಾಂಬ್ ಸ್ಫೋಟದಲ್ಲಿ 7 ಮಂದಿ ಸಾವನ್ನಪ್ಪಿದ್ದು, ಗಂಡಸರು, ಹೆಂಗಸರು ಸೇರಿ 16  ಜನರು ಗಾಯಗೊಂಡಿರುವುದಾಗಿ ಮಾಧ್ಯಮದ ವರದಿ ತಿಳಿಸಿದೆ.

ಘಟನೆಯಲ್ಲಿ ಎಷ್ಟು ಮಂದಿ ಸಾವನ್ನಪ್ಪಿದ್ದಾರೆ ಎಂಬ ಮಾಹಿತಿ ಇನ್ನಷ್ಟೇ ನಿಖರವಾಗಿ ತಿಳಿಯಬೇಕಾಗಿದೆ. ಸ್ಫೋಟ ಹೊಣೆಯನ್ನು ಈವರೆಗೂ ಯಾವ ಸಂಘಟನೆಯೂ ಹೊತ್ತುಕೊಂಡಿಲ್ಲ.

No Comments

Leave A Comment