Log In
BREAKING NEWS >
ಉತ್ತರ ಪ್ರದೇಶ: ಮನೆಯಲ್ಲಿದ್ದ ಪಟಾಕಿ ಸ್ಫೋಟ, ತಾಯಿ-ಮಗಳ ಸಾವು...

ಎಎಪಿ ಚಿಹ್ನೆ ವಿವಾದ: ಕೇಜ್ರಿಗೆ ನೋಟಿಸ್‌

AAP-logo-resizedಲಖನೌ (ಐಎಎನ್‌ಎಸ್‌): ಆಮ್‌ ಆದ್ಮಿ ಪಕ್ಷದ (ಎಎಪಿ) ಚಿಹ್ನೆಯ ವಿನ್ಯಾಸಕಾರ ಸುನಿಲ್‌ ಲಾಲ್‌ ಅವರು ಚಿಹ್ನೆಯ ಹಕ್ಕುಸ್ವಾಮ್ಯ ವಿಚಾರವಾಗಿ ದೆಹಲಿ ಮುಖ್ಯಮಂತ್ರಿ ಅರವಿಂದ್‌ ಕೇಜ್ರಿವಾಲ್‌ ಅವರಿಗೆ ನೋಟಿಸ್‌ ಕಳಿಸಿದ್ದಾರೆ.

‘ಚಿಹ್ನೆ ವಿನ್ಯಾಸದ ಹಕ್ಕುಸ್ವಾಮ್ಯ ನನ್ನದು. ಎಎಪಿಯಲ್ಲಿ ಸಿದ್ಧಾಂತಗಳು ಮಸುಕಾದ ಮೇಲೆ ನಾನು ಪಕ್ಷ ತೊರೆದೆ. ಜತೆಗೆ ನಾನು ರೂಪಿಸಿದ ಚಿಹ್ನೆಯನ್ನು ಬಳಸದಂತೆ ಹೇಳಿದ್ದೆ. ಆದರೆ, ಪಕ್ಷದಲ್ಲಿ ಇನ್ನೂ ನಾನು ವಿನ್ಯಾಸ ಮಾಡಿದ ಚಿಹ್ನೆಯನ್ನೇ ಬಳಸಲಾಗುತ್ತಿದೆ’ ಎಂದು ಸುನಿಲ್‌ ಲಾಲ್‌ ತಿಳಿಸಿದ್ದಾರೆ.

ಚಿಹ್ನೆ ಬಳಕೆಯ ಹಕ್ಕುಸ್ವಾಮ್ಯ ವಿಚಾರವಾಗಿ ಸುನಿಲ್‌ ಲಾಲ್ ಅವರು ವಕೀಲ ಅಖಿಲೇಶ್‌ ಚಂದ್ರ ಅವರ ಮೂಲಕ ಕೇಜ್ರಿವಾಲ್‌ ಅವರಿಗೆ ನೋಟಿಸ್‌ ಕಳಿಸಿದ್ದಾರೆ. ಅಲ್ಲದೆ ಏಪ್ರಿಲ್‌ 7ರೊಳಗೆ ಚಿಹ್ನೆ ಬಳಕೆ ನಿಲ್ಲಿಸುವಂತೆ ಕೇಜ್ರಿವಾಲ್‌ ಅವರಿಗೆ ಸುನಿಲ್‌ ಪತ್ರ ಬರೆದಿದ್ದಾರೆ.

‘ಪಕ್ಷದ ಪೋಸ್ಟರ್‌, ಬ್ಯಾನರ್‌, ಧ್ವಜ, ವೆಬ್‌ಸೈಟ್‌, ಪ್ರಚಾರ ಸಭೆ ಸೇರಿದಂತೆ ಎಲ್ಲೂ ನನ್ನ ವಿನ್ಯಾಸದ ಚಿಹ್ನೆ ಬಳಸದಂತೆ ಹಲವು ಬಾರಿ ಪಕ್ಷಕ್ಕೆ ಮನವಿ ಮಾಡಿದ್ದೆ. ಆದರೂ ಅವರು ನನ್ನ ವಿನ್ಯಾಸದ ಚಿಹ್ನೆ ಬಳಕೆ ಮುಂದುವರಿಸಿದ್ದಾರೆ’ ಎಂದು ಸುನಿಲ್‌ ದೂರಿದ್ದಾರೆ.

No Comments

Leave A Comment