Log In
BREAKING NEWS >
ಸಮಸ್ತ ಓದುಗರಿಗೆ, ಜಾಹೀರಾತುದಾರರಿಗೆ, ಅಭಿಮಾನಿಗಳಿಗೆ ಕರಾವಳಿ ಕಿರಣ ಡಾಟ್ ಕಾ೦ ಬಳಗದವತಿಯಿ೦ದ ಬೆಳಕಿನ ಹಬ್ಬ ದೀಪಾವಳಿ ಹಬ್ಬದ ಶುಭಾಶಯಗಳು.... ಅಕ್ಟೋಬರ್ 29ರ೦ದು ಬೆಳಿಗ್ಗೆ 4.45ಕ್ಕೆಕಾರ್ತಿಕ ಮಾಸದ ಪ್ರಯುಕ್ತ ಉಡುಪಿಯ ಶ್ರೀಲಕ್ಷ್ಮೀವೆ೦ಕಟೇಶ ದೇವಸ್ಥಾನದಲ್ಲಿ ವಿಶ್ವರೂಪದರ್ಶನ ಕಾರ್ಯಕ್ರಮ ಜರಗಲಿದೆ

ಹೆಲಿಕಾಪ್ಟರ್‌ ಅಪಘಾತದಿಂದ ಪಾರಾದ ಗಡ್ಕರಿ

Heli-Gadkariಹಾಲ್ಡಿಯಾ, ಪಶ್ಚಿಮ ಬಂಗಾಳ (ಪಿಟಿಐ): ಕೇಂದ್ರ ಸಾರಿಗೆ ಸಚಿವ ನಿತಿನ್‌ ಗಡ್ಕರಿ ಅವರು ಸಂಭವಿಸಲಿದ್ದ ಹೆಲಿಕಾಪ್ಟರ್‌ ಅಪಘಾತದಿಂದ ಕೂದಲೆಳೆಯ ಅಂತರದಲ್ಲಿ ಪಾರಾಗಿದ್ದಾರೆ.

ಕಾರ್ಯಕ್ರಮವೊಂದರಲ್ಲಿ ಪಾಲ್ಗೊಳ್ಳಲು ಗಡ್ಕರಿ ಬುಧವಾರ ಹೆಲಿಕಾಪ್ಟರ್‌ನಲ್ಲಿ ಬಂದಿದ್ದರು. ಹೆಲಿಕಾಪ್ಟರ್ ಲ್ಯಾಂಡಿಂಗ್‌ ವೇಳೆ ಜೋರು ಗಾಳಿಗೆ ನೆಲಹಾಸು ಮೇಲಕ್ಕೆದ್ದು ಹೆಲಿಕಾಪ್ಟರ್‌ನ ರೆಕ್ಕೆಗಳಿಗೆ ಸುತ್ತಿಕೊಂಡಿದೆ. ಆದರೆ, ಹೆಲಿಕಾಪ್ಟರ್‌ ಸುರಕ್ಷಿತವಾಗಿ ಲ್ಯಾಂಡ್‌ ಆಗಿದೆ.

‘ಹೆಲಿಕಾಪ್ಟರ್‌ ಲ್ಯಾಂಡಿಂಗ್‌ ಸಮಯದಲ್ಲಿ ರೆಕ್ಕೆಗೆ ಬಟ್ಟೆ ಸುತ್ತಿಕೊಂಡಿತು. ಆದರೆ, ಅಪಘಾತ ಸಂಭವಿಸಲಿಲ್ಲ. ನಾನು ಸುರಕ್ಷಿತವಾಗಿದ್ದೇನೆ’ ಎಂದು ಗಡ್ಕರಿ ಸುದ್ದಿಗಾರರಿಗೆ ತಿಳಿಸಿದ್ದಾರೆ.

ಹೆಲಿಪ್ಯಾಡ್‌ ಬಳಿ ಇದ್ದ ಶೀಟ್‌ಗಳು ಮತ್ತು ನೆಲಹಾಸುಗಳು ಹೆಲಿಕಾಪ್ಟರ್‌ ಲ್ಯಾಂಡಿಂಗ್‌ ವೇಳೆ ಮೇಲಕ್ಕೆದ್ದಿರುವ ದೃಶ್ಯ ಸುದ್ದಿವಾಹಿನಿಗಳ ಕ್ಯಾಮೆರಾಗಳಲ್ಲಿ ಸೆರೆಯಾಗಿದೆ.

ಸಚಿವರಿದ್ದ ಹೆಲಿಕಾಪ್ಟರ್‌ ಲ್ಯಾಂಡಿಂಗ್‌ ವೇಳೆ ಯಾವ ಅಹಿತಕರ ಘಟನೆಯೂ ಸಂಭವಿಸಿಲ್ಲ ಎಂದು ಪೂರ್ವ ಮಿಡ್ನಾಪುರದ ಎಸ್ಪಿ ಅಲೋಕ್‌ ರಜೋರಿಯಾ ತಿಳಿಸಿದ್ದಾರೆ.

No Comments

Leave A Comment