Log In
BREAKING NEWS >
ಸಮಸ್ತ ಓದುಗರಿಗೆ, ಜಾಹೀರಾತುದಾರರಿಗೆ, ಅಭಿಮಾನಿಗಳಿಗೆ ಕರಾವಳಿ ಕಿರಣ ಡಾಟ್ ಕಾ೦ ಬಳಗದವತಿಯಿ೦ದ ಬೆಳಕಿನ ಹಬ್ಬ ದೀಪಾವಳಿ ಹಬ್ಬದ ಶುಭಾಶಯಗಳು.... ಅಕ್ಟೋಬರ್ 29ರ೦ದು ಬೆಳಿಗ್ಗೆ 4.45ಕ್ಕೆಕಾರ್ತಿಕ ಮಾಸದ ಪ್ರಯುಕ್ತ ಉಡುಪಿಯ ಶ್ರೀಲಕ್ಷ್ಮೀವೆ೦ಕಟೇಶ ದೇವಸ್ಥಾನದಲ್ಲಿ ವಿಶ್ವರೂಪದರ್ಶನ ಕಾರ್ಯಕ್ರಮ ಜರಗಲಿದೆ

ಸೆಲ್ಫಿ ವಿತ್ ಡಾಟರ್ಸ್” ಅಭಿಯಾನಕ್ಕೆ ಮೋದಿ ಕರೆ

pm-modiನವದೆಹಲಿ: ಪ್ರಧಾನಮಂತ್ರಿ ನರೇಂದ್ರ ಮೋದಿ ಇಂದು(ಭಾನುವಾರ)ತಮ್ಮ ಜನಪ್ರಿಯ ರೇಡಿಯೋ ಕಾರ್ಯಕ್ರಮ ‘ಮನ್ ಕಿ ಬಾತ್’ ನ 9ನೇ ಆವೃತ್ತಿಯಲ್ಲಿ ದೇಶದ ಜನತೆಯನ್ನುದ್ದೇಶಿಸಿ ಅನೇಕ ವಿಷಯಗಳನ್ನು ಪ್ರಸ್ತಾಪಿಸಿದರು.

ಸ್ಮಾರ್ಟ್ ಫೋನ್ ನಲ್ಲಿ ಸೆಲ್ಫಿ ಫೋಟೋ ತೆಗೆಯುವ ಅಭ್ಯಾಸ ಹೊಂದಿರುವ ಪ್ರಧಾನಮಂತ್ರಿಗಳು, ‘ಸೆಲ್ಪಿ ವಿತ್ ಡಾಟರ್ಸ್ ‘ ಅಭಿಯಾನಕ್ಕೆ ದೇಶದ ಜನತೆ ಕೈ ಜೋಡಿಸುವಂತೆ ಕೋರಿದರು.

ನಮ್ಮ ದೇಶದ ಕೆಲವು ಭಾಗಗಳಲ್ಲಿ ಲಿಂಗಾನುಪಾತದಲ್ಲಿ ಭಾರೀ ವ್ಯತ್ಯಾಸವಿದ್ದು, ಹೆಣ್ಣು ಮಕ್ಕಳು ಹುಟ್ಟಿದಾಗ ಬೇಸರಪಟ್ಟುಕೊಳ್ಳುತ್ತಾರೆ. ಈ ಮನೋಭಾವನೆಯನ್ನು ಹೋಗಲಾಡಿಸಲು ಹರ್ಯಾಣದ ಗ್ರಾಮವೊಂದರಲ್ಲಿ ಗ್ರಾಮದ ಸರಪಂಚ್ ಒಬ್ಬರು,  ‘ಸೆಲ್ಪಿ ವಿತ್ ಡಾಟರ್ಸ್’ ಅಭಿಯಾನವನ್ನು ಆರಂಭಿಸಿದ್ದಾರೆ. ನಿಜವಾಗಲೂ ಅದು ಉತ್ತಮ ಕೆಲಸ. ಹೆಣ್ಣು ಮಕ್ಕಳ ಪೋಷಕರು ತಮ್ಮ ಮಗಳ ಜೊತೆ ಇರುವ ಸೆಲ್ಫಿ ಫೋಟೋ ತೆಗೆದು #SelfieWithDaughter, ಹ್ಯಾಶ್ ಟಾಗ್ ಸೆಲ್ಪಿ ವಿತ್  ಡಾಟರ್  ಎಂದು ಫೋಟೋವನ್ನು ಹಂಚಿ ಸರ್ಕಾರದ ‘ಬೇಟಿ ಬಚಾವೋ, ಬೇಟಿ ಪಡಾವೋ’ ಅಡಿ ಬರಹ ನೀಡಿ ಅಭಿಯಾನಕ್ಕೆ ಪ್ರೋತ್ಸಾಹ ನೀಡಬೇಕೆಂದು ಕೋರಿದರು.

