Log In
BREAKING NEWS >
ಅಕ್ಟೋಬರ್ 29ರ೦ದು ಬೆಳಿಗ್ಗೆ 4.45ಕ್ಕೆಕಾರ್ತಿಕ ಮಾಸದ ಪ್ರಯುಕ್ತ ಉಡುಪಿಯ ಶ್ರೀಲಕ್ಷ್ಮೀವೆ೦ಕಟೇಶ ದೇವಸ್ಥಾನದಲ್ಲಿ ವಿಶ್ವರೂಪದರ್ಶನ ಕಾರ್ಯಕ್ರಮ ಜರಗಲಿದೆ

ಆರ್ಥಿಕ ಹೊಡೆತ, 1ವಾರ ಗ್ರೀಸ್ ಬ್ಯಾಂಕ್ ಬಂದ್, ಎಟಿಎಂ ಖಾಲಿ, ಖಾಲಿ

Greceಅಥೆನ್ಸ್: ಆರ್ಥಿಕ ಸಂಕಷ್ಟದ ಸುಳಿಗೆ ಸಿಲುಕಿರುವ ಗ್ರೀಸ್  ಒಂದು ವಾರಗಳ ಕಾಲ ಬ್ಯಾಂಕ್ ಮುಚ್ಚುವುದಾಗಿ ಸೋಮವಾರ ಘೋಷಿಸಿದ್ದು, ಆರ್ಥಿಕ ನಿಯಂತ್ರಣ ವಿಧಿಸಿರುವುದಾಗಿ ತಿಳಿಸಿದೆ. ಇದರಿಂದ ಆತಂಕಕ್ಕೆ ಒಳಗಾಗಿರುವ ನಾಗರಿಕರು ಎಟಿಎಂಗಳಲ್ಲಿದ್ದ ನಗದನ್ನು ತೆಗೆಯುವ ಮೂಲಕ ಖಾಲಿ ಮಾಡಿದ್ದಾರೆ.

ಈ ಘೋಷಣೆ ಹೊರಬಿದ್ದ ಕೂಡಲೇ ಜನರು ನಗದು ತೆಗೆಯಲು ಎಟಿಎಂಗಳ ಮುಂದೆ ಸಾಲು, ಸಾಲಾಗಿ ನಿಂತ ದೃಶ್ಯ ಕಂಡು ಬಂದಿದೆ. ಬಹುತೇಕ ಎಟಿಎಂಗಳಲ್ಲಿ ನಗದು, ಖಾಲಿಯಾಗಿದ್ದು, ಕೆಲವು ಎಟಿಎಂಗಳಲ್ಲಿ ಶೇ.40ರಷ್ಟು ಮಾತ್ರ ನಗದು ಹಣ ಇದ್ದಿರುವುದಾಗಿ ವರದಿ ತಿಳಿಸಿದೆ.

ಜುಲೈ 6ರವರೆಗೆ ಬ್ಯಾಂಕ್‌ಗಳು ಬಂದ್‌ ಎಂದು ತಿಳಿಸಿದ್ದು, ವಿದೇಶಿ ಪ್ರವಾಸಿಗರು, ಗ್ರೀಕ್‌ ಆರ್ಥಿಕತೆಯ ಪ್ರಮುಖ ಸಂಸ್ಥೆಗಳಿಗೆ ಈ ನಿರ್ಬಂಧಗಳಿಂದ ವಿನಾಯ್ತಿ ನೀಡಲಾಗಿದೆ ಎಂದು ಸರಕಾರಿ ಗಜೆಟ್‌ ಹೇಳಿದೆ.

ಈಗಾಗಲೇ ಗ್ರೀಸ್‌ಗೆ ಸಾಲ ನೀಡಿರುವ ಯುರೊ ಕರೆನ್ಸಿ ವಲಯದ ಸದಸ್ಯ ರಾಷ್ಟ್ರಗಳು ಗ್ರೀಸ್‌ಗೆ ನೀಡಿದ್ದ ಸಾಲ ಮರುಪಾವತಿ ಗಡುವು ಮಂಗಳವಾರಕ್ಕೆ ಮುಕ್ತಾಯವಾಗಲಿದೆ. ಸಾಲ ಪಾವತಿಸದಿದ್ದಲ್ಲಿ ಗ್ರೀಕ್ ದಿವಾಳಿ ಹೊಂದಿರುವ ದೇಶವಾಗಲಿದ್ದು ಯೂರೋ ಒಕ್ಕೂಟದಿಂದ ಹೊರಬರಬೇಕಾಗುತ್ತದೆ. ಇದರಿಂದ ತಪ್ಪಿಸಿ ಕೊಳ್ಳಲು ಗಡುವನ್ನು ವಿಸ್ತರಿಸಿರುವ ಹಣಕಾಸು ಸಂಸ್ಥೆಗಳು ಹೊಸ ಸಾಲ ನೀಡಬೇಕಾದರೆ ಕಠಿಣ ಮಿತವ್ಯಯ ಕ್ರಮಗಳು ಮತ್ತು ಆರ್ಥಿಕ ಸುಧಾರಣೆಗಳನ್ನು ಕೈ ಗೊಳ್ಳಬೇಕೆಂದು ಒತ್ತಡ ಹೇರಿವೆ.

No Comments

Leave A Comment