Log In
BREAKING NEWS >
ಅಕ್ಟೋಬರ್ 29ರ೦ದು ಬೆಳಿಗ್ಗೆ 4.45ಕ್ಕೆಕಾರ್ತಿಕ ಮಾಸದ ಪ್ರಯುಕ್ತ ಉಡುಪಿಯ ಶ್ರೀಲಕ್ಷ್ಮೀವೆ೦ಕಟೇಶ ದೇವಸ್ಥಾನದಲ್ಲಿ ವಿಶ್ವರೂಪದರ್ಶನ ಕಾರ್ಯಕ್ರಮ ಜರಗಲಿದೆ

ಬಾಂಗ್ಲಾದಲ್ಲಿ ಭೂಕುಸಿತ: 14ಸಾವು,35ಮಂದಿಗೆ ಗಂಭೀರ ಗಾಯ

bangla-killಢಾಕಾ: ಸತತವಾಗಿ ಸುರಿಯುತ್ತಿರುವ ಧಾರಾಕಾರ ಮಳೆಯಿಂದ ಭೂಕುಸಿತ ಉಂಟಾಗಿ ಸುಮಾರು 14 ಮಂದಿ ಸಾವನ್ನಪ್ಪಿ 35 ಜನರಿಗೆ ಗಂಭೀರ ಗಾಯಗಳಾಗಿರುವ ಘಟನೆ ಆಗ್ನೇಯ ಬಾಂಗ್ಲಾದಲ್ಲಿ  ನಡೆದಿದೆ.

ಬಂಗಾಳಕೊಲ್ಲಿಯಲ್ಲಿ ಕಳೆದ 2 ದಿನಗಳಿಂದ ಎಡೆ ಬಿಡದೆ ಸುರಿಯುತ್ತಿರುವ ಮಳೆಯಿಂದಾಗಿ ನೂರಾರು ಹಳ್ಳಿಗಳು ಜಾಲವೃತಗೊಂಡು ಜನ ಜೀವನ ಅಸ್ತವ್ಯಸ್ತಗೊಂಡಿದೆ. ನದಿಗಳು ಉಕ್ಕಿ ಹರಿಯುತ್ತಿರುವುದರಿಂದ ಹಲವು ಕಡೆ ರಸ್ತೆ ಸಂಪರ್ಕ ಕಳೆದು ಹೋಗಿ ಗ್ರಾಮಗಳ ಜನತೆಯನ್ನು ಸ್ಥಳಾಂತರಿಸಲು ಸ್ಥಳೀಯ ಜಿಲ್ಲಾಡಳಿತ ಪರದಾಡುತ್ತಿದೆ.

ಕನಿಷ್ಟ ಪಕ್ಷ 2 ಮಂದಿ ಬದಿಯಲ್ಲಿ ಹೂತು ಹೋಗಿದ್ದಾರೆಂದು ಅಂದಾಜಿಸಲಾಗಿದೆ, ಇನ್ನು ಮರ ಬಿದ್ದು ಸುಮಾರು 35 ಮಂದಿ ಗಾಯಗೊಂಡಿದ್ದಾರೆ. ಮುಂದಿನ 2 ದಿನಗಳು ಬಾರಿ ಮಳೆಯಾಗಲಿದೆ ಎಂದು ಬಾಂಗ್ಲಾ ಹವಾಮಾನ ಇಲಾಖೆ ತಿಳಿಸಿದೆ. ಜೊತೆಗೆ ನದಿ ಪಾತ್ರದ ಹಳ್ಳಿಗಳ ಜನರನ್ನು ಸ್ಥಳಾಂತರಿಸುವಂತೆ ಸೂಚನೆ ನೀಡಿದೆ.

No Comments

Leave A Comment