Log In
BREAKING NEWS >
ಅಕ್ಟೋಬರ್ 29ರ೦ದು ಬೆಳಿಗ್ಗೆ 4.45ಕ್ಕೆಕಾರ್ತಿಕ ಮಾಸದ ಪ್ರಯುಕ್ತ ಉಡುಪಿಯ ಶ್ರೀಲಕ್ಷ್ಮೀವೆ೦ಕಟೇಶ ದೇವಸ್ಥಾನದಲ್ಲಿ ವಿಶ್ವರೂಪದರ್ಶನ ಕಾರ್ಯಕ್ರಮ ಜರಗಲಿದೆ

ಸಲ್ಮಾನ್ ಗೆ ಮತ್ತೆ ಸಂಕಟ: ಅಂಗರಕ್ಷಕ-ಪ್ರತ್ಯಕ್ಷದರ್ಶಿಯ ಸಾವಿನ ತನಿಖೆಗೆ ಅರ್ಜಿ

Salman-kಮುಂಬೈ: ಪುಣೆ ಮೂಲದ ಮಾನವಹಕ್ಕುಗಳ ಕಾರ್ಯಕರ್ತ, ನಟ ಸಲ್ಮಾನ್ ಖಾನ್  ಅವರ ಅಂಗರಕ್ಷಕ ರವೀಂದ್ರ ಪಾಟೀಲ್ ಅವರ ಸಾವಿನ ಸುತ್ತಲಿರುವ ಸಂದರ್ಭಗಳನ್ನು ತನಿಖೆ ಮಾಡುವಂತೆ ಮನವಿ ಮಾಡಿದ್ದಾರೆ. ಸಲ್ಮಾನ್ ಖಾನ್ ಆರೋಪಿಯಾಗಿರುವ ೨೦೦೨ ‘ಹಿಟ್ ಅಂಡ್ ರನ್’ ಪ್ರಕರಣದಲ್ಲಿ ರವೀಂದ್ರ ಪಾಟೀಲ್ ಪ್ರತ್ಯಕ್ಷದರ್ಶಿ ಕೂಡ.

ರಾಜ್ಯ ಸರ್ಕಾರದ ತನಿಖೆಗೆ ಕೋರಿ ಬಾಂಬೆ ಹೈಕೋರ್ಟ್ ನಲ್ಲಿ ಗುರುವಾರ ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸಲ್ಲಿಸಲಾಗಿದೆ.

ಪ್ರತ್ಯಕ್ಷದರ್ಶಿಗೆ ವಿಚಾರಣೆ ವೇಳೆಯಲ್ಲಿ ಅಪಘಾತದ ಸತ್ಯಾಂಶಗಳನ್ನು ಮುಚ್ಚಿಡಲು ಒತ್ತಡ ಹೇರಿದ ಸಲ್ಮಾನ್ ಖಾನ್ ವಿರುದ್ಧ ಕಾನೂನು ಕ್ರಮ ಜರುಗಿಸಬೇಕೆಂದು ಅರ್ಜಿದಾರ-ಕಾರ್ಯಕರ್ತ ಹೇಮಂತ್ ಪಾಟೀಲ್ ಮನವಿ ಮಾಡಿದ್ದಾರೆ.

ಮುಂದಿನ ವಾರ ನ್ಯಾಯಾಲಯದ ಮುಂದೆ ಈ ಅರ್ಜಿ ವಿಚಾರಣೆಗೆ ಬರಲಿದೆ ಎಂದು ಹೇಮಂತ್ ಪಾಟೀಲ್ ಅವರ ವಕೀಲ ಆರ್ ಎನ್ ಕಚಾವೆ ತಿಳಿಸಿದ್ದಾರೆ.

ವಿಚಾರಣೆ ವೇಳೆಯಲ್ಲಿ ಸಲ್ಮಾನ್ ಖಾನ್ ಮತ್ತು ಇತರರು ಅಂಗರಕ್ಷನ ಮೇಲೆ ಒತ್ತಡ ಹೇರಿದ್ದಾರೆ ಎಂದು ಅರ್ಜಿದಾರ ಆರೋಪಿಸಿದ್ದಾರೆ. ರವೀಂದ್ರ ಪಾಟಿಲ್ ಅಪಘಾತದ ನಿಜಾಂಶಗಳನ್ನು ಹೇಳದಂತೆ ತಡೆಯಲು ಪ್ರಯತ್ನಿಸಲಾಗಿತ್ತು ಎಂದು ಕೂಡ ಆರೋಪಿಸಲಾಗಿದೆ.

ಮಾಧ್ಯಮದ ವರದಿಗಳನ್ನು ಆಧರಿಸಿ, ಆ ಅಂಗರಕ್ಷಕ ಕೆಲವು ದಿನಗಳು ಕಣ್ಮರೆಯಾಗಿ ನಂತರ ನಿಘೂಡವಾಗಿ ಮತ್ತೆ ಪತ್ತೆಯಾಗಿದ್ದ ಆದುದರಿಂದ ಇದನ್ನು ತನಿಖೆ ಮಾಡಬೇಕು ಎಂದು ಅರ್ಜಿಯಲ್ಲಿ ಮನವಿ ಮಾಡಲಾಗಿದೆ.

ನ್ಯಾಯಾಲಯದ ಮುಂದೆ ಹಾಜರಾಗದಿದ್ದಕ್ಕೆ ರವೀಂದ್ರ ಪಾಟಿಲ್ ವಿರುದ್ಧ ಜಾಮೀನು ರಹಿತ ವಾರೆಂಟ್ ಹೊರಡಿಸಲಾಗಿತ್ತು. ಅವರು ಸಲ್ಮಾನ್ ಮತ್ತು ಸಹಚರರಿಗೆ ಹೆದರಿದ್ದರು. ಅವರಿಗೆ ರಕ್ಷಣೆ ನೀಡುವ ಬದಲು ಅವರನ್ನು ಬೆದರಿಸಿ ಜೈಲಿಗೆ ದೂಕಲಾಯಿತು ಎಂದು ಕೂಡ ಆರೋಪಿಸಲಾಗಿದೆ.

ಅಂಗರಕ್ಷಕ ಬಿಡುಗಡೆಯ ನಂತರ ಅವನು ತಲೆಮರೆಸಿಕೊಂಡಿದ್ದ. ನಂತರ ಪೊಲೀಸರು ಮಹಬಲೇಶ್ವರದ ಬೆಟ್ಟದ ತಪ್ಪಲಿನ ಒಂದು ಹೋಟೆಲ್ನಲ್ಲಿ ಅವನನ್ನು ಪತ್ತೆಹಚ್ಚಿದ್ದರು. ಅವನು ಟ್ಯೂಬರ್ ಕ್ಯುಲೋಸಿಸ್ ನಿಂದ ನರಳುತ್ತಿದ್ದಾನೆ ಎಂದು ತಿಳಿಸಲಾಗಿತ್ತು ಮತ್ತು ೨೦೦೭ ಅಕ್ಟೋಬರ್ ೪ ರಂದು ಕೊನೆಯುಸಿರೆಳೆದಿದ್ದ ಎಂದು ಅರ್ಜಿದಾರ ತಿಳಿಸಿದ್ದಾರೆ.

No Comments

Leave A Comment