Log In
BREAKING NEWS >
ಉತ್ತರ ಪ್ರದೇಶ: ಮನೆಯಲ್ಲಿದ್ದ ಪಟಾಕಿ ಸ್ಫೋಟ, ತಾಯಿ-ಮಗಳ ಸಾವು...

ಇಟಲಿ ಪೊಲೀಸರಿಂದ ಪೇಶಾವರ ಸ್ಪೋಟದ ಆರೋಪಿ ಬಂಧನ

peshavar-blastರೋಮ್: ಪಾಕಿಸ್ತಾನದ ಪೇಶಾವರ ಮಾರುಕಟ್ಟೆಯಲ್ಲಿ ಸ್ಪೋಟ ನಡೆಸಿ 134 ಮಂದಿಯನ್ನು ಕೊಂದು ರಕ್ತಪಾತಕ್ಕೆ ಕಾರಣವಾಗಿದ್ದ ಪ್ರಮುಖ ಆರೋಪಿಯನ್ನು ಇಟಲಿ ಪೊಲೀಸರು ರೋಮ್ ನಲ್ಲಿ ಬಂಧಿಸಿದ್ದಾರೆ.

2009 ರಲ್ಲಿ ಪೇಶಾವರ ಮಾರುಕಟ್ಟೆಯಲ್ಲಿ ನಡೆದಿದ್ದ ಬಾಂಬ್ ಸ್ಪೋಟದಲ್ಲಿ ಮಹಿಳೆಯರು, ಮಕ್ಕಳು ದಾರುಣವಾಗಿ ಸಾವನ್ನಪ್ಪಿದ್ದರು. ಈ ಉಗ್ರನನ್ನು ರೋಮ್ ನ ಫ್ಯುಮಿಕಿನೋ ವಿಮಾನ ನಿಲ್ದಾಣದಲ್ಲಿ ಇಟಲಿ ಪೊಲೀಸರು ಬಂಧಿಸಿದ್ದಾರೆ.

ಇನ್ನು ಈತ ಸೂಸೈಡ್ ಬಾಂಬರ್ ಆಗಿದ್ದು, ಇಟಲಿಯಲ್ಲಿ ದೊಡ್ಡ ಮಟ್ಟದ ಸ್ಪೋಟ ನಡೆಸಲು ಸಂಚು ಮಾಡಿದ್ದ ಎಂದು ಭಯೋತ್ಪಾದಕ ನಿಗ್ರಹ ದಳ ಪೊಲೀಸರು ಶಂಕೆ ವ್ಯಕ್ತ ಪಡಿಸಿದ್ದಾರೆ.

ಪೇಶಾವರ ಸ್ಫೋಟ ಸಂಬಂಧ 18 ಮಂದಿಗೆ ಅರೆಸ್ಟ್ ವಾರೆಂಟ್ ಜಾರಿ ಮಾಡಲಾಗಿದೆ. ಇದುವರೆಗೂ 9 ಮಂದಿ ಉಗ್ರರನ್ನು ಬಂಧಿಸಲಾಗಿದೆ. ಇನ್ನು ಇಳಿದ ಉಗ್ರರು ಪಾಕಿಸ್ತಾನದಲ್ಲೇ ಅಡಗಿದ್ದಾರೆ ಎನ್ನಲಾಗಿದೆ.

ಒಸಮಾ ಬಿನ್ ಲಾಡೆನ್ ಇಬ್ಬರು ಮಾಜಿ ಅಂಗರಕ್ಷಕರು ವ್ಯಾಟಿಕನ್ ನಗರದ ಮೇಲೆ ದಾಳಿ ನಡೆಸುವ ಸಾಧ್ಯತೆ ಇದೆ ಎಂದು ಇಟಲಿ ಎಚ್ಚರಿಕೆ ನೀಡಿತ್ತು.

No Comments

Leave A Comment