Log In
BREAKING NEWS >
ಸಮಸ್ತ ಓದುಗರಿಗೆ, ಜಾಹೀರಾತುದಾರರಿಗೆ, ಅಭಿಮಾನಿಗಳಿಗೆ ಕರಾವಳಿ ಕಿರಣ ಡಾಟ್ ಕಾ೦ ಬಳಗದವತಿಯಿ೦ದ ಬೆಳಕಿನ ಹಬ್ಬ ದೀಪಾವಳಿ ಹಬ್ಬದ ಶುಭಾಶಯಗಳು.... ಅಕ್ಟೋಬರ್ 29ರ೦ದು ಬೆಳಿಗ್ಗೆ 4.45ಕ್ಕೆಕಾರ್ತಿಕ ಮಾಸದ ಪ್ರಯುಕ್ತ ಉಡುಪಿಯ ಶ್ರೀಲಕ್ಷ್ಮೀವೆ೦ಕಟೇಶ ದೇವಸ್ಥಾನದಲ್ಲಿ ವಿಶ್ವರೂಪದರ್ಶನ ಕಾರ್ಯಕ್ರಮ ಜರಗಲಿದೆ

ಜಯಂಟ್ಸ್ ವತಿಯಿಂದ ವಿಶ್ವ ಯೋಗ ದಿನಾಚರಣೆ ಮತ್ತು ಯೋಗ ಶಿಕ್ಷಕ ದಂಪತಿಗಳಿಗೆ ಗೌರವಾರ್ಪಣೆ

DSC_4757ಉಡುಪಿ ಜಯಂಟ್ಸ್ ಗ್ರೂಪ್ ಮತ್ತು ಶ್ರೀಕೃಷ್ಣ ಯೋಗ ಕೇಂದ್ರ, ಬ್ರಹ್ಮಗಿರಿ ಉಡುಪಿ ಇವರ ಜಂಟಿ ಆಶ್ರಯದಲ್ಲಿ ಉಡುಪಿಯ ಬ್ರಹ್ಮಗಿರಿ ಲಯನ್ಸ್ ಭವನದಲ್ಲಿ ವಿಶ್ವ ಯೋಗ ದಿನಾಚರಣೆ ಕಾರ್ಯಕ್ರಮ ಜರುಗಿತು.

ಸಮಾರಂಭದಲ್ಲಿ ಮುಖ್ಯ ಅತಿಥಿಯಾಗಿ ಡಾ. ಚೆನ್ನಕೇಶವ ರಾವ್, ಆರ್ಥೋ ಸ್ಪೆಷಲಿಸ್ಟ್, ಜಯಂಟ್ಸ್ ಗ್ರೂಪ್‌ನ ಅಧ್ಯಕ್ಷರಾದ ವಿಶ್ವನಾಥ ಶೆಣೈ, ಜಯಂಟ್ಸ್ ವಲಯ ನಿರ್ದೇಶಕರಾದ ದೇವದಾಸ್ ಕಾಮತ್, ಜಯಂಟ್ಸ್ ಕೇಂದ್ರ ಸಮಿತಿ ಸದಸ್ಯರಾದ ದಿನಕರ ಅಮೀನ್, ಡಾ. ನವೀನ್ ಬಲ್ಲಾಳ್, ಶ್ರೀಮತಿ ಅಖಿಲಾ ಶೆಟ್ಟಿ, ಯೋಗ ಶಿಕ್ಷಕಿ ಮತ್ತು ಅಮಿತ್ ಶೆಟ್ಟಿ, ಯೋಗ ಶಿಕ್ಷಕರು ಕಾರ್ಯಕ್ರಮದಲ್ಲಿ ನೂರಾರು ಯೋಗಾಭ್ಯಾಸದ ಶಿಬಿರಾರ್ಥಿಗಳು ಭಾಗವಹಿಸಿದ್ದರು.DSC_4767

ಕಳೆದ ಸುಮಾರು ೧೫ ವರ್ಷಗಳಿಂದ ನಿರಂತರ ಪ್ರತಿನಿತ್ಯ ಯೋಗ ತರಬೇತಿಯನ್ನು ಉಚಿತವಾಗಿ ನೀಡುತ್ತಿರುವ ಯೋಗ ಗುರುಗಳಾದ ಶ್ರೀಮತಿ ಅಖಿಲಾ ಶೆಟ್ಟಿ ಮತ್ತು ಶ್ರೀ ಅಮಿತ್ ಶೆಟ್ಟಿ ದಂಪತಿಗಳನ್ನು ಜಯಂಟ್ಸ್ ವತಿಯಿಂದ ಅಭಿನಂದಿಸಲಾಯಿತು.DSC_4799

ಕಾರ್ಯಕ್ರಮದಲ್ಲಿ ಮುಂಜಾನೆ 5.45 ರಿಂದ 6.45ರ ವರೆಗೆ ವಿವಿಧ ಬಗೆಯ ಯೋಗಾಸನ ಪ್ರಕಾರಗಳನ್ನು ಪ್ರದರ್ಶಿಸಲಾಯಿತು.DSC_4804
ಮತಿ ವಿನೋದ ಹೆಗ್ಡೆ ಸ್ವಾಗತಿಸಿ, ಶ್ರೀಮತಿ ವೀಣಾ ಬಲ್ಲಾಳ್‌ರವರು ವಂದನಾರ್ಪಣೆಗೈದರು. ರಾಜರಾಮ್ ಶೆಟ್ಟಿ ಕಾರ್ಯಕ್ರಮ ನಿರೂಪಿಸಿದರು. ಸಮಾರಂಭದಲ್ಲಿ ನೂರಾ‌ಋ ಯೋಗದ ಅಭಿಮಾನಿಗಳು ಹಾಗೂ ವಿದ್ಯಾರ್ಥಿಗಳು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.

No Comments

Leave A Comment