ಇದೇ ಸಂದರ್ಭದಲ್ಲಿ ಪ್ರಧಾನಿ ರಕ್ಷಾ ಬಂಧನ ಹಬ್ಬದ ಬಗ್ಗೆಯೂ ಪ್ರಸ್ತಾಪಿಸಿದರು. ರಕ್ಷಾ ಬಂಧನ ಸದ್ಯದಲ್ಲಿಯೇ ಇದ್ದು, ಈ ಸಂದರ್ಭದಲ್ಲಿ ಮಹಿಳೆಯರಿಗಾಗಿ ಅವರ ಸಹೋದರರು ಮತ್ತು ಮನೆಯವರು ಕೆಲವು ವಿಶೇಷ ಕೊಡುಗೆಗಳನ್ನು ನೀಡಬೇಕು. ನಿಮ್ಮ ಮನೆಯಲ್ಲಿರುವ ಹೆಣ್ಣು ಮಕ್ಕಳನ್ನು  ಸಾಮಾಜಿಕ ಭದ್ರತಾ ಯೋಜನೆಗಳಿಗೆ ಸೇರಿಸುವಂತೆ ಎಂದು ಉತ್ತೇಜಿಸಿದರು.

ನಮ್ಮ ಭಾರತ ದೇಶದ ‘ಇನ್ಕ್ರೆಡಿಬಲ್ ಇಂಡಿಯಾ'(ಅತುಲ್ಯ ಭಾರತ)ದ ಝಲಕ್ ನ್ನು ವಿಶ್ವವೇ ನೋಡಬೇಕು ಎಂದ ಮೋದಿ, ದೇಶಾದ್ಯಂತ ಇನ್ಕ್ರೆಡಿಬಲ್ ಇಂಡಿಯಾಗೆ ಪೂರಕವಾದ ಚಿತ್ರಗಳನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಳ್ಳುವಂತೆ ಜನರಲ್ಲಿ ಕೋರಲಾಗಿತ್ತು.ಅದಕ್ಕೆ ನಿಜವಾಗಲೂ ಉತ್ತಮ ಪ್ರತಿಕ್ರಿಯೆ ಸಿಕ್ಕಿದೆ. ಮುಂದೆಯೂ ಇದು ಮುಂದುವರಿಯಬೇಕು ಎಂದು ಹರ್ಷ ವ್ಯಕ್ತಪಡಿಸಿದರು.

ನಿಮ್ಮ ವಿರಾಮದ ಅವಧಿಯಲ್ಲಿ ಹೊರಗೆ ಪ್ರಯಾಣ ಮಾಡಲು ಹೋದಾಗ, ನಿಮ್ಮ ಅನುಭವಗಳನ್ನು ಒಂದೆಡೆ ಬರೆದಿಟ್ಟುಕೊಳ್ಳಿ. ಇದರಿಂದ ನಿಮ್ಮ ಜ್ಞಾನ ವೃದ್ಧಿಯಾಗುವುದಲ್ಲದೆ ನಿಮ್ಮ ಅನುಭವಗಳನ್ನು ಬೇರೆಯವರ ಜೊತೆ ಹಂಚಿಕೊಳ್ಳಬಹುದು ಎಂದು ಮೋದಿ ಹೇಳಿದರು.

ಅಂತಾರಾಷ್ಟ್ರೀಯ ಯೋಗ ದಿನವನ್ನು ವಿಶ್ವಾದ್ಯಂತ ಆಚರಿಸಲಾಯಿತು. ಜೂನ್ 21ರಂದು ವಿಶ್ವಸಂಸ್ಥೆ ಪ್ರಧಾನ ಕಾರ್ಯದರ್ಶಿ ಬನ್-ಕಿ-ಮೂನ್ ಅವರು ವಿಶ್ವಸಂಸ್ಥೆಯಲ್ಲಿ ಯೋಗ ಮಾಡಿದ  ಕ್ಷಣಗಳು, ಮಿಲಿಟರಿ ಯೋಧರು ಯೋಗ ಮಾಡಿದ್ದು, ನಿಜಕ್ಕೂ ನನಗೆ ಸಂತೋಷವನ್ನುಂಟುಮಾಡಿತ್ತು ಎಂದು ಪ್ರಧಾನಿ ಮನ್ ಕಿ ಬಾತ್ ನಲ್ಲಿ ಅನುಭವ ಹಂಚಿಕೊಂಡರು.

ಆದರೆ ವಸುಂಧರಾ ರಾಜೇ, ಸುಷ್ಮಾ ಸ್ವರಾಜ್ ಅಥವಾ ಲಲಿತ್ ಮೋದಿ ಪ್ರಕರಣವನ್ನು ಪ್ರಧಾನಿ ಮೋದಿ ತಮ್ಮ ಭಾಷಣದಲ್ಲಿ ಎಲ್ಲಿಯೂ ಪ್ರಸ್ತಾಪಿಸಲಿಲ್ಲ.

No Comments

Leave A Comment