Log In
BREAKING NEWS >
ಉತ್ತರ ಪ್ರದೇಶ: ಮನೆಯಲ್ಲಿದ್ದ ಪಟಾಕಿ ಸ್ಫೋಟ, ತಾಯಿ-ಮಗಳ ಸಾವು...

ಕೆಎಫ್ ಸಿ ಆಹಾರದಲ್ಲಿ ಮಾರಕ ರೋಗಾಣು ಪತ್ತೆ

kfc-foodಹೈದರಾಬಾದ್: ಮೊನ್ನೆ ಮೊನ್ನೆಯಷ್ಟೇ ಬೇಯಿಸಿದ ಇಲಿ ಸರ್ವ್ ಮಾಡಿದ್ದ ಕೆಎಫ್ ಸಿ ಯ ಆಹಾರಗಳಲ್ಲಿ ಮಾರಕ ರೋಗಾಣುಗಳು ಪತ್ತೆಯಾಗಿವೆ. ಹೈದರಾಬಾದ್ ನ ಕೆಂಟಕಿ ಫ್ರೈಡ್ ಚಿಕನ್ ಸೆಂಟರ್ ಒಂದರಲ್ಲಿ ಆಹಾರದ  ಸ್ಯಾಂಪಲ್ ನ ಪರೀಕ್ಷೆ ನಡೆಸಿದಾಗ ಈ ರೋಗಾಣಗಳು ಪತ್ತೆಯಾಗಿವೆ. ತೆಲಂಗಾಣ ರಾಜ್ಯ ಆಹಾರ ಪ್ರಯೋಗಾಲಯ ನಡೆಸಿದ ಪರೀಕ್ಷೆಯಲ್ಲಿ ತಿಳಿದು ಬಂದಿದೆ.

ಕೆಎಫ್ ಸಿ ಯಲ್ಲಿ ಕೆಲ ಖಾದ್ಯಗಳಲ್ಲಿ ಮಾರಕ ರೋಗಾಣುಗಳಾದ ಸಾಲ್ಮೋನೆಲ್ಲಾ ಹಾಗೂ ಇ ಕೊಲಿ ಬ್ಯಾಕ್ಟೀರಿಯಾ ಇರುವುದು ಪತ್ತೆಯಾಗಿದೆ. ಈ ಎರಡು ಬ್ಯಾಕ್ಟೀರಿಯಾಗಳು  ಮಾರಕವಾಗಿದ್ದು, ಮಾನವ ದೇಹ ಸೇರಿದರೆ ವ್ಯತಿರಿಕ್ತ ಪರಿಣಾಮ ಬೀರುತ್ತದೆ ಎಂದು ಹೈದರಾ ಬಾದ್ ನ ಆಹಾರ ತಜ್ಞೆ ಎವಿ ಕೃಷ್ಣ ಕುಮಾರಿ ತಿಳಿಸಿದ್ದಾರೆ.

ಏನಿವು ರೋಗಾಣುಗಳು:

ಸಾಲ್ಮೋನೆಲ್ಲಾ ಒಂದು ರೋಗ ಹರಡುವ ಬ್ಯಾಕ್ಟೀರಿಯಾ. ಇದರಿಂದ ಗ್ಯಾಸ್ಟ್ರಿಕ್, ಟೈಪಾಯಿಡ್ ಜ್ವರ ಹರಡಲು ಕಾರಣವಾಗುತ್ತದೆ. ಈ ಬ್ಯಾಕ್ಟೀರಿಯಾ ಬೇಯಿಸದ ಮಾಂಸ, ಸೀಫುಡ್ ಬೇಯಿಸದ ಮೊಟ್ಟೆ ಹಾಗೂ ತೊಳೆಯದ ಹಣ್ಣು ಮತ್ತು ತರಕಾರಿಗಳಲ್ಲಿ ಕಂಡು ಬರುತ್ತದೆ.

ಇ ಕೊಲಿ: ಇದೊಂದು ಮಾರಕ ಬ್ಯಾಕ್ಟೀರಿಯಾ ಆಗಿದೆ. ಇದು ಡಯೇರಿಯಾ, ಅನಿಮಿಯಾ ರೋಗಗಳಿಗೆ ಹರಡುವುದಲ್ಲೇ ಕಿಡ್ನಿ ಫೇಲ್ಯೂರ್ ಗೆ ಕಾರಣವಾಗುತ್ತದೆ. ಈ ಬ್ಯಾಕ್ಟೀರಿಯಾ ಇರುವ ಆಹಾರ ಪದಾರ್ಥಗಳನ್ನು 160 ಡಿಗ್ರಿ ಫ್ಯಾರನ್ ಹೀಟ್ ಉಷ್ಣಾಂಶದಲ್ಲಿ ಬೇಯಿಸಿ ತಿನ್ನಬೇಕು. ಇಲ್ಲದಿದ್ದರೇ ಈ ಬ್ಯಾಕ್ಟೀರಿಯಾ ಸಾಯದೇ ಬದುಕುಳಿದು ರೋಗ ಹರಡುತ್ತದೆ.

ಇದು ಹೆಚ್ಚಾಗಿ ಹಾಲಿನ ಉತ್ಪನ್ನಗಳು, ಹಸಿ ತರಕಾರಿಗಳು ಹಾಗೂ ಫ್ಯಾಶ್ಚರೀಕರಿಸದ ಆಹಾರ ಪದಾರ್ಥಗಳಲ್ಲಿ ಹೆಚ್ಚಾಗಿ ಕಂಡು ಬರುತ್ತದೆ.  ಹೀಗಾಗಿ ಕೆಎಫ್ ಸಿ ಆಹಾರ ಪದಾರ್ಥಗಳಿಗೆ ನಿಷೇಧ ಹೇರಬೇಕೆಂದು ಹೈದರಾಬಾದ್ ನ ಎನ್ ಜಿ ಒ  ಒತ್ತಾಯಿಸಿದೆ.

ಆದರೆ ಕೆಎಫ್ ಸಿ ಅಧಿಕಾರಿಗಳು ಈ ಎಲ್ಲಾ ಆರೋಪಗಳನ್ನು ತಳ್ಳಿ ಹಾಕಿದ್ದಾರೆ. ತಾವು ಉತ್ತಮ ಗುಣಮಟ್ಟದ  ಹೈಜೆನಿಕ್ ಆಹಾರ  ನೀಡುತ್ತಿರುವುದಾಗಿ ಸ್ಪಷ್ಟೀಕರಣ ನೀಡಿದ್ದಾರೆ.

No Comments

Leave A Comment