Log In
BREAKING NEWS >
ಉತ್ತರ ಪ್ರದೇಶ: ಮನೆಯಲ್ಲಿದ್ದ ಪಟಾಕಿ ಸ್ಫೋಟ, ತಾಯಿ-ಮಗಳ ಸಾವು...

ಉಡುಪಿ:ಕಲ್ಸ೦ಕ ಬಳಿ ಸರಣಿ ಕಳ್ಳತನ-ಲಕ್ಷಾ೦ತರ ರೂ ಮೊಬೈಲ್ ಕಳವು

ಉಡುಪಿ: ಫಿರ್ಯಾದಿದಾರರಾದ ಶ್ರೀನಿವಾಸ ಭಟ್ (38) ತಂದೆ ಭಟ್ ಪಾಂಡುರಂಗ, ದೊಡ್ಡಣಗುಡ್ಡೆ ಇವರು ಉಡುಪಿ ಕಲ್ಸಂಕ ಎಂಬಲ್ಲಿ ಶ್ರೇಯಸ್ ಮೊಬೈಲ್ಸ್ ಎಂಬ ಮೊಬೈಲ್ ಫೋನ್ ಅಂಗಡಿ ಇಟ್ಟುಕೊಂಡಿದ್ದು ದಿನಾಂಕ 28-06-2015 ರಂದು ಮಧ್ಯಾಹ್ನ 13-30 ಗಂಟೆಗೆ ಅಂಗಡಿಗೆ ಬೀಗ ಹಾಕಿ ಹೋಗಿದ್ದು, ದಿನಾಂಕ 30-06-2015 ರಂದು ಬೆಳಿಗ್ಗೆ 09-00 ಗಂಟೆಗೆ ಬಂದಾಗ ಅಂಗಡಿಯು ಯಾರೋ ಕಳ್ಳರು ಅಂಗಡಿಯ ಬೀಗ ಮುರಿದು ಒಳಪ್ರವೇಶಿಸಿ 31 ಮೊಬೈಲ್ ಫೋನ್, 8 ಚಾರ್ಜರ್, 14 ಬ್ಯಾಟರಿ, 9 ಮೆಮೊರಿ ಕಾರ್ಡ್, 4 ಪೆನ್ ಡ್ರೈವ್ ಇವುಗಳನ್ನು ಕಳವು ಮಾಡಿಕೊಂಡು ಹೋಗಿದ್ದು ಕಳವಾದ ಸೊತ್ತುಗಳ ಒಟ್ಟು ಮೌಲ್ಯ ರೂ 2,32,700/- ಆಗಿರುತ್ತದೆ ಎಂಬುದಾಗಿ ಶ್ರೀನಿವಾಸ ಭಟ್ ರವರು ನೀಡಿದ ದೂರಿನಂತೆ ಉಡುಪಿ ನಗರ ಪೊಲೀಸ್‌ ಠಾಣಾ ಅಪರಾದ ಕ್ರಮಾಂಕ 156/2015 ಕಲಂ 454,457, 380 ಐಪಿಸಿಯಂತೆ ಪ್ರಕರಣ ದಾಖಲಿಸಿಕೊಳ್ಳಲಾಗಿದೆ.

ಉಡುಪಿ: ಫಿರ್ಯಾದಿದಾರರಾದ ಸಂಪತ್ ಶೆಟ್ಟಿ, ಪ್ರಾಯ 33 ವರ್ಷ ತಂದೆ ರಾಜರಾಮ ಶೆಟ್ಟಿ , ವಾಸ ರಜತಾದ್ರಿ ಮನೆ , ರಟ್ಟಾಡಿ ಪೋಸ್ಟ್ , ಮತ್ತು ಗ್ರಾಮ ಕುಂದಾಪುರ ತಾಲೂಕು ಇವರು ಶಿವಳ್ಳಿ ಗ್ರಾಮದ ಗುಂಡಿಬೈಲಿನಲ್ಲಿರುವ ಶ್ರೀ ಕೃಷ್ಣಾನುಗೃಹ ಕಾಂಪ್ಲೆಕ್ಸ್ ನಲ್ಲಿ ಜಲದುರ್ಗಿ ಸೇಲ್ಸ್ ಎಂಬ ಎಲೆಕ್ಟ್ರಿಕಲ್ಸ್ ವಸ್ತುಗಳ ಮಾರಾಟ ಮಳಿಗೆ ಹೊಂದಿದ್ದು ದಿನಾಂಕ 27-06-2015 ರಂದು ಸಂಜೆ 17-30 ಗಂಟೆಗೆ ಅಂಗಡಿಯಲ್ಲಿ ಕೆಲಸ ಮಾಡುವ ರೇಣುಕಾ ಎಂಬವರು ಅಂಗಡಿಗೆ ಬೀಗ ಹಾಕಿಹೋಗಿದ್ದು , ದಿನಾಂಕ 28-06-2015 ರಂದು ಆದಿತ್ಯವಾರ ಅಂಗಡಿಗೆ ರಜೆ ಇದ್ದು, ದಿನಾಂಕ 29-06-2015 ರಂದು ಬೆಳಿಗ್ಗೆ 09-45 ಗಂಟೆಗೆ ರೇಣುಕಾ ಫೋನ್ ಮಾಡಿ ಅಂಗಡಿಯಲ್ಲಿ ಕಳ್ಳತನವಾಗಿದ್ದಾಗಿ ತಿಳಿಸಿದ್ದು ಫಿರ್ಯಾದಿದಾರರು ಬಂದು ನೋಡಿದಾಗ ಅಂಗಡಿಗೆ ಹಾಕಿದ 2 ಬೀಗಗಳು ಇದ್ದಿರುವುದಿಲ್ಲ. ಒಳಗೆ ಹೋಗಿ ನೋಡಿದಾಗ ಯಾರೋ ಕಳ್ಳರು ಅಂಗಡಿಗೆ ಹಾಕಿದ್ದ ಬೀಗ ಮುರಿದು ರೂ 1,85,590/ ರೂ ಮೌಲ್ಯದ ಫ್ಯಾನ್ , ಮಿಕ್ಸಿ , ಬಲ್ಬ್ ಇಲೆಕ್ಟ್ರಾನಿಕ್ ವಸ್ತುಗಳನ್ನು ಕಳವು ಮಾಡಿಕೊಂಡು ಹೋಗಿದ್ದಾಗಿರುತ್ತದೆ.ಎಂಬುದಾಗಿ ಸಂಪತ್ ಶೆಟ್ಟಿ ರವರು ನೀಡಿದ ದೂರಿನಂತೆ ಉಡುಪಿ ನಗರ ಪೊಲೀಸ್‌ ಠಾಣಾ ಅಪರಾದ ಕ್ರಮಾಂಕ 157/2015 ಕಲಂ 454,457, 380 ಐಪಿಸಿಯಂತೆ ಪ್ರಕರಣ ದಾಖಲಿಸಿಕೊಳ್ಳಲಾಗಿದೆ.

No Comments

Leave A Comment