Log In
BREAKING NEWS >
ಸಮಸ್ತ ಓದುಗರಿಗೆ, ಜಾಹೀರಾತುದಾರರಿಗೆ, ಅಭಿಮಾನಿಗಳಿಗೆ ಕರಾವಳಿ ಕಿರಣ ಡಾಟ್ ಕಾ೦ ಬಳಗದವತಿಯಿ೦ದ ಬೆಳಕಿನ ಹಬ್ಬ ದೀಪಾವಳಿ ಹಬ್ಬದ ಶುಭಾಶಯಗಳು.... ಅಕ್ಟೋಬರ್ 29ರ೦ದು ಬೆಳಿಗ್ಗೆ 4.45ಕ್ಕೆಕಾರ್ತಿಕ ಮಾಸದ ಪ್ರಯುಕ್ತ ಉಡುಪಿಯ ಶ್ರೀಲಕ್ಷ್ಮೀವೆ೦ಕಟೇಶ ದೇವಸ್ಥಾನದಲ್ಲಿ ವಿಶ್ವರೂಪದರ್ಶನ ಕಾರ್ಯಕ್ರಮ ಜರಗಲಿದೆ

ಫ್ರಾನ್ಸ್ ಫ್ಯಾಕ್ಟರಿ ಮೇಲೆ ಉಗ್ರನ ದಾಳಿ ಶಂಕೆ; 1 ಸಾವು, ಹಲವರಿಗೆ ಗಾಯ

Flageಪ್ಯಾರಿಸ್: ಪೂರ್ವ ಫ್ರಾನ್ಸ್ ನಲ್ಲಿ ಗ್ಯಾಸ್ ಫ್ಯಾಕ್ಟರಿಯೊಂದರ ಮೇಲೆ ಇಸ್ಲಾಮಿಕ್ ಬಾವುಟ ಹೊಂದಿದ್ದ ಶಂಕಿತ ಐಸಿಸ್ ಉಗ್ರನೊಬ್ಬ ನಡೆಸಿದ್ದ ದಾಳಿಯಲ್ಲಿ ಒಬ್ಬ ವ್ಯಕ್ತಿ ಸಾವನ್ನಪ್ಪಿ, ಹಲವಾರು ಮಂದಿ ಗಾಯಗೊಂಡಿರುವ ಘಟನೆ ಶುಕ್ರವಾರ ನಡೆದಿರುವುದಾಗಿ ಮಾಧ್ಯಮದ ವರದಿ ತಿಳಿಸಿದೆ.

ಶಂಕಿತ ದಾಳಿಕೋರ ಫ್ಯಾಕ್ಟಿರಿಯೊಳಗೆ ಆಗಮಿಸಿ ಕೆಲವು ಸಣ್ಣ ಸ್ಫೋಟಕದ ಡಿವೈಸ್ ಗಳನ್ನು ಎಸೆದಿರುವುದಾಗಿ ಮೂಲಗಳು ಹೇಳಿವೆ. ಅಲ್ಲದೇ ಶಿರಚ್ಚೇದನ ಮಾಡಿದ ದೇಹವೊಂದು ಫ್ಯಾಕ್ಟರಿಯೊಳಗೆ ಸಿಕ್ಕಿರುವುದಾಗಿ ಮತ್ತೊಂದು ಮೂಲಗಳು ತಿಳಿಸಿದೆ.

ಪ್ರಾಥಮಿಕ ವರದಿ ಪ್ರಕಾರ, ವಾಹನದಲ್ಲಿ ಫ್ಯಾಕ್ಟರಿಯೊಳಗೆ ಸಿಬ್ಬಂದಿಗಳು ಆಗಮಿಸುತ್ತಿದ್ದ ವೇಲೆ ಈ ಸ್ಫೋಟ ನಡೆದಿದೆ. ದಾಳಿಕೋರನನ್ನು ಬಂಧಿಸಲಾಗಿದ್ದು, ಆತನನ್ನು ವಿಚಾರಣೆಗೆ ಒಳಪಡಿಸಲಾಗಿದೆ ಎಂದು ವರದಿ ವಿವರಿಸಿದೆ. ಈತ ಐಸಿಸ್ ಸಂಘಟನೆಗೆ ಸೇರಿದವನೇ, ಉಗ್ರ ಕೃತ್ಯ ನಡೆಸಲು ಕಾರಣ ಏನು ಎಂಬ ಬಗ್ಗೆ ತನಿಖೆಯ ನಂತರವಷ್ಟೇ ವಿವರ ತಿಳಿಯಲಿದೆ ಎಂದು ವರದಿ ಹೇಳಿದೆ.

No Comments

Leave A Comment