Log In
BREAKING NEWS >
ಉತ್ತರ ಪ್ರದೇಶ: ಮನೆಯಲ್ಲಿದ್ದ ಪಟಾಕಿ ಸ್ಫೋಟ, ತಾಯಿ-ಮಗಳ ಸಾವು...

ವಿದ್ಯಾರ್ಹತೆ ಬಗ್ಗೆ ತಪ್ಪು ಮಾಹಿತಿ: ಕೇಂದ್ರ ಸಚಿವೆ ಸ್ಮೃತಿ ಇರಾನಿಗೆ ಹಿನ್ನಡೆ

central-minನವದೆಹಲಿ: ಕೇಂದ್ರ ಮಾನವ ಸಂಪನ್ಮೂಲ ಸಚಿವೆ ಸ್ಮೃತಿ ಇರಾನಿಗೆ ಭಾರಿ ಹಿನ್ನೆಡೆಯಾಗಿದೆ. ಲೋಕಸಭೆ ಚುನಾವಣೆ ವೇಳೆ ತಮ್ಮ ಶೈಕ್ಷಣಿಕ ವಿದ್ಯಾರ್ಹತೆ ಬಗ್ಗೆ ತಪ್ಪು ಮಾಹಿತಿ ನೀಡಿದ್ದ ಪ್ರಕರಣ ಸಂಬಂಧ  ಸ್ಮೃತಿ ಇರಾನಿ ವಿರುದ್ಧ ನೀಡಿದ್ದ ದೂರಿನ ವಿಚಾರಣೆ ನಡೆಸಲು ದೆಹಲಿ ನ್ಯಾಯಾಲಯ ಸಮ್ಮತಿಸಿದೆ.

ಕೇಂದ್ರ ಸಚಿವೆ  ಸ್ಮೃತಿ ಇರಾನಿ ವಿರುದ್ದ ಹವ್ಯಾಸಿ ಬರಹಗಾರ ಅಹ್ಮರ್ ಖಾನ್ ದೂರು ದಾಖಲಿಸಿದ್ದರು,  ಲೋಕಸಭೆ ಚುನಾವಣೆ ವೇಳೆ ತಮ್ಮ ಡಿಗ್ರಿ ಬಗ್ಗೆ ಚುನಾವಣಾ ಆಯೋಗಕ್ಕೆ ತಪ್ಪು ಪ್ರಮಾಣ ಪತ್ರ ನೀಡಿದ್ದರು ಎಂದು ದೂರಿನಲ್ಲಿ  ತಿಳಿಸಲಾಗಿತ್ತು.

 ವಿಚಾರಣೆ ಕೈಗೆತ್ತಿಕೊಂಡಿರುವ ದೆಹಲಿ ಪಟಿಯಾಲ ಹೌಸ್ ಕೋರ್ಟ್,  ಆಗಸ್ಟ್ 28 ರೊಳಗೆ ಪ್ರಕರಣಕ್ಕೆ ಸಂಬಂಧಿಸಿದ ಸಾಕ್ಷ್ಯಾಧಾರ ನೀಡುವಂತೆ ಹವ್ಯಾಸಿ ಬರಹಾಗಾರ ಅಹ್ಮರ್ ಖಾನ್ ಗೆ ನ್ಯಾಯಮೂರ್ತಿ ಆಕಾಶ್ ಜೈನ್ ತಿಳಿಸಿದ್ದಾರೆ

No Comments

Leave A Comment