Log In
BREAKING NEWS >
ಉತ್ತರ ಪ್ರದೇಶ: ಮನೆಯಲ್ಲಿದ್ದ ಪಟಾಕಿ ಸ್ಫೋಟ, ತಾಯಿ-ಮಗಳ ಸಾವು...

ತನ್ನದೇ ಜಮೀನನಲ್ಲಿದ್ದ ಬಾವಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡ ರೈತ-ಸಾಲಕ್ಕೆ ಮತ್ತೊಬ್ಬ ರೈತ ಬಲಿ

linge-gowdaಮಂಡ್ಯ: ರಾಜ್ಯದಲ್ಲಿ ರೈತ ಆತ್ಮಹತ್ಯೆ ಸರಣಿ ಮತ್ತೆ ಮುಂದುವರೆದಿದೆ. ಭಾನುವಾರ ಮಂಡ್ಯದ ಹೊನ್ನಾಯಕನಹಳ್ಳಿಯ ರೈತನೊಬ್ಬ ತನ್ನದೇ ಜಮೀನಿನಲ್ಲಿದ್ದ ಬಾವಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿರುವ ದಾರುಣ ಘಟನೆ ನಡೆದಿದೆ.

ಇತ್ತೀಚೆಗಷ್ಟೇ ಮಂಡ್ಯದಲ್ಲಿ ಕಬ್ಬಿನ ಬೆಳೆಗೆ ಬೆಂಕಿ ಹಚ್ಚಿ, ಅದರೊಳ್ಳಕ್ಕೆ ಹಾರಿ ಆತ್ಮಹತ್ಯೆ ಮಾಡಿಕೊಂಡ ದಾರುಣ ಘಟನೆ ಮಾಸುವ ಬೆನ್ನಲ್ಲೇ ಹೊನ್ನಾಯಕನಹಳ್ಳಿ 37 ವರ್ಷದ ರೈತ ಶಿವಲಿಂಗೇಗೌಡ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

ಕಬ್ಬು ಬೆಳೆಯಲು ಬ್ಯಾಂಕ್ ನಿಂದ ಸಾಲ ಪಡೆದಿದ್ದ ಶಿವಲಿಂಗೇಗೌಡ ಸಾಲ ಮರುಪಾವತಿ ಮಾಡದಿದ್ದರಿಂದ ಎಸ್ ಬಿಐ ಬ್ಯಾಂಕಿನವರು ಮನೆ ಜಪ್ತಿ ಮಾಡುವ ಎಚ್ಚರಿಕೆ ನೀಡಿದ್ದರು. ಇದಕ್ಕೆ ಎದರಿದ ಶಿವಲಿಂಗೇಗೌಡ ಅವರು ಬಾವಿಗೆ ಹಾರಿ ಸಾವಿಗೆ ಶರಣಾಗಿದ್ದಾರೆ. ಕೆರಗೋಡು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

No Comments

Leave A Comment