Log In
BREAKING NEWS >
ಉತ್ತರ ಪ್ರದೇಶ: ಮನೆಯಲ್ಲಿದ್ದ ಪಟಾಕಿ ಸ್ಫೋಟ, ತಾಯಿ-ಮಗಳ ಸಾವು...

ಪಠ್ಯ ಪುಸ್ತಕದಲ್ಲಿ ಯೋಗಕ್ಕೆ ಕ್ರಮ: ಸಿಎಂ ಸಿದ್ದರಾಮಯ್ಯ

yoga-bengaluruಬೆಂಗಳೂರು: ರಾಜ್ಯದಲ್ಲಿ ಉನ್ನತ ಶಿಕ್ಷಣದ ಭಾಗವಾಗಿರುವ ಯೋಗವನ್ನು ಪ್ರಾಥಮಿಕ ಮತ್ತು ಮಾಧ್ಯಮಿಕ ಶಿಕ್ಷಣದ ಪಠ್ಯದಲ್ಲಿ ಅಳವಡಿಸುವ ಬಗ್ಗೆ ಚಿಂತನೆ ನಡೆಸುತ್ತಿರುವುದಾಗಿ ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದ್ದಾರೆ.

ಆಯುಷ್ ಇಲಾಖೆ ವಿಧಾನಸೌಧದ ಅಂಗಳದಲ್ಲಿ ಭಾನುವಾರ ಆಯೋಜಿಸಿದ್ದ ವಿಶ್ವದ ಮೊಟ್ಟ ಮೊದಲ ಅಂತರಾಷ್ಟ್ರೀಯ ಯೋಗ ದಿನದಲ್ಲಿ ಭಾಗವಹಿಸಿ ಅವರು ಮಾತನಾಡಿದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು, ರಾಜ್ಯದಲ್ಲಿ ಉನ್ನತ ಶಿಕ್ಷಣದ ಭಾಗವಾಗಿರುವ ಯೋಗ ವಿಷಯವನ್ನು ಪ್ರಾಥಮಿಕ ಮತ್ತು ಮಾಧ್ಯಮಿಕ ಶಿಕ್ಷಣದ ಪಠ್ಯದಲ್ಲಿ ಅಳವಡಿಸುವ ಬಗ್ಗೆ ಚಿಂತನೆ ನಡೆಸುತ್ತಿರುವುದಾಗಿ ಸಿಎಂ ಹೇಳಿದರು.

“ತಾವು ಈ ಹಿಂದೆ ಯೋಗಾಭ್ಯಾಸ ಕಲಿತಿದ್ದು, ಕೆಲದಿನಗಳವರೆಗೆ ಅಭ್ಯಾಸ ಮಾಡಿ ನಿಲ್ಲಿಸುತ್ತಿದ್ದೆ. ಬಳಿಕ ಹೀಗೆ ಮಾಡುವುದರಿಂದ ಪ್ರಯೋಜನವಾಗುವುದಿಲ್ಲ. ಪ್ರತಿನಿತ್ಯ ಮಾಡಿದರೆ ಆರೋಗ್ಯ ಕಾಪಾಡಿಕೊಳ್ಳಲು ಸಾಧ್ಯವೆಂಬ ಸತ್ಯದ ಅರಿವಾಯಿತು. ಹೀಗಾಗಿ ಕಳೆದ 8 ತಿಂಗಳಿನಿಂದ ಪ್ರತಿನಿತ್ಯ ಯೋಗಾಭ್ಯಾಸ ಮಾಡುತ್ತಿದ್ದೇನೆ ಎಂದು ಸಿದ್ದರಾಮಯ್ಯ ತಿಳಿಸಿದರು.

ಪ್ರಧಾನಿ ಮೋದಿಗೆ ಸಿಎಂ ಮೆಚ್ಚುಗೆ

ಇದೇ ವೇಳೆ ವಿಶ್ವ ಯೋಗ ದಿನಾಚರಣೆಗೆ ಸಂಬಂಧಿಸಿದಂತೆ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಮೆಚ್ಚುಗೆ ಸೂಚಿಸಿದ ಸಿಎಂ ಸಿದ್ದರಾಮಯ್ಯ ಅವರು, ಪ್ರಧಾನಿ ನರೇಂದ್ರ ಮೋದಿ ಅವರ ವಿಶೇಷ ಆಸಕ್ತಿ ತೋರಿದ್ದರಿಂದಲೇ ವಿಶ್ವಸಂಸ್ಥೆ ಜೂ.21 ಅನ್ನು ಅಂತಾರಾಷ್ಟ್ರೀಯ ಯೋಗ ದಿನವಾಗಿ ಘೊಷಣೆ ಮಾಡಿದೆ ಎಂದು ಅವರು ಮೆಚ್ಚುಗೆ ವ್ಯಕ್ತಪಡಿಸಿದರು. ಇನ್ನು ಕೇಂದ್ರ ರಾಸಾಯನಿಕ ಮತ್ತು ರಸಗೊಬ್ಬರ ಸಚಿವ ಅನಂತಕುಮಾರ್ ಅವರು ಮಾತನಾಡಿ, ಮಧುಮೇಹ ಖಾಯಿಲೆಯ ರಾಜಧಾನಿಯಾಗಿ ಮಾರ್ಪಡುತ್ತಿರುವ ಭಾರತೀಯರ ಆರೋಗ್ಯ ಕಾಪಾಡಲು ಯೋಗಾಭ್ಯಾಸ ದಿವ್ಯೌಷಧ ಎಂದು ಅಭಿಪ್ರಾಯಪಟ್ಟರು.

ಕಾರ್ಯಕ್ರಮದಲ್ಲಿ ಸುಮಾರು 2000 ಎನ್​ಸಿಸಿ ಕೆಡೆಟ್​ಗಳು 45 ನಿಮಿಷಗಳ ಕಾಲ ಯೋಗಾಭ್ಯಾಸ ಮಾಡಿದರು. ಯೋಗ ಮಾಡಲು ಸ್ಥಳಾವಕಾಶದ ಕೊರತೆಯಿಂದಾಗಿ ಯೋಗಾಸನ ಮಾಡಲು ಸಾಧ್ಯವಾಗದೆ ಸಿಎಂ ಸಿದ್ದರಾಮಯ್ಯ, ಕೇಂದ್ರ ಸಚಿವ ಅನಂತ್​ ಕುಮಾರ್, ಸಚಿವರಾದ ಯು.ಟಿ. ಖಾದರ್, ಆರ್.ವಿ. ದೇಶಪಾಂಡೆ, ಉಮಾಶ್ರೀ, ಶಾಸಕರಾದ ಅರುಣಾ ಶಹಾಪುರ ಮತ್ತು ತಾರಾ ಅನುರಾಧಅವರು ಕುಳಿತಲ್ಲೇ ಅಲೋಮ, ವಿಲೋಮ ಕ್ರಿಯೆ ಮಾಡಿದರು.

No Comments

Leave A Comment