Log In
BREAKING NEWS >
ಸಮಸ್ತ ಓದುಗರಿಗೆ, ಜಾಹೀರಾತುದಾರರಿಗೆ, ಅಭಿಮಾನಿಗಳಿಗೆ ಕರಾವಳಿ ಕಿರಣ ಡಾಟ್ ಕಾ೦ ಬಳಗದವತಿಯಿ೦ದ ಬೆಳಕಿನ ಹಬ್ಬ ದೀಪಾವಳಿ ಹಬ್ಬದ ಶುಭಾಶಯಗಳು.... ಅಕ್ಟೋಬರ್ 29ರ೦ದು ಬೆಳಿಗ್ಗೆ 4.45ಕ್ಕೆಕಾರ್ತಿಕ ಮಾಸದ ಪ್ರಯುಕ್ತ ಉಡುಪಿಯ ಶ್ರೀಲಕ್ಷ್ಮೀವೆ೦ಕಟೇಶ ದೇವಸ್ಥಾನದಲ್ಲಿ ವಿಶ್ವರೂಪದರ್ಶನ ಕಾರ್ಯಕ್ರಮ ಜರಗಲಿದೆ

ಪ್ರಿಯಾಂಕಾ, ರಾಬರ್ಟ್‌ ವಾದ್ರಾ ಭೇಟಿ: ಲಲಿತ್‌ ಮೋದಿ ಹೊಸ ಟ್ವೀಟ್‌

robert-with-ನವದೆಹಲಿ: ದಿನಕ್ಕೊಬ್ಬರು ಬಿಜೆಪಿ ನಾಯಕರ ಹೆಸರು ಹೇಳಿ ಕಮಲ ಪಕ್ಷಕ್ಕೆ ಮುಜುಗರ ತರುತ್ತಿದ್ದ ಐಪಿಎಲ್‌ನ ಮಾಜಿ ಮುಖ್ಯಸ್ಥ ಲಲಿತ್‌ ಮೋದಿ, ಇದೀಗ ಗಾಂಧಿ ಕುಟುಂಬದ ಜೊತೆಗೂ ತಮಗೆ ನಂಟು ಇದೆ ಎಂಬರ್ಥದ ಹೇಳಿಕೆ ನೀಡಿದ್ದಾರೆ.

ಕಾಂಗ್ರೆಸ್‌ ಅಧ್ಯಕ್ಷೆ ಸೋನಿಯಾ ಗಾಂಧಿ ಅವರ ಪುತ್ರಿ ಪ್ರಿಯಾಂಕಾ ವಾದ್ರಾ ಹಾಗೂ ಅವರ ಪತಿ ರಾಬರ್ಟ್‌ ವಾದ್ರಾ ಅವರನ್ನು ಕಳೆದ ವರ್ಷ ಲಂಡನ್‌ ಹೋಟೆಲ್‌ನಲ್ಲಿ ಭೇಟಿಯಾದದ್ದಾಗಿ ಲಲಿತ್‌ ಗುರುವಾರ ತಡರಾತ್ರಿ ಟ್ವೀಟ್‌ ಮಾಡಿದ್ದಾರೆ. ಆದರೆ, ಇದನ್ನು ಪ್ರಿಯಾಂಕಾ ನಿರಾಕರಿಸಿದ್ದು, ಹೋಟೆಲ್‌ನಲ್ಲಾಗಲೀ ಅಥವಾ ಬೇರೆಲ್ಲೀ ಆಗಲಿ ತಾನು ಆ ವ್ಯಕ್ತಿಯನ್ನು ಭೇಟಿಯಾಗಿಲ್ಲ ಎಂದು ಸ್ಪಷ್ಟನೆ ನೀಡಿದ್ದಾರೆ.

ಹೊಸ ಟ್ವೀಟ್‌ ಅನ್ನು ಅಸ್ತ್ರವಾಗಿ ಬಳಸಿಕೊಂಡಿರುವ ಬಿಜೆಪಿ, ಲಲಿತ್‌ ಬಚಾವಾಗಲು ಸೋನಿಯಾ ಕುಟುಂಬದ ಜೊತೆಗಿನ ಈ ನಂಟೇ ಕಾರಣ ಎಂದು ಆರೋಪಿಸಿದೆ. ಆದರೆ, ಹೋಟೆಲ್‌ ಭೇಟಿಯನ್ನೆಲ್ಲ ನಂಟು ಎನ್ನಲಾಗದು ಎಂದು ಕಾಂಗ್ರೆಸ್‌ ಸಮರ್ಥಿಸಿಕೊಂಡಿದೆ.

