Log In
BREAKING NEWS >
ಉತ್ತರ ಪ್ರದೇಶ: ಮನೆಯಲ್ಲಿದ್ದ ಪಟಾಕಿ ಸ್ಫೋಟ, ತಾಯಿ-ಮಗಳ ಸಾವು...

ಮೋದಿ, ಶಾ ಭೇಟಿಗೆ ಅವಕಾಶ ಸಿಗದೆ ಜೈಪುರಕ್ಕೆ ವಾಪಸಾದ ರಾಜೇ

373973-rajeನವದೆಹಲಿ : ಐಪಿಎಲ್ ಮಾಜಿ ಮುಖ್ಯಸ್ಥ ಲಲಿತ್ ಮೋದಿಗೆ ನೆರವು ನೀಡಿರುವ ಕುರಿತು ರಾಜಸ್ಥಾನ್ ಮುಖ್ಯಮಂತ್ರಿ ವಸುಂಧರಾ ರಾಜೇ ನೀಡಿರುವ ಸಮಜಾಯಿಷಿಗೆ ಬಿಜೆಪಿ ಸಹಮತ ಸೂಚಿಸಿದೆ. ಆದರೆ ಪ್ರಧಾನಿ ನರೇಂದ್ರ ಮೋದಿ , ಬಿಜೆಪಿ ಅಧ್ಯಕ್ಷ ಅಮಿತ್‌ ಶಾ ಮತ್ತು ಹಣಕಾಸು ಸಚಿವ ಅರುಣ್‌ ಜೇಟ್ಲಿ  ಅವರು ವಸುಂಧರಾ ಅವರ ಭೇಟಿಗೆ ನೀರಾಕರಿಸಿದ್ದಾರೆ ಎಂದು ವರದಿಯಾಗಿದೆ.

ಶನಿವಾರ ನೀತಿ ಆಯೋಗದ ಸಭೆಯಲ್ಲಿ ಭಾಗವಹಿಸಲು ದಿಲ್ಲಿಗೆ ಆಗಮಿಸಿದ್ದ ವಸುಂಧರಾ ರಾಜೇ ಅವರು ಮೋದಿ,ಶಾ ಮತ್ತು ಜೇಟ್ಲಿ  ಅವರ ಭೇಟಿ ಮಾಡಲು ಬಯಸಿದ್ದರು .ಆದರೆ ಅವಕಾಶ ನಿರಾಕರಿಸಿದ ಕಾರಣ ನಿರಾಶರಾಗಿ ಜೈಪುರಕ್ಕೆ ವಾಪಾಸಾಗಿದ್ದಾರೆ ಎಂದು ಮಾಧ್ಯಮ ವರದಿ ತಿಳಿಸಿದೆ.

ಲಲಿತ್ ಮೋದಿ ವಿವಾದಕ್ಕೆ ಸಂಬಂಧಿಸಿದಂತೆ ವಸಂಧರಾ ಅವರು ನೀಡಿದ್ದ ಸಮಜಾಯಿಷಿಗೆ ಬಿಜೆಪಿ ಕ್ಲೀನ್‌ ಚಿಟ್‌ ನೀಡಿತ್ತು. ಇದರಿಂದ ರಾಜೇ ತಲೆದಂಡ ಇಲ್ಲ ಎಂದು ಹೇಳಲಾಗುತ್ತಿದೆ.

2011ರಲ್ಲಿ ಲಲಿತ್ ಮೋದಿಯ ಪತ್ನಿ, ತನ್ನ ಗೆಳತಿ ಮಿನಾಲ್‌ಗೆ ಸಹಾಯ ಮಾಡುವ ನಿಟ್ಟಿನಲ್ಲಿ ಹೇಳಿಕೆಯೊಂದನ್ನು ತಯಾರಿಸಿ ಅದಕ್ಕೆ ಸಹಿ ಮಾಡಿರುವುದಾಗಿಯೂ, 2013ರಲ್ಲಿ ಇಮೇಲ್ ಮೂಲಕ ಈ ಪ್ರಕ್ರಿಯೆಯಿಂದ ಹಿಂದೆ ಸರಿದಿದ್ದಾಗಿಯೂ ವಸುಂಧರಾ ಅವರು ಬಿಜೆಪಿ ನಾಯಕತ್ವಕ್ಕೆ ಶುಕ್ರವಾರ ಮನವರಿಕೆ ಮಾಡಿದ್ದರು.

ಆ ಅವಧಿಯಲ್ಲಿ ಲಲಿತ್ ಮೋದಿ ವಿರುದ್ಧ ಆರೋಪಗಳು ಕೇಳಿ ಬಂದ ಹಿನ್ನೆಲೆಯಲ್ಲಿ, ಯಾವುದೇ ಕಾನೂನಿನ ತೊಡಕು ಆಗಬಾರದು ಮತ್ತು ವಿವಾದ ಉಂಟಾಗಬಾರದೆಂಬ ಕಾರಣಕ್ಕೆ ತನ್ನ ಹೇಳಿಕೆಯನ್ನು ಹಿಂತೆಗೆದುಕೊಂಡಿರುವುದಾಗಿ ವಸುಂಧರಾ ಬಿಜೆಪಿ ನಾಯಕತ್ವಕ್ಕೆ ಹೇಳಿದ್ದರು.

No Comments

Leave A Comment