Log In
BREAKING NEWS >
ಸಮಸ್ತ ಓದುಗರಿಗೆ, ಜಾಹೀರಾತುದಾರರಿಗೆ, ಅಭಿಮಾನಿಗಳಿಗೆ ಕರಾವಳಿ ಕಿರಣ ಡಾಟ್ ಕಾ೦ ಬಳಗದವತಿಯಿ೦ದ ಬೆಳಕಿನ ಹಬ್ಬ ದೀಪಾವಳಿ ಹಬ್ಬದ ಶುಭಾಶಯಗಳು.... ಅಕ್ಟೋಬರ್ 29ರ೦ದು ಬೆಳಿಗ್ಗೆ 4.45ಕ್ಕೆಕಾರ್ತಿಕ ಮಾಸದ ಪ್ರಯುಕ್ತ ಉಡುಪಿಯ ಶ್ರೀಲಕ್ಷ್ಮೀವೆ೦ಕಟೇಶ ದೇವಸ್ಥಾನದಲ್ಲಿ ವಿಶ್ವರೂಪದರ್ಶನ ಕಾರ್ಯಕ್ರಮ ಜರಗಲಿದೆ

ಸಂಸದ ನಳಿನ್‌ ಕುಮಾರ್‌ ವಿರುದ್ದ ಸಚಿವ ರಮನಾಥ್‌ ರೈ ಕಿಡಿ

Ramanatha-Raiಮಂಗಳೂರು : ಸಂಸದ ನಳಿನ್‌ ಕುಮಾರ್‌ ಕಟೀಲ್‌ ಅವರು ಕಾಂಗ್ರೆಸ್‌ ಮಾಡಿದ ಸಾಧನೆಗಳನ್ನು ತನ್ನದು ಎಂದು ಸುಳ್ಳು ಪ್ರಚಾರ ಮಾಡಿ ನಂಬರ್‌ 1 ಸಂಸದ ಸ್ಥಾನಕ್ಕೇರಿದ್ದಾರೆ ಎಂದು ದಕ್ಷಿಣ ಕನ್ನಡ ಜಿಲ್ಲಾ ಉಸ್ತುವಾರಿ ಸಚಿವ ರಮನಾಥ್‌ ರೈ ಕಿಡಿ ಕಾರಿದ್ದಾರೆ.

ಸುದ್ದಿಗಾರರರೊಂದಿಗೆ ಮಾತನಾಡಿದ ರೈ ‘ನಳಿನ್‌ ಕುಮಾರ್‌ ಅವರು ಕಾಂಗ್ರೆಸ್‌ ಅವಧಿಯಲ್ಲಿ ಮಾಡಿದ ಸಾಧನೆಗಳನ್ನು ತನ್ನದು ಎಂದು ಬಿಂಬಿಸಿ,ನಾನು ನಂಬರ್‌ ಒನ್‌ ಸಂಸದ ಎಂದು ಸಾರಿ ಹೇಳಿ ತಿರುಗುತ್ತಿದ್ದಾರೆ’ ಎಂದರು.

‘ಸಂಸದರು ಮಂಗಳೂರು ನಗರಕ್ಕೆ ಐಐಟಿ,ಸ್ಮಾರ್ಟ್‌ ಸಿಟಿ ಯೋಜನೆಗಳನ್ನು ತರಲಿ , ವಿಮಾನ ನಿಲ್ದಾಣವನ್ನು ಮೇಲ್ದರ್ಜೆಗೆ ಏರಿಸಲಿ ,ಪರಿಪೂರ್ಣ ಪಾಸ್‌ಪೋರ್ಟ್‌ ಕೇಂದ್ರ ನಿರ್ಮಾಣ ಮಾಡಲಿ ನಂತರ ನಂಬರ್‌ ಒನ್‌ ಎಂದು ಹೇಳಿ ತಿರುಗಾಡಲಿ’ ಎಂದು ಕಿಡಿ ಕಾರಿದರು.

ಈ ವೇಳೆ ಮಂಗಳೂರು ಮಹಾ ನಗರ ಪಾಲಿಕೆಯ ಆಯುಕ್ತೆಯಾಗಿ ಇದೀಗ ವರ್ಗಾವಣೆಯಾಗಿರುವ ಹೆಪ್ಸಿಬಾ ರಾಣಿ ಅವರ ವಿರುದ್ದವೂ ಕಿಡಿ ಕಾರಿದರು.

ಪುರಭವನ ಕಾಮಗಾರಿ ವಿಳಂಭವಾಗಲು ಹೆಪ್ಸಿಬಾ ರಾಣಿ ಅವರೆ ಕಾರಣ ಎಂದು ಆರೋಪಿಸಿದರು.

No Comments

Leave A Comment