Log In
BREAKING NEWS >
ಅಕ್ಟೋಬರ್ 29ರ೦ದು ಬೆಳಿಗ್ಗೆ 4.45ಕ್ಕೆಕಾರ್ತಿಕ ಮಾಸದ ಪ್ರಯುಕ್ತ ಉಡುಪಿಯ ಶ್ರೀಲಕ್ಷ್ಮೀವೆ೦ಕಟೇಶ ದೇವಸ್ಥಾನದಲ್ಲಿ ವಿಶ್ವರೂಪದರ್ಶನ ಕಾರ್ಯಕ್ರಮ ಜರಗಲಿದೆ

ಕೊನೆಗೂ 10 ವರ್ಷ ಬೆಡ್ ರೂಂನಲ್ಲಿ ಕೂಡಿಹಾಕಿದ್ದ ಯುವಕನ ರಕ್ಷಣೆ

Youthಮುಂಬೈ: ಕಳೆದ ಹತ್ತು ವರ್ಷಗಳಿಂದ ಎರಡನೇ ಮಹಡಿಯ ಪ್ಲ್ಯಾಟ್ ನ ಬೆಡ್ ರೂಂವೊಂದರಲ್ಲಿ ಕೂಡಿ ಹಾಕಿದ್ದ ಯುವಕ (22ವರ್ಷ)ನನ್ನು ಕೊನೆಗೂ ನವಿ ಮುಂಬೈ ಪೊಲೀಸ್ ಮತ್ತು ಸಾಮಾಜಿಕ ಕಾರ್ಯಕರ್ತರು ರಕ್ಷಿಸಿದ ಘಟನೆ ಶುಕ್ರವಾರ ಮುಂಬೈನಲ್ಲಿ ನಡೆದಿದೆ.

ದ ಇಂಡಿಯನ್ ಎಕ್ಸ್ ಪ್ರೆಸ್ ವರದಿಯಂತೆ, ರಾಜ್ ಪಟೇಲ್ ಎಂಬ ಯುವಕನನ್ನು ಬರೇ ನೂರು ಚದರ ಅಡಿ ಕೋಣೆಯಲ್ಲಿ ಕೂಡಿ ಹಾಕಿದ್ದರು. ಆತನ ಕುಟುಂಬದ ಸದಸ್ಯರು ಪ್ಲ್ಯಾಟ್ ನ ಕೆಳ ಅಂತಸ್ತಿನಲ್ಲಿ ವಾಸಿವಾಗಿದ್ದರು. ಬೆಲಾಪುರ್ ಪ್ರದೇಶದ ಸಂಜೀವನಿ ಬಿಲ್ಡಿಂಗ್ ನಲ್ಲಿ ಈ ಘಟನೆ ನಡೆದಿದೆ.

ರಾಜ್ ತಂದೆ ಉದ್ಯಮಿ ಆತನಿಗೆ ರಾಜ್ ಸೇರಿ ಹತ್ತು ಮಂದಿ ಮಕ್ಕಳು. ಈ ಯುವಕನನ್ನು ರಕ್ಷಿಸಲು ನೆರವು ನೀಡಿದ ದಾಮಿನಿ ಸೇನಾದ ಅಧ್ಯಕ್ಷ ಶಾರದಾ ಶಾ ಹೇಳುವಂತೆ, ಈ ಬಿಲ್ಡಿಂಗ್ ನಲ್ಲಿ ರಾಜ್ ಕುಟುಂಬ ಹೊರತುಪಡಿಸಿ, ಉಳಿದೆಲ್ಲಾ ಬಾಡಿಗೆದಾರರು ಬೇರೆಡೆಗೆ ಹೋಗಿದ್ದರು. ಆದರೆ ವ್ಯಾಜ್ಯದ ವಿಷಯದಿಂದಾಗಿ ಈ ಕುಟುಂಬ ಮಾತ್ರ ವಾಸವನ್ನು ಮುಂದುವರಿಸಿತ್ತು.


ಆದರೆ ಅವರು ವಾಸಿಸುವ ಕೋಣೆಗೆ ನೀರಾಗಲಿ, ವಿದ್ಯುತ್ ಸರಬರಾಜು ಇರಲಿಲ್ಲವಾಗಿತ್ತಂತೆ. ಅಷ್ಟೇ ಅಲ್ಲ ಯುವಕನ ಮಲ ತಾಯಿ, ಮಲ ಸಹೋದರಿಯರಿಗೆ ಆತ ಬೇರೆಯಾಗಿಯೇ ಇರಬೇಕೆಂಬ ಹಠ ಎಂದು ಶಾ ಹೇಳಿರುವುದಾಗಿ ವರದಿ ವಿವರಿಸಿದೆ.

