Log In
BREAKING NEWS >
ಉತ್ತರ ಪ್ರದೇಶ: ಮನೆಯಲ್ಲಿದ್ದ ಪಟಾಕಿ ಸ್ಫೋಟ, ತಾಯಿ-ಮಗಳ ಸಾವು...

ತಿಹಾರ್ ಜೈಲಿನಲ್ಲಿ ಸುರಂಗ ಕೊರೆದು ಕೈದಿಗಳಿಬ್ಬರು ಎಸ್ಕೇಪ್;ಓರ್ವ ಸೆರೆ

374621-tiharನವದೆಹಲಿ: ದೇಶದ ಅತ್ಯಂತ ಬಿಗಿ ಬಂದೋಬಸ್ತ್ ಹೊಂದಿರುವ ದೆಹಲಿಯ ತಿಹಾರ್ ಜೈಲಿನಲ್ಲಿದ್ದ ವಿಚಾರಣಾ ಕೈದಿಗಳಿಬ್ಬರು ಸುರಂಗ ತೋಡಿ ಆ ಮೂಲಕ ಪರಾರಿಯಾಗಿರುವ ಘಟನೆ ನಡೆದಿರುವುದಾಗಿ ಮಾಧ್ಯಮದ ವರದಿ ತಿಳಿಸಿದೆ.

ವರದಿ ಪ್ರಕಾರ, ತಪ್ಪಿಸಿಕೊಂಡಿದ್ದ ಒಬ್ಬ ಕೈದಿಯನ್ನು ಹಿಡಿದಿದ್ದು, ಮತ್ತೊಬ್ಬ ಕೈದಿ ತಪ್ಪಿಸಿಕೊಂಡಿದ್ದಾನೆ, ಆದರೆ ಇಬ್ಬರೂ ಕೈದಿಗಳು ತಪ್ಪಿಸಿಕೊಂಡು ಹೋಗಿದ್ದಾರೆಂದು ಮತ್ತೊಂದು ವರದಿ ಹೇಳಿದೆ.

ಜೈಲ್ ನಂ.7ರಲ್ಲಿದ್ದ ಕೈದಿಗಳಿಬ್ಬರು ಜೈಲಿನಿಂದ ಹೊರಹೋಗಲು ಅನುಕೂಲವಾಗುವಂತೆ ಸುರಂಗ ಕೊರೆದು ಅಲ್ಲಿಂದ ಪರಾರಿಯಾಗಿದ್ದರು. ಭಾನುವಾರ ರಾತ್ರಿ ಕೈದಿಗಳ ಸಂಖ್ಯೆಯನ್ನು ಕರೆಯುವ ಸಂದರ್ಭದಲ್ಲಿ ಇಬ್ಬರು ಕೈದಿಗಳು ಪ್ರತಿಕ್ರಿಯೆ ನೀಡದಿದ್ದ ಸಂದರ್ಭದಲ್ಲಿ ಪರಾರಿಯಾದ ಘಟನೆ ಬೆಳಕಿಗೆ ಬಂದಿದೆ.

ಇದೀಗ ದೆಹಲಿ ಪೊಲೀಸರು ತಪ್ಪಿಸಿಕೊಂಡಿರುವ ವಿಚಾರಣಾಧೀನ ಕೈದಿಗಳ ಶೋಧ ಕಾರ್ಯದಲ್ಲಿ ತೊಡಗಿರುವುದಾಗಿ ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ. ತಿಹಾರ್ ಸೆಂಟ್ರಲ್ ಜೈಲ್ ಮೂರು ಹಂತದ ಬಿಗಿ ಭದ್ರತೆಯನ್ನು ಹೊಂದಿದೆ. ತಿಹಾರ್ ಜೈಲಿನಲ್ಲಿ ದೆಹಲಿ ಮಾಜಿ ಕಾನೂನು ಸಚಿವ ಜಿತೇಂದ್ರ ಸಿಂಗ್ ತೋಮರ್, ನಕ್ಸಲೈಟ್ ಮುಖಂಡ ಖೋಬಾಡ್ ಗಾಂಡಿ ಸೇರಿದಂತೆ ಹಲವಾರು ಮಂದಿ ಪ್ರಮುಖ ಆರೋಪಿಗಳಿದ್ದಾರೆ.

No Comments

Leave A Comment