Log In
BREAKING NEWS >
ಸಮಸ್ತ ಓದುಗರಿಗೆ, ಜಾಹೀರಾತುದಾರರಿಗೆ, ಅಭಿಮಾನಿಗಳಿಗೆ ಕರಾವಳಿ ಕಿರಣ ಡಾಟ್ ಕಾ೦ ಬಳಗದವತಿಯಿ೦ದ ಬೆಳಕಿನ ಹಬ್ಬ ದೀಪಾವಳಿ ಹಬ್ಬದ ಶುಭಾಶಯಗಳು.... ಅಕ್ಟೋಬರ್ 29ರ೦ದು ಬೆಳಿಗ್ಗೆ 4.45ಕ್ಕೆಕಾರ್ತಿಕ ಮಾಸದ ಪ್ರಯುಕ್ತ ಉಡುಪಿಯ ಶ್ರೀಲಕ್ಷ್ಮೀವೆ೦ಕಟೇಶ ದೇವಸ್ಥಾನದಲ್ಲಿ ವಿಶ್ವರೂಪದರ್ಶನ ಕಾರ್ಯಕ್ರಮ ಜರಗಲಿದೆ

ಕಾಗದ ರಹಿತ ಪ್ರಮಾಣ ಪತ್ರಗಳ ಸೇವೆ

Paperless-job-25-6ಉಡುಪಿ : ಕಂದಾಯ ಇಲಾಖೆಯಿಂದ ಸಾರ್ವಜನಿಕರಿಗೆ ನೀಡಲಾಗುತ್ತಿರುವ ವಿವಿಧ ಸೌಲಭ್ಯಗಳ ಮುದ್ರಿಸಿದ ಪ್ರಮಾಣ ಪತ್ರಗಳನ್ನು ಸಾರ್ವಜನಿಕರಿಗೆ ನೀಡುವುದರ ಬದಲಾಗಿ ಕಾಗದ ರಹಿತ ಪ್ರಮಾಣಪತ್ರದ ಸೇವೆಯನ್ನು ಸರಕಾರ ಜಾರಿಗೆ ತರಲಾಗಿದೆ.

ಕಾಗದ ರಹಿತ ಪ್ರಮಾಣ ಪತ್ರ ಸೇವೆಯಡಿಯಲ್ಲಿ ಇನ್ನು ಮುಂದೆ ಅರ್ಜಿದಾರರು/ವಿದ್ಯಾರ್ಥಿಗಳು ವಿವಿಧ ಪ್ರಮಾಣ ಪತ್ರ ಕೋರಿ ಸಲ್ಲಿಸುವ ಅರ್ಜಿಗಳನ್ನು ವಿದ್ಯುನ್ಮಾನವಾಗಿ ಅನುಮೋದಿತ ಪ್ರಮಾಣ ಪತ್ರಗಳಿಗೆ ಒಂದು ವಿಶಿಷ್ಟವಾದ ಗಣಕೀಕೃತ ಸಂಖ್ಯೆಯನ್ನು ನೀಡಲಾಗುತ್ತದೆ. ಈ ಪ್ರಮಾಣ ಪತ್ರದ ಗಣಕೀಕೃತ ಸಂಖ್ಯೆಯನ್ನು ಅರ್ಜಿದಾರರು/ವಿದ್ಯಾರ್ಥಿಗಳಿಗೆ ಎಸ್‌.ಎಂ.ಎಸ್‌. ಮೂಲಕ ಕಳುಹಿಸಿಕೊಡಲಾಗುತ್ತದೆ. ಸದರಿ ಗಣಕೀಕೃತ ಸಂಖ್ಯೆಯನ್ನು ಅರ್ಜಿದಾರರು/ವಿದ್ಯಾರ್ಥಿಗಳು ಶೈಕ್ಷಣಿಕ ಉದ್ದೇಶಕ್ಕಾಗಿ ಶಾಲೆ ಮತ್ತು ಇತರ ಇಲಾಖೆಗಳಿಗೆ ಸಲ್ಲಿಸುವ ಅರ್ಜಿಯಲ್ಲಿ ನಮೂದಿಸಬಹುದಾಗಿದೆ. ಪ್ರಮಾಣ ಪತ್ರದ ನೈಜತೆಯನ್ನು ಎಸ್‌.ಎಂ.ಎಸ್‌. ಮೂಲಕ ಪರೀಕ್ಷಿಸಲು, ಎಸ್‌.ಎಂ.ಎಸ್‌. ಸಂಖ್ಯೆ 51969 ಗೆ “KA-NK Certificate Number”ಎಂದು ಎಸ್‌.ಎಂ.ಎಸ್‌. ಮಾಡಬಹುದಾಗಿದೆ. ಎಸ್‌.ಎಂ.ಎಸ್‌.ಗೆ ಪ್ರತಿಕ್ರಿಯೆ ನೀಡಿ, ಪ್ರಮಾಣ ಪತ್ರದ ಪೂರ್ಣ ಮಾಹಿತಿಯನ್ನು ನೀಡಲಾಗುತ್ತದೆ.

