Log In
BREAKING NEWS >
ಉತ್ತರ ಪ್ರದೇಶ: ಮನೆಯಲ್ಲಿದ್ದ ಪಟಾಕಿ ಸ್ಫೋಟ, ತಾಯಿ-ಮಗಳ ಸಾವು...

ಮ್ಯಾಗಿ ರಫ್ತಿಗೆ ಬಾಂಬೆ ಹೈಕೋರ್ಟ್ ಅನುಮತಿ

maggieಬಾಂಬೆ: ಮ್ಯಾಗಿ ನೂಡಲ್ಸ್ ನ್ನು ರಫ್ತು ಮಾಡುವುದಕ್ಕೆ ಬಾಂಬೆ ಹೈಕೋರ್ಟ್ ನೆಸ್ಲೆ ಕಂಪನಿಗೆ ಜೂ.30 ರಂದು ಅನುಮತಿ ನೀಡಿದೆ.

ಮ್ಯಾಗಿ ನೂಡಲ್ಸ್ ನಲ್ಲಿ ಆರೋಗ್ಯಕ್ಕೆ ಹಾನಿಯುಂಟಾಗುವ ಅಂಶಗಳು ಪತ್ತೆಯಾಗಿದ್ದರಿಂದ  ಆಹಾರ ಸುರಕ್ಷತೆ ಮತ್ತು ಗುಣಮಟ್ಟ ಪ್ರಾಧಿಕಾರ ಮ್ಯಾಗಿ ಉತ್ಪನ್ನಗಳ ಮಾರಾಟವನ್ನು ನಿಷೇಧ ಮಾಡಿತ್ತು. ಇದನ್ನು ಪ್ರಶ್ನಿಸಿ, ನಿಷೇಧವನ್ನು ತೆರವುಗೊಳಿಸಲು ನೆಸ್ಲೆ ಕಂಪನಿ ಸಲ್ಲಿಸಿದ್ದ ಅರ್ಜಿಯನ್ನು ಜೂ.12 ರಂದು ಬಾಂಬೆ ಹೈಕೋರ್ಟ್ ವಜಾಗೊಳಿಸಿತ್ತು.

ಮಹಾರಾಷ್ಟ್ರ ಸರ್ಕಾರದಿಂದಲೂ ಮ್ಯಾಗಿ ಉತ್ಪನ್ನಗಳಿಗೆ ವಿಧಿಸಿದ್ದ ನಿಷೇಧವನ್ನು ನೆಸ್ಲೆ ಕಂಪನಿ ಪ್ರಶ್ನಿಸಿ ಮೇಲ್ಮನವಿ ಸಲ್ಲಿಸಿತ್ತು. ಮ್ಯಾಗಿಯಲ್ಲಿ ಆರೋಗ್ಯಕ್ಕೆ ಹಾನಿಯುಂಟುಮಾಡುವ ಸೀಸ ಹಾಗೂ ಆರ್ಸೆನಿಕ್‌  ಅಂಶ ಪತ್ತೆಯಾಗಿದ್ದರಿಂದ ಭಾರತದಲ್ಲಿ ಉತ್ಪನ್ನವನ್ನು ನಿಷೇಧಿಸಲಾಗಿದೆ. ಅಲ್ಲದೇ ಆಸ್ಟ್ರೇಲಿಯಾ ಸೇರಿದಂತೆ ವಿವಿಧ ರಾಷ್ಟ್ರಗಳಲ್ಲಿ ಮ್ಯಾಗಿ ಆಮದು ಮಾಡಿಕೊಳ್ಳುವುದಕ್ಕೆ ನಿಷೇಧ ವಿಧಿಸಲಾಗಿತ್ತು. ಈಗ ಮ್ಯಾಗಿಯನ್ನು ರಫ್ತು ಮಾಡುವುದಕ್ಕೆ ನೆಸ್ಲೆ ಇಂಡಿಯಾಗೆ ಬಾಂಬೆ ಹೈಕೋರ್ಟ್ ಅನುಮತಿ ನೀಡಿದೆ.

No Comments

Leave A Comment