Log In
BREAKING NEWS >
ಉತ್ತರ ಪ್ರದೇಶ: ಮನೆಯಲ್ಲಿದ್ದ ಪಟಾಕಿ ಸ್ಫೋಟ, ತಾಯಿ-ಮಗಳ ಸಾವು...

ಜನತೆ ರಾಜಿನಾಮೆ ಕೇಳುವ ಮುನ್ನ ಪ್ರಧಾನಿ, ಲಲಿತ್ ಮೋದಿ ವಿರುದ್ಧ ಕ್ರಮಕೈಗೊಳ್ಳಲಿ: ಕಾಂಗ್ರೆಸ್‌

Ghulam-Nabi-Azadನವದೆಹಲಿ: ಐಪಿಎಲ್ ಮಾಜಿ ಅಧ್ಯಕ್ಷ ಲಲಿತ್ ಮೋದಿ ವಿರುದ್ಧ ಪ್ರಧಾನಿ ನರೇಂದ್ರ ಮೋದಿ ಅವರು ಶೀಘ್ರದಲ್ಲೇ ಕ್ರಮಗೈಗೊಳ್ಳಲಿ ಎಂದು ಕಾಂಗ್ರೆಸ್‌ ಆಗ್ರಹಿಸಿದೆ.

ಲಲಿತ್ ಮೋದಿ ಪ್ರಕರಣಕ್ಕೆ ಸಂಬಂಧಿಸಿದಂತೆ ಈ ದೇಶದ ಜನರು ಪ್ರಧಾನಿಯವರ ರಾಜಿನಾಮೆಯನ್ನು ಕೇಳುವ ಮೊದಲು ಲಲಿತ್‌ ಮೋದಿ ವಿರುದ್ಧ ಕ್ರಮಕೈಗೊಳ್ಳಬೇಕು ಎಂದು ಕಾಂಗ್ರೆಸ್‌ನ ಹಿರಿಯ ನಾಯಕ ಗುಲಾಂ ನಬಿ ಅಜಾದ್‌ ಅಗ್ರಹಿಸಿದ್ದಾರೆ.

ನರೇಂದ್ರ ಮೋದಿ ಅವರು ಅಧಿಕಾರಕ್ಕೆ ಬಂದರೆ ಕಪ್ಪು ಹಣ ವಾಪಾಸು ತರುತ್ತೇನೆ ಎಂದು ಚುನಾವಣಾ ಸಮಯದಲ್ಲಿ ಹೇಳಿದ್ದರು. ಆದರೆ ಅದು ಸಾಧ್ಯವಾಗಿಲ್ಲ, ಕನಿಷ್ಠ ಪಕ್ಷ ಲಲಿತ್‌ ಮೋದಿ ಅವರನ್ನು ಕರೆತರಲು ಒಂದು ಪತ್ರವನ್ನಾದರೂ ಬರೆಯಲಿಲ್ಲ. ಅಲ್ಲದೆ ರಾಜಸ್ತಾನ ಮುಖ್ಯಮಂತ್ರಿ ವಸುಂಧರಾ ರಾಜೇ ವಿರುದ್ಧ ದಿನಕ್ಕೊಂದು ದಾಖಲೆಗಳು ಬಿಡುಗಡೆಯಾಗುತ್ತಿವೆ. ಆದರೂ ಪ್ರಧಾನ ಮಂತ್ರಿ ಮೌನವಾಗಿರುವುದು ಏಕೆ ಎಂದು ಪ್ರಶ್ನಿಸಿದ್ದಾರೆ.

No Comments

Leave A Comment