Log In
BREAKING NEWS >
ಸಮಸ್ತ ಓದುಗರಿಗೆ, ಜಾಹೀರಾತುದಾರರಿಗೆ, ಅಭಿಮಾನಿಗಳಿಗೆ ಕರಾವಳಿ ಕಿರಣ ಡಾಟ್ ಕಾ೦ ಬಳಗದವತಿಯಿ೦ದ ಬೆಳಕಿನ ಹಬ್ಬ ದೀಪಾವಳಿ ಹಬ್ಬದ ಶುಭಾಶಯಗಳು.... ಅಕ್ಟೋಬರ್ 29ರ೦ದು ಬೆಳಿಗ್ಗೆ 4.45ಕ್ಕೆಕಾರ್ತಿಕ ಮಾಸದ ಪ್ರಯುಕ್ತ ಉಡುಪಿಯ ಶ್ರೀಲಕ್ಷ್ಮೀವೆ೦ಕಟೇಶ ದೇವಸ್ಥಾನದಲ್ಲಿ ವಿಶ್ವರೂಪದರ್ಶನ ಕಾರ್ಯಕ್ರಮ ಜರಗಲಿದೆ

ಅಂತಾರಾಷ್ಟ್ರೀಯ ಯೋಗ ದಿನದಂದೇ, ಚೀನಾದಲ್ಲಿ ಡಾಗ್ ಮೀಟ್ ಫೆಸ್ಟಿವಲ್!

dogಅಂತಾರಾಷ್ಟ್ರೀಯ ಯೋಗ ದಿನವಾದ ಜೂ.21 ರಂದೇ ಚೀನಾದಲ್ಲಿ ಡಾಗ್ ಮೀಟ್ ಫೆಸ್ಟಿವಲ್ ಬರುತ್ತಿರುವುದು ದುರ್ದೈವದ ಸಂಗತಿ. ಸ್ವಾಮಿ ನಿಷ್ಠೆಗೆ ಹೆಸರಾದ ಶ್ವಾನದ ಮಾಂಸವನ್ನು ಸರ್ವಭಕ್ಷಕರಾದ ಚೀನಿಯರು ಭಕ್ಷಿಸುವುದು ಇದೇ ದಿನದಂದು. ಆದರೆ ಇದಕ್ಕೆ ಟ್ವೀಟರ್ ನಲ್ಲಿ ವ್ಯಾಪಕ ವಿರೋಧ ವ್ಯಕ್ತವಾಗಿದೆ.

ಟ್ವೀಟರ್ ನಲ್ಲಿ #StopYuLin2015 ಎಂಬ ಹ್ಯಾಸ್ ಟ್ಯಾಗ್ ಈಗ ಹಾಟ್ ಟ್ರೆಂಡ್ ಆಗಿದೆ. ಟ್ವೀಟರಿಗರು ಚೀನಿ ಭಾಷೆಯಲ್ಲಿ ಸ್ಟಾಪ್ ಯೂಲಿನ್ 2015 ಎಂಬ ಹ್ಯಾಸ್ ಟ್ಯಾಗ್ ಮೂಲಕ ಈ ಅಮಾನೀಯ ಆಚರಣೆಯನ್ನು ನಿಲ್ಲಿಸಿ ಎಂಬ ಸಂದೇಶಗಳು ಹರಿದಾಡುತ್ತೀವೆ.

ಚೀನಿಯರು ನಾಯಿ ಮಾಂಸವನ್ನು ಸೇವಿಸುವುದಕ್ಕೆಂದೆ ಈ ಹಬ್ಬವನ್ನು ಆಚರಿಸುತ್ತಾರೆ. ಇದಕ್ಕಾಗಿ ಪ್ರತಿವರ್ಷ ಏನಿಲ್ಲವೆಂದರೂ 10 ಸಾವಿರ ನಾಯಿಗಳ ಮಾರಣ ಹೋಮ ನಡೆಸುತ್ತದೆ. ಆದರೆ ಈ ಬಾರಿ ಚೀನಿಯರೇ ಇದಕ್ಕೆ ವಿರೋಧ ವ್ಯಕ್ತಪಡಿಸಿದ್ದು, ನಾಯಿ ಮಾಂಸದ ಬಾಡೂಟದ ಉತ್ಸವ ಬೇಡ ಎಂಬ ಕೂಗು ಜೋರಾಗಿದೆ.

ಈ ಬಾರಿ ನಾಯಿಗಳ ಹನನ ತಡೆಯಲು ಚೀನಾದ ಸಾಮಾಜಿಕ ಜಾಲತಾಣವಾದ ವೈಬೊ ಸಹಕರಿಸುತ್ತಿದೆ. ಸುಮಾರು 23 ಲಕ್ಷ ಜನರು ಈ ಉತ್ಸವದ ಕುರಿತ ತಮ್ಮ ವಿರೋಧವನ್ನು ಸಂದೇಶಗಳ ಮೂಲಕ ವೈಬೊದಲ್ಲಿ ಹಂಚಿಕೊಂಡಿದ್ದಾರೆ.

ಚೀನಾದ ಪ್ರಖ್ಯಾತ ಇಂಟರ್ನೆಟ್ ಸರ್ಚ್ ಎಂಜಿನ್ ಬೈದು ನಲ್ಲಿ ನಾಯಿ ಮಾಂಸವನ್ನು ಆನ್ ನೈಲ್ ನಲ್ಲಿ ಹುಡುಕುವವರ ಸಂಖ್ಯೆ ಕಳೆದ ವರ್ಷಕ್ಕಿಂತಲೂ ಈ ವರ್ಷ ಶೇ. 38ರಷ್ಟು ಕಡಿಮೆಯಾಗಿದೆಯಂತೆ. ಹಾಗೆಯೇ ನಾಯಿ ಬಾಡೂಟದ ಉತ್ಸವ ಎಂದು ಸರ್ಚ್ ಮಾಡುವವರ ಸಂಖ್ಯೆ ಶೇ. 58ರಷ್ಟು ಕಡಿಮೆಯಾಗಿದೆ ಎಂದು ಅಂಕಿಅಂಶಗಳು ಹೇಳುತ್ತಿವೆ

No Comments

Leave A Comment