ಕಾಗದ ರಹಿತ ಪ್ರಮಾಣ ಪತ್ರದ ಸೇವೆಯಲ್ಲಿ ನೀಡುವ ಗಣಕೀಕೃತ ಪ್ರಮಾಣ ಪತ್ರದ ಸಂಖ್ಯೆಯು ಪರಿಶೀಲನಾ ಅನಂತರ ಮುದ್ರಿತ ಪ್ರಮಾಣ ಪತ್ರಕ್ಕಿರುವಷ್ಟೇ ಮಾನ್ಯತೆ ಹೊಂದಿರುತ್ತದೆ. ಇನ್ನು ಮುಂದೆ ಶೈಕ್ಷಣಿಕ ಉದ್ದೇಶಕ್ಕಾಗಿ ಸಲ್ಲಿಸುವ ಅರ್ಜಿಯಲ್ಲಿ ಅರ್ಜಿದಾರರು ಗಣಕೀಕೃತ ಪ್ರಮಾಣ ಪತ್ರದ ಸಂಖ್ಯೆಯನ್ನು ನಮೂದಿಸಬಹುದಾಗಿದೆ. ಮುದ್ರಿತ ಪ್ರಮಾಣ ಪತ್ರದ ಅವಶ್ಯಕತೆ ಇರುವುದಿಲ್ಲ. ಸಂಬಂಧಿಸಿದ ಶಾಲೆ ಮತ್ತು ಇತರ ಇತರ ಇಲಾಖೆಗಳು ಮುದ್ರಿತ ಪ್ರಮಾಣ ಪತ್ರಗಳನ್ನು ಒದಗಿಸಲು ಕಡ್ಡಾಯಪಡಿಸದೆ ನಾಡಕಚೇರಿ ವೆಬ್‌ಸೈಟ್‌ www.nadakacheri.karnataka.gov.in ನಲ್ಲಿ ಈ ಗಣಕೀಕೃತ ಪ್ರಮಾಣ ಪತ್ರದ ನೈಜತೆಯನ್ನು ಗಮನಿಸಬಹುದಾಗಿದೆ. ಈಗಾಗಲೇ ಈ ಬಗ್ಗೆ ಶಿಕ್ಷಣ ಇಲಾಖೆ ಆಯುಕ್ತರು ಸುತ್ತೋಲೆ ಹೊರಡಿಸಿದ್ದು ಸಾರ್ವಜನಿಕರು/ವಿದ್ಯಾರ್ಥಿಗಳು ಹಾಗೂ ಎಲ್ಲಾ ಇಲಾಖೆಗಳ ಮುಖ್ಯಸ್ಥರು ಕಾಗದ ರಹಿತ ಪ್ರಮಾಣ ಪತ್ರಗಳ ಸೇವೆಯನ್ನು ಅನುಷ್ಠಾನಗೊಳಿಸುವ ಬಗ್ಗೆ ಸಹಕರಿಸಬೇಕಾಗಿ ಜಿಲ್ಲಾಧಿಕಾರಿ ಡಾ| ವಿಶಾಲ್‌ ಆರ್‌. ಪ್ರಕಟಣೆಯಲ್ಲಿ ತಿಳಿಸಿರುತ್ತಾರೆ.

 

No Comments

Leave A Comment