Log In
BREAKING NEWS >
ಸಮಸ್ತ ಓದುಗರಿಗೆ, ಜಾಹೀರಾತುದಾರರಿಗೆ, ಅಭಿಮಾನಿಗಳಿಗೆ ಕರಾವಳಿ ಕಿರಣ ಡಾಟ್ ಕಾ೦ ಬಳಗದವತಿಯಿ೦ದ ಬೆಳಕಿನ ಹಬ್ಬ ದೀಪಾವಳಿ ಹಬ್ಬದ ಶುಭಾಶಯಗಳು.... ಅಕ್ಟೋಬರ್ 29ರ೦ದು ಬೆಳಿಗ್ಗೆ 4.45ಕ್ಕೆಕಾರ್ತಿಕ ಮಾಸದ ಪ್ರಯುಕ್ತ ಉಡುಪಿಯ ಶ್ರೀಲಕ್ಷ್ಮೀವೆ೦ಕಟೇಶ ದೇವಸ್ಥಾನದಲ್ಲಿ ವಿಶ್ವರೂಪದರ್ಶನ ಕಾರ್ಯಕ್ರಮ ಜರಗಲಿದೆ

ಕಾಪು ವಿದ್ಯುತ್ ಗುತ್ತಿಗೆದಾರರ ಸಂಘದಿಂದ ಅಭಿನಂದನಾ ಕಾರ್ಯಕ್ರಮ

Abhinandaneಕಾಪು; ಕರ್ನಾಟಕ ರಾಜ್ಯದ ಅನುಮತಿ ಪಡೆದ ವಿದ್ಯುತ್ ಗುತ್ತಿಗೆದಾರರಿಂದ, ಕಾಪು ಮೆಸ್ಕಾಂ ಕಛೇರಿಯಲ್ಲಿ ಶಾಖಾಧಿಕಾರಿಯಾಗಿ ಕಾರ್ಯ ನಿರ್ವಹಿಸುತ್ತಿದ್ದ ಅವಿನಾಶ್‌ರವರು ಇತ್ತೀಚಿಗೆ ಗ್ರಹಸ್ತಾಶ್ರಮಕ್ಕೆ ಭಡ್ತಿಗೊಂಡಿದ್ದು, ಅವರನ್ನು ಸಂಘದ ಮಹಾಸಭೆಯಲ್ಲಿ ಅಭಿನಂದಿಸಲಾಯಿತು.

ಈ ಸಮಾರಂಭದಲ್ಲಿ ಮೆಸ್ಕಾಂ ಕಾಪು ಉಪವಿಭಾಗದ ಸಹಾಯಕ ಕಾರ್ಯನಿರ್ವಾಹಕ ಇಂಜಿನೀಯರರು, ನರಸಿಂಹ, ಪ್ರಭಾರ ಸಹಾಯಕ ಅಧಿಕಾರಿ ತಾಂತ್ರಿಕ ವಿಕ್ರಮ್, ಸಂಘದ ಉಡುಪಿ ಜಿಲ್ಲಾ ಘಟಕದ ಅಧ್ಯಕ್ಷರು ನಾಗರಾಜ ರಾವ್.ಎಂ, ಕೇಂದ್ರ ಸಲಹಾ ಸಮಿತಿ ಸದಸ್ಯ ಸತೀಶ್ ಎಂ ನಾಯಕ್, ಜಿಲ್ಲಾ ಕಾರ್ಯದರ್ಶಿ, ಎ.ಕೆ ಆಳ್ವ, ಜತೆ ಕಾರ್ಯದರ್ಶಿ ರಮಾನಂದ ಪೂಜಾರಿ, ಕೋಶಾಧಿಕಾರಿ ರಾಘವೇಂದ್ರ ರಾವ್, ಕಾಪು ಸಂಘದ ನೂತನ ಅಧ್ಯಕ್ಷ ಅನ್ವರ್ ಅಲಿ ಕಾಪು, ನಿಕಟಪೂರ್ವ ಅಧ್ಯಕ್ಷ ಮುಷ್ತಾಕ್ ಸಾಹೇಬ್, ಉಪಾಧ್ಯಕ್ಷ ದಿನೇಶ ಆರ್. ಕೋಟ್ಯಾನ್, ಕಾರ್ಯದರ್ಶಿ ದೇವರಾಜ ಕೋಟ್ಯಾನ್ ತೊಟ್ಟಂ, ಜತೆ ಕಾರ್ಯದರ್ಶಿ ಕೆ. ರವೀಂದ್ರ ಪೂಜಾರಿ, ಕೋಶಾಧಿಕಾರಿ ಶ್ರೀಧರ ಪೂಜಾರಿ ಹಾಗೂ ಉಡುಪಿ, ಬ್ರಹ್ಮಾವರ, ಕಾರ್ಕಳ ಉಪಸಮಿತಿಯ ಅಧ್ಯಕ್ಷರು; ಕಾರ್ಯದರ್ಶಿಗಳು, ಸಮಿತಿ ಸದಸ್ಯರು ಹಾಗೂ ಕಾಪು ಉಪ ವಿಭಾಗದ ಗುತ್ತಿಗೆದಾರರು ಉಪಸ್ಥಿತರಿದ್ದರು.

No Comments

Leave A Comment