Log In
BREAKING NEWS >
ಉತ್ತರ ಪ್ರದೇಶ: ಮನೆಯಲ್ಲಿದ್ದ ಪಟಾಕಿ ಸ್ಫೋಟ, ತಾಯಿ-ಮಗಳ ಸಾವು...

ಕಾಶ್ಮೀರದಲ್ಲಿ ಮತ್ತೆ ಹಾರಿದ ಪಾಕ್ ಧ್ವಜ!

ISIS-pakistanಶ್ರೀನಗರ: ಭಾರತದ ವಿರುದ್ಧ ಘೋಷಣೆಗಳನ್ನು ಕೂಗಿ ಬಂದ ಅಪರಿಚಿತ ಬಂದೂಕು ದಾರಿಗಳು ಶನಿವಾರ ಕಾಶ್ಮೀರದ ಎತ್ತರ ಗೋಪುರಗಳ ಮೇಲೆ ಪಾಕಿಸ್ತಾನದ ಧ್ವಜ ಹಾರಿಸಿದ್ದಾರೆ ಎಂದು ತಿಳಿದುಬಂದಿದೆ.

ನಿನ್ನೆ ಇದ್ದಕ್ಕಿಂತೆ ಮುಸುಕುಧಾರಿಗಳಾಗಿ ಬಂದ ಯುವಕರ ಗುಂಪೊಂದು ಭಾರತ ವಿರುದ್ಧ ಘೋಷಣೆಗಳನ್ನು ಕಲ್ಲು ತೂರಾಟ ನಡೆಸಿದ್ದಾರೆ. ಈ ವೇಳೆ ಪೊಲೀಸರು ತಡೆಯಲು ಹೋದಾಗ ಪೊಲೀಸರು ಹಾಗೂ ಅಪರಿಚಿತ ವ್ಯಕ್ತಿಗಳ ಮಧ್ಯೆ ಮಾತಿನ ಚಕಮಕಿ ನಡೆದಿದೆ. ಸ್ವಲ್ಪ ಸಮಯದ ನಂತರ ಬಂದ ಮತ್ತೊಂದು ಗುಂಪು ಎತ್ತರದ ಗೋಪುರಗಳ ಮೇಲೆ ನಿಂತು ಪಾಕಿಸ್ತಾನದ ಧ್ವಜವನ್ನು ಹಾರಿಸಿದ್ದಾರೆ ಎಂದು ಮೂಲಗಳಿಂದ ತಿಳಿದುಬಂದಿದೆ.

ಈ ಹಿಂದೆಯೂ ಇದೇ ರೀತಿಯ ಪ್ರಕರಣವೊಂದು ವರದಿಯಾಗಿತ್ತು. ಪ್ರತ್ಯೇಕತಾವಾದಿ ನಾಯಕ ಹತ್ಯೆ ವಿರೋಧಿಸಿ ಜೂ.12 ರಂದು ಅಪರಿಚಿತ ಬಂದೂಕುಧಾರಿಗಳು ಬಂದು ಕಾಶ್ಮೀರದ ಎರಡು ಸ್ಥಳಗಳಲ್ಲಿ ಪಾಕಿಸ್ತಾನ ಹಾಗೂ ಇಸಿಸ್ ಉಗ್ರ ಗುಂಪಿನ ಧ್ವಜಗಳನ್ನು ಹಾರಿಸಿದ್ದರು. ಘಟನೆಯನ್ನು ಗಂಭೀರವಾಗಿ ಪರಿಗಣಿಸಿದ್ದ ಸರ್ಕಾರ ಯುವಕರ ಗುಂಪನ್ನು ಬಂಧನಕ್ಕೊಳಪಡಿಸಿತ್ತು.

No Comments

Leave A Comment