Log In
BREAKING NEWS >
ಉತ್ತರ ಪ್ರದೇಶ: ಮನೆಯಲ್ಲಿದ್ದ ಪಟಾಕಿ ಸ್ಫೋಟ, ತಾಯಿ-ಮಗಳ ಸಾವು...

ಪವಾಡಸದೃಶ್ಯವಾಗಿ ಬದುಕಿದ ತಾಯಿ-ಮಗು ;ಕೊಲಂಬಿಯಾದಲ್ಲಿ ವಿಮಾನ ಅಪಘಾತ

planeಕೊಲಂಬಿಯಾ: ಕೇಳಿದರೆ ಇದು ಆಶ್ಚರ್ಯವೆನಿಸುತ್ತದೆ, ಆದರೂ ನಿಜ. ವಿಮಾನ ಅಪಘಾತಕ್ಕೀಡಾಗಿ 5 ದಿನಗಳ ನಂತರವೂ ವಾಯವ್ಯ ಕೊಲಂಬಿಯಾದ ದಟ್ಟ ಅರಣ್ಯದಲ್ಲಿ  ತಾಯಿ-ಮಗು ಬದುಕುಳಿದಿರುವ ಘಟನೆ ನಡೆದಿದೆ.

ಹದಿನೆಂಟು ವರ್ಷದ ನೆಲ್ಲಿ ಮುರಿಲ್ಲೋ ಮತ್ತು ಆಕೆಯ ಒಂದೂವರೆ ವರ್ಷದ ಮಗ ಪ್ರಯಾಣಿಸುತ್ತಿದ್ದ ಸೆಸ್ನಾ  ವಿಮಾನ ಕಳೆದ ವಾರ ಕೊಲಂಬಿಯಾದ ಚೋಕೋ ಪ್ರಾಂತ್ಯದಲ್ಲಿ ಉರುಳಿ ಬಿದ್ದಿತ್ತು. ವಿಮಾನ ಅಪಘಾತಕ್ಕೆ ಕಾರಣ ಇನ್ನೂ ತಿಳಿದುಬಂದಿಲ್ಲ ಎಂದು ಬಿಬಿಸಿ ವರದಿ ಮಾಡಿದೆ.

ಅದೊಂದು ದಟ್ಟ ಅರಣ್ಯವಾಗಿದ್ದು, ಅಪಘಾತ ದುರಂತಮಯ. ತಾಯಿ-ಮಗ ಬದುಕುಳಿದಿರುವುದು ಪವಾಡ ಎಂದು ಕೊಲಂಬಿಯಾ ವಿಮಾನ ಸಂಸ್ಥೆಯ ಇನ್ನೊಬ್ಬ ಚಾಲಕ ಕರ್ನಲ್ ಹೆಕ್ಟರ್ ಕರ್ರಸ್ಕಲ್ ತಿಳಿಸಿದ್ದಾರೆ.

ತಾಯಿ ಮುರಿಲ್ಲೋಗೆ ಸಣ್ಣಪುಟ್ಟ ಗಾಯಗಳಾಗಿದ್ದರೆ ಮಗುವಿಗೆ ಯಾವುದೇ ಹಾನಿಯುಂಟಾಗಿಲ್ಲ. ಇಬ್ಬರನ್ನೂ ಆಸ್ಪತ್ರೆಗೆ ಸೇರಿಸಲಾಗಿದೆ.

No Comments

Leave A Comment