ಕಾಂಗ್ರೆಸ್‌ಗೆ ಮೋದಿ ಕಳಂಕ: ಕಳೆದ ವರ್ಷ ಯುಪಿಎ ಸರ್ಕಾರ ಅಧಿಕಾರದಲ್ಲಿದ್ದಾಗ ಲಂಡನ್‌ನಲ್ಲಿ ಕಾಂಗ್ರೆಸ್‌ ಅಧ್ಯಕ್ಷೆ ಸೋನಿಯಾ ಗಾಂಧಿ ಪುತ್ರಿ ಪ್ರಿಯಾಂಕಾ ವಾದ್ರಾ ಹಾಗೂ ರಾಬರ್ಟ್‌ ವಾದ್ರಾ ದಂಪತಿಯನ್ನು ಭೇಟಿ ಮಾಡಿದ್ದೆ ಎಂದು ಸ್ವತಃ ಲಲಿತ್‌ ಮೋದಿ ಬಹಿರಂಗಪಡಿಸಿದ್ದಾರೆ. ಈ ಕುರಿತು ಲಲಿತ್‌ ಗುರುವಾರ ರಾತ್ರಿ ಅವರು ಟ್ವೀಟ್‌ ಮಾಡಿದ್ದಾರೆ. ಲಂಡನ್‌ನ ರೆಸ್ಟೋರೆಂಟ್‌ವೊಂದರಲ್ಲಿ ಪ್ರಿಯಾಂಕಾ ಹಾಗೂ ವಾದ್ರಾ ಅವರನ್ನು ಭೇಟಿ ಮಾಡಿದ್ದೆ ಎಂದು ತಿಳಿಸಿದ್ದಾರೆ.

ಇಬ್ಬರನ್ನೂ ನಾನು ರೆಸ್ಟೋರೆಂಟ್‌ನಲ್ಲಿ ಪ್ರತ್ಯೇಕವಾಗಿ ಭೇಟಿಯಾಗಿದ್ದೆ. ಅವರು ಟಮ್ಮಿ ಸರಾನಾ ಜೊತೆ ಅಲ್ಲಿಗೆ ಬಂದಿದ್ದರು. ಅವರ ಬಳಿ ನನ್ನ ಫೋನ್‌ ನಂಬರ್‌ ಇದೆ. ಬೇಕಿದ್ದರೆ ನನಗೆ ಕರೆ ಮಾಡಲಿ. ಅವರ ಭೇಟಿಯಿಂದ ನನಗೆ ಏನು ಅನ್ನಿಸಿತು ಎಂಬುದನ್ನು ಅವರೊಂದಿಗೆ ಹಂಚಿಕೊಳ್ಳುವೆ ಎಂದು ಲಲಿತ್‌ ಮೋದಿ ಹೇಳಿದ್ದಾರೆ.

ಲಲಿತ್‌ ಮೋದಿ ಅವರ ಈ ಸ್ಫೋಟಕ ಮಾಹಿತಿ, ಕಾಂಗ್ರೆಸ್‌ ನಡೆಸುತ್ತಿದ್ದ ಸರಣಿ ದಾಳಿಯಿಂದ ಹೈರಾಣಾಗಿದ್ದ ಬಿಜೆಪಿಗೆ ಹೊಸ ಅಸ್ತ್ರ ದೊರಕಿಸಿಕೊಟ್ಟಿದೆ. ಯುಪಿಎ ಅವಧಿಯಲ್ಲಿ ಲಲಿತ್‌ ಮೋದಿಯನ್ನು ಬ್ರಿಟನ್‌ನಿಂದ ಭಾರತಕ್ಕೆ ಗಡೀಪಾರು ಮಾಡಿಸಿಕೊಂಡು ಬರದೆ ಇರುವುದಕ್ಕೆ ಮೋದಿ ಜತೆ ಗಾಂಧಿ ಕುಟುಂಬ ಹೊಂದಿದ್ದ ನಂಟೇ ಕಾರಣ. ಈ ಕುರಿತು ಕಾಂಗ್ರೆಸ್‌ ಅಧ್ಯಕ್ಷೆ ಸೋನಿಯಾ ಗಾಂಧಿ ಹೇಳಿಕೆ ನೀಡಬೇಕು ಎಂದು ಬಿಜೆಪಿ ವಕ್ತಾರ ಸಂಬಿತ್‌ ಪಾತ್ರ ಆಗ್ರಹಿಸಿದ್ದಾರೆ.

ಆದರೆ ಬಿಜೆಪಿ ಆರೋಪಗಳನ್ನು ಕಾಂಗ್ರೆಸ್‌ ತಿರಸ್ಕರಿಸಿದೆ. ಸುಳ್ಳುಗಳನ್ನು ಪಸರಿಸುವ ಮೂಲಕ “ಬಡಾ ಮೋದಿ’ಗೆ (ನರೇಂದ್ರ ಮೋದಿ) “ಚೋಟಾ ಮೋದಿ’ (ಲಲಿತ್‌ ಮೋದಿ) ನೆರವಾಗುತ್ತಿದ್ದಾರೆ. ಪ್ರಿಯಾಂಕಾ ಆಗಲಿ, ರಾಬರ್ಟ್‌ ವಾದ್ರಾ ಆಗಲಿ ಲಲಿತ್‌ ಮೋದಿ ಜತೆ ಎಂದಿಗೂ ಮಾತನಾಡಿಲ್ಲ. ರೆಸ್ಟೋರೆಂಟ್‌ನಲ್ಲಿ ನೀವು ಯಾರನ್ನೋ ನೋಡಿದರೆ ಅದು ಅಪರಾಧವಾಗುವುದಿಲ್ಲ. ಬಿಜೆಪಿ ವಿಷಯಾಂತರ ಮಾಡಲು ಯತ್ನಿಸುತ್ತಿದೆ ಎಂದು ಕಾಂಗ್ರೆಸ್‌ ವಕ್ತಾರ ರಣದೀಪ್‌ ಸುಜೇìವಾಲಾ ಕಿಡಿಕಾರಿದ್ದಾರೆ.

No Comments

Leave A Comment