ಸಾಮಾಜಿಕ ಕಾರ್ಯಕರ್ತರು, ಪೊಲೀಸರು ರಕ್ಷಿಸಲು ಹೋದ ಸಂದರ್ಭದಲ್ಲಿ, ಆತನನ್ನು 2ನೇ ಅಂತಸ್ತಿನಲ್ಲಿ ಚಿಕ್ಕ ಕೋಣೆಯಲ್ಲಿ ಕೂಡಿ ಹಾಕಿದ್ದರು. ಲಿಫ್ಟ್ ಪಕ್ಕದಲ್ಲಿದ್ದ ಜಾಗ ಮಲ, ಮೂತ್ರಗಳಿಂದ ತುಂಬಿ ಹೋಗಿ ಗಬ್ಬು ನಾರುತ್ತಿತ್ತು. ಇಡೀ ರೂಂನೊಳಗೆ ದುರ್ನಾತ. ರಾಜ್ ಗೆ ಪೇಪರ್ ನಲ್ಲಿ ಊಟ ಕೊಡುತ್ತಿದ್ದರು ಎಂದು ಶಾ ತಿಳಿಸಿದ್ದಾರೆ.

ಯುವಕ ರಾಜ್ ಮೈಮೇಲೆ ಬಟ್ಟೆ ಇಲ್ಲದೇ ನಗ್ನವಾಗಿದ್ದು, ರೂಂನಿಂದ ಹೊರಬರುವಾಗ ಗೋಣಿ ಚೀಲವನ್ನು ಸೊಂಟದ ಸುತ್ತ ಅಡ್ಡಲಾಗಿ ಹಿಡಿದುಕೊಂಡಿದ್ದ ಎಂದು ವರದಿ ಹೇಳಿದೆ. ಹಸಿವಿನಿಂದ ಕಂಗೆಟ್ಟಿದ್ದ ರಾಜ್, ತಿನ್ನಲು ಏನಾದ್ರು ಕೊಡಿ ಎಂದು ಕೇಳಿದ್ದ ಬಳಿಕ ಆತನಿಗೆ ಸಾಮಾಜಿಕ ಕಾರ್ಯಕರ್ತರು ತಿನ್ನಲು 2 ವಡಾ ಪಾವ್ ಕೊಟ್ಟಿದ್ದರು. ಆತನನ್ನು ಕರೆದೊಯ್ಯುವಾಗ ಕುಟುಂಬದ ಸದಸ್ಯರು ಯಾವ ಆಕ್ಷೇಪವನ್ನೂ ವ್ಯಕ್ತಪಡಿಸಿಲ್ಲ ಎಂದು ವರದಿ ಹೇಳಿದೆ.

ರಾಜ್ ಕಳೆದ ಹತ್ತು ವರ್ಷಗಳಿಂದ ಸ್ನಾನ ಮಾಡಿಲ್ಲ. ಕೃಶವಾದ ದೇಹದಿಂದ ನಿಶ್ಯಕ್ತಗೊಂಡಿದ್ದು, ಆತನನ್ನು ಡಿವೈ ಪಾಟೀಲ್ ಆಸ್ಪತ್ರೆಗೆ ದಾಖಲಿಸಲಾಗಿದೆ.

ಈ ಘಟನೆಗೆ ಸಂಬಂಧಿಸಿದಂತೆ ಕುಟುಂಬದ ಸದಸ್ಯರ ಮೇಲೆ ಯಾವುದೇ ಆರೋಪ ದಾಖಲಿಸುವುದಿಲ್ಲ. ಆದರೆ ರಾಜ್ ಮತ್ತು ಆತನ ಕುಟುಂಬದವರಿಗೆ ಮಾನಸಿಕ ಚಿಕಿತ್ಸೆಯ ಅಗತ್ಯವಿದೆ. ಕುಟುಂಬದ ಬಗ್ಗೆ ಏನು ಕ್ರಮ ಕೈಗೊಳ್ಳಬೇಕೆಂದು ಕೂಡಲೇ ನಿರ್ಧಾರ ತೆಗೆದುಕೊಳ್ಳುವುದಾಗಿ ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.

 

No Comments

Leave A Comment