Log In
BREAKING NEWS >
ಉತ್ತರ ಪ್ರದೇಶ: ಮನೆಯಲ್ಲಿದ್ದ ಪಟಾಕಿ ಸ್ಫೋಟ, ತಾಯಿ-ಮಗಳ ಸಾವು...

ಜಿಲ್ಲಾ ಎಸ್ಪಿಗೆ ಜಯಕರ್ನಾಟಕದಿಂದ ಅಭಿನಂದನೆ

IMG-2015062ಬೈಂದೂರು ಪದವಿಪೂರ್ವ ಕಾಲೇಜಿನ ವಿದ್ಯಾರ್ಥಿನಿ ಅಕ್ಷತಾ ದೇವಾಡಿಗರ ಕೊಲೆ ಆರೋಪಿಯನ್ನು ಶೀಘ್ರ ಬಂಧಿಸಿ ಕಾರ್ಯಪ್ರವೃತ್ತಿಯನ್ನು ತೋರಿಸಿದ, ಉಡುಪಿ ಜಿಲ್ಲೆಯಲ್ಲಿ ಪೋಲೀಸ್ ಇಲಾಖೆಯನ್ನು ಒಂದು ರೀತಿಯ ನವಚೇತಗೊಳಿಸಿದ ಜಿಲ್ಲಾ ಪೋಲೀಸ್ ಅಧೀಕ್ಷಕ ಅಣ್ಣಾಮಲೈಯವರನ್ನು ಜೂ. 27ರಂದು ಜಿಲ್ಲಾ ಪೋಲೀಸ್ ಕಛೇರಿಯಲ್ಲಿ ಜಯ ಕರ್ನಾಟಕದ ಉಡುಪಿ ಜಿಲ್ಲಾ ಘಟಕ ವತಿಯಿಂದ ಅಭಿನಂದಿಸಿ ಶ್ಲಾಘಿಸಲಾಯಿತು.

ತನ್ನ ಮೂಲಕ ಪೋಲೀಸ್ ಇಲಾಖೆಯ ಉಡುಪಿ ಜಿಲ್ಲೆಯ ಎಲ್ಲರನ್ನು ಅಭಿನಂದಿಸಿದಂತಾಯಿತೆಂದು ಅಧೀಕ್ಷಕರು ಧನ್ಯವಾದ ಸಲ್ಲಿಸಿದರು.

ಜಯಕರ್ನಾಟಕ ಉಡುಪಿ ಜಿಲ್ಲಾ ಘಟಕದ ಅಧ್ಯಕ್ಷ ಜನನಿ ದಿವಾಕರ ಜೆ. ಶೆಟ್ಟಿಯವರ ನೇತೃತ್ವದ ನಿಯೋಗದಲ್ಲಿ ಗೌರವ ಸಲಹೆಗಾರ ಸುಧಾಕರ ರಾವ್ ಬಾರಕೂರು, ಉಪಾಧ್ಯಕ್ಷ ಕರುಣಾಕರ ಪೂಜಾರಿ, ಪ್ರಧಾನ ಕಾರ್ಯದರ್ಶಿ ನಿತ್ಯಾನಂದ ಅಮೀನ್, ಸಹಕಾರ್ಯದರ್ಶಿ ಕರುಣಾಕರ ಮಾರ್ಪಳ್ಳಿ, ಘಟಕಗಳ ಮುಖಂಡರಾದ ಮಹೇಶ್ ಉಪ್ಪೂರು, ರಮೇಶ್ ಮೆಂಡನ್, ಜಿಲ್ಲಾ ಮಾಧ್ಯಮ ವಕ್ತಾರ ಎಸ್.ಎಸ್.ತೋನ್ಸೆ ಸಹವಕ್ತಾರ ಭಾಸ್ಕರ ಶೆಟ್ಟಿ ಉಪಸ್ಥಿತರಿದ್ದರು.

No Comments

Leave A Comment